ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯ ಅಧ್ಯಾ, ೭೯.] ದಶಮಸ್ಕಂಧವು ಉದ್ಭವಸ್ಥಾನವಾದ ಸರೋವರಕ್ಕೆ ಬಂದನು. ಅಲ್ಲಿಯೂ ಸ್ಮಾ ನಾದಿಕರ ಗಳನ್ನು ತೀರಿಸಿಕೊಂಡು, ಆ ಸರಯೂತೀರಮಾರ್ಗವಾಗಿಯೇ ಪ್ರಯಾಗ ಕ್ಷೇತ್ರಕ್ಕೆ ಬಂದನು. ಅಲ್ಲಿಯೂ ಸ್ನಾನತರ್ಪಣಾದಿಗಳನ್ನು ನಡೆಸಿ, ಅಲ್ಲಿಂದ ಪುಲಹಾಶ್ರಮಕ್ಕೆ ಬಂದನು, ಅಲ್ಲಿಂದಾಚೆಗೆ ಕ್ರಮವಾಗಿ, ಗೋಮತಿ, ಗಂಡಕಿ, ವಿಪಾಶೆಯೆಂಬ ನದಿಗಳಲ್ಲಿಯೂ, ಶೋಣಾನದದಲ್ಲಿಯೂ ಸ್ನಾನ ಮಾಡಿ, ಗಯೆಗೆ ಬಂದನು. ಇವನು ಜೀವ'ವಾದುದರಿಂದ, ಅಲ್ಲಿ ಪಿತೃಗಳಿಗೆ ಮನಸ್ಸಿನಿಂದಮಾತ್ರ ಪೂಜಾದಿಗಳನ್ನೂ ಪ್ಪಿಸಿ, ಅಲ್ಲಿಂದ ಗಂಗಾ ನದಿಯು ಸಮುದ್ರದಲ್ಲಿ ಸಂಗಮವಾಗತಕ್ಕೆ ಸ್ಥಳಕ್ಕೆ ಬಂದನು. ಅಲ್ಲಿ ಸ್ನಾನ ಮಾಡಿದಮೇಲೆ ಮಹೇಂದ್ರಪಕ್ವತಕ್ಕೆ ಬಂದು, ಅಸ್ಥಿ ಪರಶುರಾಮನನ್ನು ಕಂಡು ನಮಸ್ಕರಿಸಿದನು, ಅಲ್ಲಿಂದಾಚೆಗೆ ಸಪ್ತಗೋದಾವರಿ, ವೇಣಿ, ಪಂಪೆ, ಭೀಮರಥಿ, ಎಂಬೀ ನದಿಗಳಲ್ಲಿ ಸ್ನಾನಮಾಡಿ, ಅಲ್ಲಿ ಕುಮಾರಸ್ವಾಮಿಯನ್ನು ಕಂಡು, ಅದರಿಂದಾಚೆಗೆ ಶಿವಕ್ಷೇತ್ರವಾದ ಶ್ರೀಶೈಲಕ್ಕೆ ಒಂದನು, ಅಲ್ಲಿಂದ ಹೊರಟು ದ್ರವಿಡದೇಶಗಳಲ್ಲಿ ಪರಮಪುಣ್ಯಕ್ಷೇತ್ರವೆನಿಸಿಕೊಂಡ ವೆಂಕಟಾ ಚಲಕ್ಷೇತ್ರಕ್ಕೆ ಹೋದನು. ಅದರಿಂದಾಚೆಗೆ ಕಾಮಕೋಟಿ, ಕಾಂಚೀಪುರ ಕ್ಷೇತ್ರಗಳನ್ನು ನೋಡಿಕೊಂಡು, ಕಾವೇರಿ ತೀರದಲ್ಲಿ ಮಹಾಪುಣ್ಯಕ್ಷೇತ್ರ ವೆನಿಸಿಕೊಂಡ ಶ್ರೀರಂಗಕ್ಕೆ ಬಂದನು. ಅಲ್ಲಿ ಭಗವದರ್ಶನವನ್ನು ಮಾಡಿ ಕೊಂಡು, ಅಲ್ಲಿಂದ ಹೊರಟು, ವಿಷ್ಣು ಕ್ಷೇತ್ರಗಳಾದ ಋಷಭಾದ್ರಿ, ದಕ್ಷಿಣಮಧುರೆ, ಇವೆರಡು ಸ್ಥಳಗಳನ್ನೂ ಸುತ್ತಿಬಂದು, ಕೊನೆಗೆ ಸಮಸ್ಯ ಪಾಪನಿವಾರಕವಾದ ಸಮುದ್ರ ಸೇತುವಿಗೆ ಬಂದನು. ಅಲ್ಲಿ ಸೇತುಸ್ನಾನವನ್ನು ಮಾಡಿ, ಸಹಸ್ರಗೋದಾನದಿಂದ ಬ್ರಾಹ್ಮಣರನ್ನು ಸಂತೋಷಪಡಿಸಿದನು. ಆಮೇಲೆ ಕೃತಮಾಲೆ, ತಾಮ್ರಪರ್ಣಿಯೆಂಬ ಈ ಎರಡುನದಿಗಳಲ್ಲಿ ಸ್ನಾನ ಮಾಡಿ, ಕುಲಪಕ್ವತವೆನಿಸಿಕೊಂಡ ಮಲಯಾಡ್ರಿಗೆ ಬಂದನು. ಅಲ್ಲಿ ತಪೋ ನಿಷ್ಠ ನಾಗಿ ಕುಳಿತಿದ್ದ ಆಗಸ್ಯ ಮಹರ್ಷಿಯನ್ನು ನಮಸ್ಕರಿಸಿ, ಅವನ ಆಶೀ ದ್ವಾದವನ್ನು ಹೊಂದಿ, ಅಲ್ಲಿಂದ ದಕ್ಷಿಣಸಮುದ್ರತೀರಕ್ಕೆ ಬಂದನು. ಆ ಸಮುದ್ರತೀರದಲ್ಲಿದ್ದ ಕನ್ನೆಯೆಂಬ ದುರ್ಗಾದೇವಿಯನ್ನು ದರ್ಶನಮಾಡಿ ಕೊಂಡು, ಅಲ್ಲಿಂದ ಅನಂತಪುರವೆಂಬ ಕ್ಷೇತ್ರಕ್ಕೆ ಹೋದನು, ಅಲ್ಲಿಂದ ವಿಷ್ಣು