ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨O ಅಧ್ಯಾ, ೫೦.] ದಶಮಸ್ಕಂಧವು. ಗಳನ್ನು ಸಂಗ್ರಹಿಸಿಕೊಂಡು, ಮಧುರಾಪುರಿಯನ್ನು ಮುತ್ತಿದನು. ಇದನ್ನು ನೋಡಿ ಕೃಷ್ಣನು ತನ್ನಣ್ಣನಾದ ಬಲರಾಮನೊಡನೆ ಮಂತ್ರಾಲೋಚನೆ ಯನ್ನು ನಡೆಸುತ್ತ, “ ಅಣ್ಣಾ ! ಈಗ ನಮ್ಮ ಯಾದವರಿಗೆ ಎರಡು ಕಡೆ ಯಿಂದಲೂ ಭಯಂಕರವಾದ ವಿಪತ್ತು ಬಂದೊದಗಿರುವುದು, ಮೂರು ಕೋಟಿಸೈನ್ಯದೊಡನೆ ಕಾಲಯವನನು ಬಂದು, ನಮ್ಮ ಪಟ್ಟಣವನ್ನು ಮು ತಿರುವನು. ಈಗಲೋ ನಾಳೆಯೋ ಜರಾಸಂಧನು ಯುದ್ಧಸನ್ನ ದ್ಯನಾಗಿ ಬರುವದರಲ್ಲಿರುವನು. ಈಗ ನಾವಿಬ್ಬರೂ ಈ ಕಾಯಲವನನೊಡನೆ ಯುದ್ಧ ವನ್ನಾರಂಭಿಸಿದಪಕ್ಷದಲ್ಲಿ,ಇಲ್ಲಿ ಯುದ್ಧವು ನಡೆಯುತ್ತಿರುವಾಗಲೇ ಜರಾಸಂ ಧನು ಬೇರೆ ಕಡೆಯಿಂದ ನಮ್ಮ ಪುರಕ್ಕೆ ಪ್ರವೇಶಿಸಿ, ನಮ್ಮ ಬಂಧುಗಳೆಲ್ಲರನ್ನೂ ಕೊಲ್ಲುವನು.ಇಲ್ಲವೇ ಯಾದವರೆಲ್ಲರನ್ನೂ ಸೆರೆಹಿಡಿದು ತನ್ನ ಪರಕ್ಕಾದರೂ ಸಾಗಿಸಿಬಿಡುವನು. ಆದುದರಿಂದ ಈಗ ನಾವು ಬೇರೊಬ್ಬರಿಗೂ ಪ್ರವೇಶಿಸ ಲಸಾಧ್ಯವಾದ ಒಂದು ಜಲದುರ್ಗವನ್ನು ಮಾಡಿ, ನಮ್ಮ ಬಂಧುಗಳೆಲ್ಲರನ್ನೂ ಅದರಲ್ಲಿಟ್ಟು, ಆಮೇಲೆ ನಾವು ಆ ಯವನನೊಡನೆ ಯುದ್ಧಕ್ಕೆ ನಿಲ್ಲುವೆವು.” ಎಂದನು. ಬಲರಾಮನು ಅದಕ್ಕೆ ಸಮ್ಮತಿಸಿದಮೇಲೆ, ಕೃಷ್ಣನು ಸಮುದ್ರ ಮಧ್ಯದಲ್ಲಿ ಹನ್ನೆರಡುಯೋಜನಗಳ ವಿಸ್ತಾರಕ್ಕೆ ಒಂದು ಪುರವನ್ನು ಅದ್ಭು ತಾಕಾರದಿಂದ ಕಟ್ಟಿಸಿದನು. ವಿಶ್ವಕರ್ಮನ ಶಿಲ್ಪನೈಪುಣ್ಯವೆಲ್ಲವೂ ಆ ದರಲ್ಲಿ ತೋರುತಿತು. ಅದರಲ್ಲಿ ರಾಜಬೀದಿಗಳೂ, ಅಂಗಳಗಳೂ, ಬೀ ದಿಗಳೂ, ಚತುಷ್ಪಥಗಳೂ,ತಿಲ್ಪಶಾಸ್ತ್ರವಿಧಿಯನ್ನನುಸರಿಸಿ ಕ್ರಮವಾಗಿ ಕಂ ಗೊಳಿಸುತಿದ್ದುವು, ಮತ್ತು ಅಲ್ಲಿ ದೇವಯೋಗ್ಯವಾದ ವೃಕ್ಷಗಳಿಂದಲೂ, ಪುಷ್ಪಲತೆಗಳಿಂದಲೂ ಶೋಭಿತಳಾದ ಅನೇಕೊದ್ಯಾನಗಳು ನೋಡುವ ವರಿಗೆ ಆನಂದವನ್ನುಂಟುಮಾಡುವಂತಿದ್ದುವು, ಮತ್ತು ಅದು ಆಕಾಶವನ್ನು ಮುಟ್ಟುವಂತಿರುವ ಸುವರ್ಣಶೃಂಗಗಳಿಂದಲೂ, ಸ್ಪಟಿಕದ ಅಟ್ಟಲೆಗಳಿಂದ ಲೂ, ಗೋಪುರಗಳಿಂದಲೂ ಶೋಭಿತವಾಗಿದ್ದಿತು.ಕುದುರೆಯ ಲಾಯಗಳು,. ಅನ್ನ ಸತ್ರಗಳು, ಮುಂತಾದ ಕಟ್ಟಡಗಳೆಲ್ಲವೂ, ಬೆಳ್ಳಿ, ಹಿತ್ತಾಳೆ, ಮೊದಲಾ ದ ಲೋಹಗಳಿಂದಲೇ ರಚಿತವಾಗಿದ್ದುವು. ಅಲ್ಲಿನ ಒಂದೊಂದುಮನೆಯೂ ಸುವರ್ಣಕಲಶಗಳಿಂದಲೂ, ಪದ್ಮರಾಗಮಣಿಯ ಶಿಖರಗಳಿಂದಲೂ, ಮರ.