ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೬ ಶ್ರೀಮದ್ಭಾಗವತವು | [ಅಧ್ಯಾ, ೬೭. ಹೋಯಿತು.ಸಾಲ್ಟನು ತೋರಿಸಿದ ಈ ಪರಾಕ್ರಮವು ಎಲ್ಲರಿಗೂ ಅತ್ಯಾಶ್ಯರ ಕರವಾಗಿದ್ದಿತು, ಅಲ್ಲಿ ಸಮಸ್ತಭೂತಗಳೂ ಹಾಹಾಕಾರ ದಿಂದ ಕೂಗುತಿದ್ದುವು, ಸಾಲ್ವನೂಕೂಡ ಉತ್ಸಾಹದಿಂದ ಸಿಂಹನಾದ ಮಾಡುತ್ತ ಕೃಷ್ಣನನ್ನು ಕುರಿತು, (ಎಲೆ ಮೂಡಾ! ಕೃಷ್ಣಾ ! ನೀನಲ್ಲವೇ ನಮ್ಮೆಲ್ಲರನ್ನೂ ಅವಮಾನಪಡಿಸಿ, ನಮ್ಮ ಸ್ನೇಹಿತನಾದ ಶಿಶುಪಾಲನ ಪತ್ನಿ ಯನ್ನು ಕದ್ದೊಡಿದವನು, ಮತ್ತು ಆ'ನನ್ನ ಮಿತ್ರನು ಯಾಗಸಭಾಮಥ್ಯ ದಲ್ಲಿ ಅಸಹಾಯನಾಗಿದ್ದಾಗ ಅವನನ್ನು ನೀನು ಕೊಂದೆಯಲ್ಲವೆ?ಹೀಗೆ ಮೋ ಸದಿಂದ ನನ್ನ ಮಿತ್ರನನ್ನು ಕೊಂದು, ನನಗೆ ಸಮಾನರಾದ ವೀರರಿಲ್ಲವೆಂದು ಗರ್ವಪಡುತ್ತಿರುವ ನಿನ್ನ ನ್ನು, ಇದೋ! ಈಗಲೇ ನನ್ನ ತೀಕ್ಷಬಾಣಗಳಿಂದ ಪುನರಾವೃತ್ತಿಯಿಲ್ಲದ ಮೃತ್ಯುವಿನ ಸಮ್ಮುಖಕ್ಕೆ ಕಳುಹಿಸುವೆನು ನೋಡು. ಮುಂದೆ ಬಂದು ನಿಲ್ಲು" ಎಂದನು. ಅದಕ್ಕಾ ಕೃಷ್ಣನು ಮಂದಹಾಸದಿಂದ ನಗುತ್ತ, ಸಾಲ್ಪನನ್ನು ಕುರಿತು, 'ಎಲೆ ಮೂಢಾ ! ಸುಮ್ಮನೆ ಬಗುಳುವುದ ರಿಂದ ಪ್ರಯೋಜನವೇನು ? ನಿನ್ನ ಬೆನ್ನ ಹಿಂದೆ ಕಾದಿರುವ ಮೃತ್ಯುವನ್ನೇ ನೀನು ಕಾಣದೆ,ಹೀಗೆ ಆತ್ಮಸ್ತುತಿಯನ್ನು ಮಾಡಿಕೊಂಡುದರಿಂದ ಪ್ರಯೋ ಜನವಿಲ್ಲ. ನಿಜವಾದ ಶೂರವುಳ್ಳವರು, ಕಾಠ್ಯದಿಂದ ತಮ್ಮ ಪರಾಕ್ರಮವನ್ನು ತೋರಿಸುವರೇ ಹೊರತು ನಿನ್ನಂತೆ ಬಾಯಿಗೆ ಬಂದಹಾಗೆ ಬಗುಳುವುದಿಲ್ಲ” (ಎಂದುಹೇಳಿ, ಮಹಾಭಯಂಕರವೇಗವುಳ್ಳ ಒಂದಾನೊಂದು ಗದೆ ಯನ್ನು ತೆಗೆದು, ಅದನ್ನು ಸಾಲ್ವನ ಭುಜದ ಕೀಲಿಗೆ ಗುರಿಯಿಟ್ಟು ಹೊಡೆದನು. ಈ ಪ್ರಹಾರ ಸಿಂದ ಆ ಸಾಲ್ವನ ಮೈ ನಡುಗಿ ಹೋಯಿತು. ಅವನ ಬಾ ಯಿಂದ ರಕ್ತವು ಸುರಿಯಲಾರಂಭಿಸಿತು. ಕೃಷ್ಣನು ಆ ಗದೆಯನ್ನು ಉಪ ಸಂಹಾರಮಾಡಿದಮೇಲೆ,ಸಾಲ್ವನು ಇದಕ್ಕಿದ್ದಹಾಗೆ ಕಣ್ಮರೆಯಾಗಿ ಬಿಟ್ಟನು. ಸ್ವಲ್ಪ ಹೊತ್ತಿಗೊಳಗಾಗಿ ಮಾಯಾವಿಯಾದ ಸಾಲ್ವನ ಕಡೆಯ ಪುರುಷ ನೊಬ್ಬನು, ಕೃಷ್ಣನಮುಂದೆ ಬಂದು ನಿಂತು, ತಲೆಬಗ್ಗಿ ನಮಸ್ಕರಿಸಿ, ದುಃಖ ವನ್ನು ನಟಿಸಿ ಅಳುತ್ತ,ತನ್ನನ್ನು ದೇವಕೀದೇವಿಯು ಕಳುಹಿಸಿ ಕೊಟ್ಟು ದಾಗಿ ಹೇಳಿದನು. ಆಗ ಕೃಷ್ಣನು ಅದಕ್ಕೆ ಕಾರಣವೇನೆಂದು ಕೇಳಲು, ಅವನು ಹೀಗೆಂದು ಹೇಳುವನು ( ಕೃಷ್ಣಾ ಕೃಷ್ಣಾ! ಹೇ ಮಹಾಬಾಹೂ