ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೭.] ದಶಮಸ್ಕಂಧವು. ೨೨೮೫ ಸಂಹೃತನಾದನು. ಇದರಿಂದ ಶಿಶುಪಾಲನ ಪಕ್ಷದವರಾದ ರಾಜರು, ನಮ್ಮಲ್ಲಿ ದ್ವೇಷದಿಂದ ನಮ್ಮ ಪಟ್ಟಣವನ್ನು ಮುತ್ತಿ, ಅಲ್ಲಿನ ಜನರನ್ನು ತೊಂದರೆಗೊಳಿ ಸದೆ ಬಿಡಲಾರರು ! ಆದುದರಿಂದ ನಾನು ದ್ವಾರಕೆಗೆ ಹೊರಡುವೆನು " ಎಂದು ಹೇಳಿ, ಅವರ ಅನುಮತಿಯನ್ನು ಪಡೆದು, ದ್ವಾರಕೆಗೆ ಬಂದು ಬಿಟ್ಟನು. ಈ ಕಾಲಕ್ಕೆ ಸರಿಯಾಗಿ ಇಲ್ಲಿ ಯಾದವರಿಗೂ ಸಾಲ್ವರಿಗೂ, ಭಯಂಕರ ವಾದ ಯುದ್ಧವು ಜರುಗುತಿತ್ತು. ಆಗ ಕೃಷ್ಣನು ತನ್ನಣ್ಣನಾದ ಬಲರಾಮ ನನ್ನು ಪಟ್ಟಣದ ಕಾವಲಿಗಾಗಿ ನಿಯಮಿಸಿ, ತನ್ನ ಸಾರಥಿಯಾದ ದಾರುಕ ನನ್ನು ಕುರಿತು «ಓ ಸೂತಾ ! ನೀನು ಈಕ್ಷಣವೇ ನಮ್ಮ ರಥವನ್ನು ಸಾಲ್ವ ನಿರತಕ್ಕ ಸ್ಥಳಕ್ಕೆ ಬಿಡು ! ನಾನೇ ಅವನೊಡನೆ ಯುದ್ಧಮಾಡಬೇಕಾಗಿರು ವುದು, ಸೌಭಪುರಾಧಿಪತಿಯಾದ ಆ ಸಾಲ್ವನು ಬಹಳ ಮಾಯಾವಿಯು. ಬೇಗನೆ ನಡೆ” ಎಂದನು. ಕೃಷ್ಣನ ಮುಖದಿಂದ ಈ ಮಾತು ಹೊರಡುತ್ತಿರು ವಾಗಲೇ, ಗರುಡಧ್ವಜವುಳ್ಳ ಆ ರಥವು, ಉಭಯಪಕ್ಷ ನ ಸೈನಿಕರೂ ನೋಡು ತಿರುವಹಾಗೆಯೇ, ರಣರಂಗಮಧ್ಯದಲ್ಲಿ ಸಾಲ್ಯನಿಗಿದಿರಾಗಿ ನಿಂತಿತು. ಇಷ್ಟ ರೊಳಗಾಗಿ ಸಾಲ್ಬನ ಸಮಸ್ವಸೈನ್ಯಗಳೂ ಯಾದವವೀರರಿಂದ ಹತವಾಗಿ, ಸಾಲ್ಟನುಮಾತ್ರ ಅಸಹಾಯನಾಗಿದ್ದನು.ಕೃಷ್ಣನು ತನಗಿದಿರಾಗಿ ಬಂದುನಿಂ ತಿರುವುದನ್ನು ಕಂಡೊಡನೆ ಸಾಲ್ವನು, ಭೀಕರಧ್ವನಿಯಳ ಒಂದಾನೊಂದು ಶಕ್ಕಾಯುಧವನ್ನು ತೆಗೆದು, ಅದನ್ನು ಕೃಷ್ಣ ಸಾರಥಿಯಾದ ದಾರುಕನ ಮೇಲೆ ಪ್ರಯೋಗಿಸಿದನು. ಆಕಾಶದ ಕೊಳ್ಳಿಯಂತೆ ಕಾಂತಿಯಿಂದ ದಿಕ್ಕುಗಳೆಲ್ಲವನ್ನೂ ಬೆಳಗುತ್ತ, ವೇಗದಿಂದ ತನಗಿದಿರಾಗಿ ಬರುತ್ತಿರುವ ಅ ' ಶಾಯುಧವನ್ನು ನೋಡಿ ಕೃಷ್ಣನು, ತನ್ನ ಬಾಣಗಳಿಂದ ಅದನ್ನು ನೂರಾ ರುತುಂಡುಗಳಾಗಿ ಕತ್ತರಿಸಿ ಕೆಡಹಿದನು, ಮತ್ತು ಬೇರೆ ಹದಿನಾರುಬಾಣಗ ಳಿಂದ ಆ ಸಾಲ್ಪನನ್ನೂ , ಆಕಾಶದಲ್ಲಿ ತಿರುಗುತ್ತಿರುವ ಆತನ ಸೌಭವಿಮಾನ ವನ್ನೂ ಪ್ರಹರಿಸಿ, ಮೇಲೆಮೇಲೆ ಇನ್ನೂ ಕೆಲವು ಬಾಣಗಳಿಂದ ಸೂರನು ತನ್ನ ಕಿರಣಗಳಿಂದ ಹೆಗೋಹಾಗೆ, ಆ ವಿಮಾನವನ್ನು ಮುಚ್ಚಿದನು. ಆಗ ಸಾಲ್ವನು ಬೇರೊಂದು ಶಸ್ತ್ರವನ್ನು ಕೃಷ್ಣನ ಎಡಗೈಗೆ ಗುರಿಯಿಟ್ಟು ಹೊಡೆ ಯಲು, ಕೃಷ್ಣನು ಕೈಯಲ್ಲಿ ಹಿಡಿದಿದ್ದ ಶಾರ್ಙ್ಗಧನುಸ್ಸು ಕೆಳೆಗೆ ಬಿದ್ದು