ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೭೬.] ದಶಮಸ್ಕಂಧವು. ೨೨೮೩ ಹಾಗೆಯೇ ಮೂರ್ಛಬರುವಂತಾಯಿತು, ಆಗ ಅವನಿಗೆ ಸಾರಥಿಯಾಗಿದ್ದ ದಾರುಕನ ಮಗನು,ಯುದ್ಧಧರ್ಮವನ್ನು ತಿಳಿದವನಾದುದರಿಂದ, ಮೂರ್ಛಿತ ನಾಗಿದ್ದ ಆ ಪ್ರದ್ಯುಮ್ನ ನನ್ನು ರಣರಂಗದಿಂದ ಹೊರಕ್ಕೆ ತಂದುಬಿಟ್ಟನು. ಆಮೇಲೆ ಮುಹೂರ್ತದೊಳಗಾಗಿಯೇ ಪ್ರದ್ಯುಮ್ನ ನಿಗೆ ಮೂರ್ಛತಿಳಿಯಲು, ಆತನು ತನ್ನ ಸಾರಥಿಯನ್ನು ನೋಡಿ « ಆಹಾ ! ಸೂತಾ ! ಎಂತಹ ತಪ್ಪ ಕೆಲಸವನ್ನು ಮಾಡಿದೆ? ಗಣರಂಗದಿಂದ ನನ್ನನ್ನು ಹಿಮ್ಮೆಟ್ಟಿಸಿ ಕರೆತಂದೆ ಯಲ್ಲವೆ ? ನೀನು ಹೀಗೆ ಮಾಡಬಾರದಾಗಿತ್ತು! ನಮ್ಮ ಯಾದವಕುಲದಲ್ಲಿ ಹೀಗೆ ಯುದ್ಧರಂಗದಿಂದ ಹಿಂಜರಿದು ಬಂದವನನ್ನು ನಾನು ಇದುವರೆಗೂ ಕೇಳಿದುದಿಲ್ಲ, ಕೇವಲಭೀರುಸ್ವಭಾವವುಳ್ಳ ನಿನ್ನನ್ನು ಸಾರಥಿಯಾಗಿಟ್ಟು ಕೊಂಡುದರಿಂದ, ನಾನುಮಾತ್ರ ಇಂತಹ ಅಪಯಶಸ್ಸಿಗೆ ಗುರಿಯಾಗಬೇಕಾ ಯಿತು. ಆಹಾ ! ಸೂತಾ ! ನನ್ನ ತಂದೆಗಳಾದ ರಾಮಕೃಷ್ಣರನ್ನು ನಾನು ನೋಡುವುದಕ್ಕೆ ಹೋದಾಗ, ಅವರು ನನ್ನನ್ನು ಕುರಿತು ಕ್ಷತ್ರಿಯಧರ್ಮ ವನ್ನು ಮೀರಿ ಯುದ್ಧದಿಂದ ನೀನು ಪಲಾಯನಮಾಡಿ ಬಂದವನಲ್ಲವೆ?”ಎಂದು ಕೇಳಿದರೆ, ಅವರಿಗೆ ನಾನು ಏನುತ್ತರವನ್ನು ಕೊಡಲಿ!ನನ್ನ ಸಹೋದರಪಟ್ಟಿ ಯರೂ ಕೂಡ ನನ್ನ ಸ್ಥಿತಿಯನ್ನು ಕೇಳಿ ಹಾಸ್ಯಮಾಡದಿರುವರೆ? ಲೋಕದವ ರೆಲ್ಲರೂ ನನ್ನನ್ನು ನಿಂದಿಸದೆ ಬಿಡುವರೆ? ಆಹಾ .. ನನ್ನನ್ನು ಎಂತಹ ಆಪವಾ ದಕ್ಕೆ ಗುರಿಮಾಡಿದೆ ” ಎಂದನು. ಅದಕ್ಯಾ ಸಾರಥಿಯು ವಿನಯದಿಂದ ಓ: ಆಯುಷಂತಾ ! ಪ್ರಭ ! ನಾನು ಯುದ್ಧಧರ್ಮವನ್ನು ವಿಮ ರ್ಶಿಸಿಯೇ ಈ ಕಾವ್ಯವನ್ನು ಮಾಡಿದೆನು, ಪ್ರಾಣಾಪಾಯಕ್ಕೆ ಸಿಕ್ಕಿದ ರಫಕ ನನ್ನು ಸಾರಥಿಯ, ಸಾರಥಿಯನ್ನು ರಥಕನೂ, ಹೇಗಾದರೂ ರಕ್ಷಿಸಬೇಕಾ ದುದು ಧರ್ಮವು, ಇದನ್ನು ತಿಳಿದೇ ನಾನು ಮೂರ್ಛಿತನಾದ ನಿನಗೆ ಪ್ರಾಣಾಪಾಯವಿಲ್ಲದಂತೆ ಕಾಪಾಡುವುದಕ್ಕಾಗಿ, ಆ ರಣರಂಗದಿಂದ ಹೊ ರಕ್ಕೆ ತಂದುಬಿಟ್ಟೆನು.” ಎಂದನು. ಇದು ಎಪ್ಪತ್ತಾರನೆಯಆಧ್ಯಾಯವು.