ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೨ ಶ್ರೀಮದ್ಭಾಗವತವು [ಅಧ್ಯಾ, ೭೩. ವನ್ನು ಉಭಯಪಕ್ಷದವರೂ ಕೊಂಡಾಡುತಿದ್ದರು. ಆದರೇನು ? ಆಗ ಮಯ ನಿರ್ಮಿತವಾದ ಆ ಸೌಭವೆಂಬ ವಿಮಾನದ ಮಾಯೆಯು, ಚಿತ್ರವಿಚಿತ್ರವಾಗಿ ಕಾಣಿಸುತಿತ್ತು. ಒಮ್ಮೆ ಆ ವಿಮಾನವು ಅನೇಕರೂಪಗಳಿಂದ ಕಾಣುವುದು. ಮತ್ತೊಮ್ಮೆ ಒಂದೇ ರೂಪದಲ್ಲಿ ನಿಲ್ಲುವುದು, ಒಮ್ಮೆ ಹಾಗೆಯೇ ಆಗೋ ಚರವಾಗುವುದು. ಆ ವಿಮಾನವು ಎಲ್ಲಿ, ಯಾವ ರೂಪದಿಂದಿರುವುದೆಂದು ಊಹಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲದಂತಾಯಿತು. ಒಮ್ಮೆ ಭೂಮಿ ಯಲ್ಲಿದ್ದಂತೆ ಕಾಣುವುದು, ಒಡನೆಯೇ ಆ೦ತರಿಕ್ಷದಲ್ಲಿ ಗೋಚರಿಸುವುದು. ಮತ್ತೊಮ್ಮೆ ಪತತಿಖರದಲ್ಲಿದ್ದಂತೆ ಕಾಣುವುದು, ಮತ್ತೊಮ್ಮೆ ನೀರಿ ನಲ್ಲಿ ಮುಳುಗಿಹೋದಂತೆ ತೋರುವುದು, ಇನ್ನೊಮ್ಮೆ ಅಲಾತಚಕ್ರದಂತೆ ಆಕಾಶದಲ್ಲಿ ಗಿರಗಿರನೆ ಸುತ್ತುತ್ತಿರುವುದು, ಹೀಗೆ ಆ ಸೌಭವಿಮಾನವು ನಿಂತಲ್ಲಿ ನಿಲ್ಲ ನಾನಾಕಡೆ ಯಲ್ಲಿ ಗೋಚರಿಸುತಿತ್ತು. ಆದರೆ ಆ ವಿಮಾನ ದೊಡನೆಯೂ, ಸೈನಿಕರೊಡನೆಯೂ ಸಾಲ್ವನು ಯಾವ ಯಾವ ಕಡೆಯಲ್ಲಿ ಕಣ್ಣಿಗೆ ಗೋಚರಿಸುತಿದ್ದನೋ, ಆಯಾ ಕಡೆಗೆ ಯಾದವರು ಬಾಣಗಳನ್ನು ಎಡೆಬಿಡದೆ ಪ್ರಯೋಗಿಸುತ್ತ ಬಂದರು. ಆಗ್ಲಿ ಸೂಕ್ಯರಂತೆ ತೀಕ್ಷ ವಾಗಿಯೂ ವಿಷಸರ್ಪದಂತೆ ಕೂರವಾಗಿಯೂ ಇರುವ ಯಾದವರ ಒeಗಳಿಂದ ಸಾಲ್ಬನ ವಿಮಾನವೂ, ಅವನ ಸೇನಾಬಲವೂ ಕ್ರಮಕ್ರಮವಾಗಿ ಭಿನ್ನ ಭಿನ್ನ ವಾಗುತ್ತ ಬಂದುವು. ಆಗ ನಾನು ಹಿಂದು ಮುಂದುತೋರದೆ # ನಾದನು. ಇದರಂತೆಯೇ ಅತ್ತಲಾಗಿ ಸಾಲ್ವನ ಕಡೆಯ ಸೇನಾಧಿಪತಿಗಳೂ, ಯಾದವರಮೇಲೆ ಎಡೆಬಿಡದೆ ಅನೇಕಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿದರು. ಅದರಿಂದ ಯಾದವವೀರರು ಬಹಳ ಬಾಧೆಪಟ್ಟಿದ್ದರೂ, ಮಹಾವೀರ ರಾದುದರಿಂದ, ತಾವಿದ್ದ ಸ್ಥಳವನ್ನು ಬಿಟ್ಟು ಕದಲದೆ, ಧೈಯ್ಯದಿಂದ ಇದಿರಿ ಸಿನಿಂತಿದ್ದರು. ಇಷ್ಟರಲ್ಲಿ ಸಾಲ್ವನ ಮಂತ್ರಿಯಾದ ದ್ಯುಮಂತನು, ಪ್ರದ್ಯು ಮನು ತನ್ನ ಮೇಲೆ ಪ್ರಯೋಗಿಸಿದ ಬಾಣಗಳಿಂದ ಬಹಳವಾಗಿ ನೊಂದು, ಆ ಕೋಪವನ್ನು ತಡೆಯಲಾರದೆ, ಒಂದಾನೊಂದು ಉಕ್ಕಿನ ಗದೆಯನ್ನು ಹಿಡಿ ದು ಮುಂದೆ ಬಂದು, ಪ್ರದ್ಯುಮ್ ನನ್ನು ಪ್ರಹರಿಸಿ ಸಿಂಹನಾದವನ್ನು ಮಾಡಿ ದನು. ಆ ಗದಾಪ್ರಹಾರವು ಪ್ರದ್ಯುಮ್ಮನ ಎದೆಗೆ ಬಿದ್ದುದರಿಂದ, ಅವನಿಗೆ £ಣ