ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೬ 'ಅಧ್ಯಾ, ೭೭.] ದಶಮಸ್ಕಂಧವು. ದುಷ್ಟನಾದ ಸಾಲ್ವನು, ಕಟುಕನು ಪಶುವನ್ನು ಕೊಲೆಗಾಗಿ ಹಿಡಿ ದುಕೊಂಡುಹೋಗುವಂತೆ, ನಿನ್ನ ತಂದೆಯಾದ ವಸುದೇವನನ್ನು ಹಿಡಿದು, ಅಪಹರಿಸಿಕೊಂಡು ಹೋಗಿರುವನು. ಪಿತೃವತ್ಸಲನಾದ ನೀನು ಈಗಲೇ ಹೋಗಿ ಅವನನ್ನು ಬಿಡಿಸಬೇಕು!” ಎಂದನು. ಸತ್ವಜ್ಞನಾಗಿದ್ದರೂ ಮನು ವ್ಯ ಸ್ವಭಾವವನ್ನು ನಟಿಸತಕ್ಕ ಕೃಷ್ಣನು, ಈ ಅಪ್ರಿಯವಾಕ್ಯವನ್ನು ಕೇಳಿ, ಪ್ರಾಕೃತಮನುಷ್ಯನಂತೆ ದುಃಖವನ್ನು ತೋರಿಸುತ್ತ, ತಂದೆ ಯಲ್ಲಿ ತನಗಿರುವ ಕನಿಕರವನ್ನು ಸೂಚಿಸುವಂತೆ ಹೀಗೆಂದು ಹೇಳುವನು. « ಆಹಾ ! ಏನಿದು ! ನಾನು ದೇವಾಸುರರಿಗೂ ದುರ್ಜಯನಾದ, ನನ್ನಣ್ಣನಾದ ಬಲರಾಮನನ್ನು ಪುರರಕ್ಷಣೆಗಾಗಿ ನಿಲ್ಲಿಸಿ ಬಂದಿದ್ದೆನು. ಇಂತಹ ಸಂದರ್ಭಗಳಲ್ಲಿ ಆತನು ಎಂದಿ ಗೂ ಎಚ್ಚರತಪ್ಪವನಲ್ಲ! ಹೀಗಿರುವಾಗಲೂ ಅಲ್ಪ ನಾದ ಆ ಸಾಲ್ವನು ನನ್ನ ತಂದೆಯನ್ನು ಹಿಡಿದುಕೊಂಡು ಹೋದನೆ”ಆಹಾ!ದೈವವು ಬಹಳ ಪ್ರಬಲವಾ ದುದು” ಎಂದು ಹೇಳುತ್ತಿರುವಾಗಲೇ ಸಾಲ್ವನು, ಮಾಯೆಯಿಂದ ವಸು ದೇವಾಕೃತಿಯೊಂದನ್ನು ನಿರ್ಮಿಸಿ, ಅದನ್ನು ತನ್ನೊಡನೆ ಕರೆದುಕೊಂಡು ಬಂದು, ಕೃಷ್ಣನಿಗೆ ತೋರಿಸಿ (ಕೃಷ್ಣಾ! ನೀನು ಯಾವನಿಗಾಗಿ ಈ ಲೋಕ ದಲ್ಲಿ ಬದುಕುತ್ತಿರುವೆಯೋ, ಆ ನಿನ್ನ ತಂದೆಯನ್ನು ನೋಡು!ಇದೋ! ನಿನ್ನ ಕಣ್ಣಿರಾಗಿಯೇ ಇವನತಲೆಯನ್ನು ಕಡಿಯುವೆನು.ಶಕ್ತಿಯಿದ್ದರೆ ಈ ನಿನ್ನ ತಂ ದೆಯನ್ನು ರಕ್ಷಿಸಿಕೊಳ್ಳುವನಾಗು” ಎಂದನು, ಹೀಗೆ ಮಾಯಾವಿಯಾದ ಸಾಲ್ವನು, ಕೃಷ್ಣನನ್ನು ಹೆದರಿಸಿ, ತಾನು ತಂದಿದ್ದ ಆ ಮಾಯಾವಸುದೇವನ ಕಂಠವನ್ನು ಕತ್ತಿಯಿಂದ ಕಡಿದು, ಆ ತಲೆಯನ್ನು ಮಾತ್ರ ಎತ್ತಿಕೊಂಡು, ತನ್ನ ಸೌಭವಿಮಾನವನ್ನೇರಿ ಹೊರಟುಹೋದನು. ಆಗ ಕೃಷ್ಣನು ಸ್ವಲ್ಪ ಹೊತ್ತಿನವರೆಗೆ ಮನುಷ್ಯ ಸ್ವಭಾವಕ್ಕೆ ತಕ್ಕಂತೆ ತನ್ನ ಪಿತೃಮರಣ ದಿಂದುಂಟಾದ ದುಃಖವನ್ನು ನಟಿಸುತ್ತಿದ್ದು, ಆಮೇಲೆ ಅಸಾಧಾರಣವಾದ ತನ್ನ ಪ್ರಭಾವದಿಂದ ನಿಜಸ್ಥಿತಿಯನ್ನು ತಿಳಿದುಕೊಂಡನು. ಮಯನು ಸಾಲ್ವ ನಿಗೆ ಉಪದೇಶಿಸಿದ್ದ ಆಸುರಿಯೆಂಬ ಮಾಯೆಯನ್ನು ಹಿಡಿದೇ ಸಾಲ್ಪನು ಈ ಕಪಟತಂತ್ರವನ್ನು ತೋರಿಸಿರಬಹುದೆಂದು ಸ್ಪಷ್ಟವಾಗಿ ಕೃಷ್ಣನಿಗೆ ತಿಳಿ ಯಿತು. ಮೂರ್ಛತಿಳಿದೆದ್ದವನಂತೆ ಕಣ್ಣು ಬಿಟ್ಟು ನೋಡುವಾಗ, ಅಲ್ಲಿ ತ