ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯ ಅಧ್ಯಾ, ೭೮.] - ದಶಮಸ್ಕಂಧವು. ಎದ್ದುನಿಂತು ನಮಸ್ಕರಿಸದೆ, ಅಲಕ್ಷವಾಗಿದ್ದನು. ಆತನು ಬ್ರಾಹ್ಮಣಬೀಜಕ್ಕೆ ಪ್ರತಿಲೋಮಜಾತಿಯಲ್ಲಿ ಹುಟ್ಟಿದ ಸೂತಕುಲದವನು. ಹೀಗಿದ್ದರೂ ಆವ ನು ಅನೇಕಬ್ರಹ್ಮರ್ಷಿಗಳ ಸಭೆಯಲ್ಲಿ ಕಲೆತು ಹೆಮ್ಮೆಯಿಂದಿರುವುದನ್ನು ನೋ ಡಿ, ಬಲರಾಮನಿಗೆ ಮಹತ್ತಾದ ಕೋಪವುಂಟಾಯಿತು. ಆ ಕೋಪದಿಂದ ಅಲ್ಲಿದ್ದ ಸದಸ್ಯರನ್ನು ನೋಡಿ ಬಲರಾಮನು (1 ಎಲೈ ಮಹರ್ಷಿಗಳೇ ! ಇದೇ ನಿದು? ಸೂತಕುಲದವನಾದ ಈತನು, ಈಬ್ರಾಹ್ಮಣರ ಗುಂಪಿನಲ್ಲಿ ಹೇಗೆ ಸೇರಿ ದನು? ಇದಲ್ಲದೆ ನಿಮ್ಮೆಲ್ಲರಿಗಿಂತಲೂ ಉಚ್ಛಾಸನದಲ್ಲಿಯೂ ಕುಳಿತಿರುವನು. ಧರ್ಮರಕ್ಷಕರಾದ ನಮ್ಮನ್ನೂ ಲಕ್ಷ್ಯ ಮಾಡದೆ, ನಮಗಿಂತಲೂ ಉತ್ತಮಾ ಸನದಲ್ಲಿರುವನು. ದುರ್ಬುದ್ಧಿಯುಳ್ಳ ಈತನಿಗೆ ವಧವೇ ತಕ್ಕ ಶಿಕ್ಷೆಯು, ಭಗವಂತನಾದ ವ್ಯಾಸಮಹರ್ಷಿಗೆ ತಿಷ್ಯನಾಗಿ, ಇತಿಹಾಸ, ಪುರಾಣ, ಧರ್ಮಶಾಸ್ತ್ರಗಳೆಲ್ಲವನ್ನೂ ಸಾಂಗವಾಗಿ ಓದಿದವನಾಗಿದ್ದರೂ, ಸ್ವಲ್ಪವಾ ದರೂ ಮಾದೆಯನ್ನು ತಿಳಿಯದೆ,ದೊಡ್ಡವರಲ್ಲಿ ವಿನಯವನ್ನೂ ತೋರಿಸದೆ, ತಾನೇ ಪಂಡಿತನೆಂಬ ಗರ್ವದಿಂದಿರುವನಲ್ಲಾ ! ಇವನು ಅಷ್ಟು ಶಾಸ್ತ್ರಗಳ ನ್ಲೋದಿ ಫಲವೇನು ? ಇಂದ್ರಿಯಜಯವಿಲ್ಲದೆ ಋಷಿವೇಷವನ್ನು ಧರಿಸಿ ಬಂ ದ ನಟನಂತೆ, ಇವನ ವಿದ್ಯಾಭ್ಯಾಸವೆಲ್ಲವೂ ನಿಷ್ಟ್ರಯೋಜನವಲ್ಲವೆ? ಇಂ ತಹ ಅಹಂಕಾರಿಗಳನ್ನು ಮುರಿಯುವುದಕ್ಕಾಗಿಯೇ ನಾವು ಇಲ್ಲಿ ಜನಿಸಿರು ವೆವು. ಹೀಗೆ ಧಾರ್ಮಿಕರಂತೆ ವೇಷಧಾರಿಗಳಾದವರನ್ನು ಕೊಲ್ಲಬೇಕಾದುದೇ ಉಚಿತವು, ಇವರಿಗಿಂತಲೂ ಲೋಕದಲ್ಲಿ ಮಹಾಪಾತಕಿಗಳಿಲ್ಲ” ಎಂದು ಹೇ ಳಿ, ತಾನು ಕೈಯಲ್ಲಿ ಹಿಡಿದಿದ್ದ ಒಂದು ದರ್ಭೆಯ ಹುಲ್ಲಿನಿಂದ, ಅವನನ್ನು ಪ್ರಹರಿಸಿ ಕೊಂದುಬಿಟ್ಟನು. ಓ ! ಪರೀಕ್ಷಿದ್ರಾಜಾ ! ಬಲರಾಮನಾ ದರೋ ಬಹಳ ದಯಾಸ್ವಭಾವವುಳ್ಳವನು. ಕೆಟ್ಟವರಲ್ಲಿಯೂ ಅವ ನು ಕೈಮಾಡುವವನಲ್ಲ! ಹಾಗಿದ್ದರೂ ದೈವಸಂಕಲ್ಪವು ಹಾಗಿದ್ದುದ ರಿಂದ, ಬಲರಾಮನಿಗೆ ಆ ಕೂರಬುದ್ದಿಯು ಹುಟ್ಟಿತು. ಬಲರಾಮನು ಮಾ ಡಿದ ಈ ಕಾಠ್ಯವನ್ನು ನೋಡಿ ಅಲ್ಲಿದ್ದ ಮಹರ್ಷಿಗಳೆಲ್ಲರೂ ವ್ಯಾಕುಲಿತ ರಾಗಿ « ಹಾಹಾ !” ಎಂದು ಕೂಗುತ್ತ, ಬಲರಾಮನನ್ನು ಕುರಿತು ಓ! ಪ್ರಭೂ! ಬಲರಾಮಾ ! ನೀನು ಮಾಡಿದುದು ಬಹಳ ಅಧರ್ಮವು ! ನಾವೇ