ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯೮ ಶ್ರೀಮದ್ಭಾಗವತವು [ಅಧ್ಯಾ, ೬೯ ಸಾನ್ನಿಧ್ಯವುಳ್ಳ ಪಂಚಾಪ್ಪರಸ್ಸೆಂಬ ತೀರ್ಥಕ್ಕೆ ಬಂದು ಸ್ನಾನಮಾಡಿ, ಅಲ್ಲಿ ಬ್ರಾಹ್ಮಣರಿಗೆ ಹತ್ತು ಸಾವಿರಗೋವುಗಳನ್ನು ದಾನಮಾಡಿದನು, ಅದರಿಂ ದಾಚೆಗೆ ಕ್ರಮವಾಗಿ ಕೇರಳ, ಶತಗರ್ತಕದೇಶಗಳಮೇಲೆ ಹೊರಟು, ಗೋಕರ್ಣವೆಂಬ ಶಿವಕ್ಷೇತ್ರಕ್ಕೆ ಬಂದನು. ಅಲ್ಲಿಂದಾಚೆಗೆ ಅದರ ಸಮೀ ಪದ ದ್ವೀಪದಲ್ಲಿ ಆಧ್ಯಾದೇವಿಯನ್ನು ದರ್ಶನಮಾಡಿಕೊಂಡು, ಶೂರ್ಪಾ ರಕವೆಂಬ ಸ್ಥಳಕ್ಕೆ ಬಂದನು. ಅಲ್ಲಿಂದಾಚೆಗೆ ಕ್ರಮವಾಗಿ, ತಾಪಿ, ಪಯೋಷ್ಠಿ ನಿಗ್ವಿಂಧ್ಯೆಯೆಂಬ ನದಿಗಳಲ್ಲಿ ಸ್ನಾನವನ್ನು ತೀರಿಸಿಕೊಂಡು, ದಂಡಕಾವನಕ್ಕೆ ಬಂದು, ಅಲ್ಲಿಂದ ನರದೆಗೆ ಹೋದನು, ಅಲ್ಲಿ ಸ್ನಾನಮಾಡಿದಮೇಲೆ, ಆ ನದೀ ತೀರದಲ್ಲಿದ್ದ ಮಾಹಿಷ್ಮತೀಪುರವನ್ನು ನೋಡಿಕೊಂಡು, ಮನುತೀರದಲ್ಲಿ ಸ್ನಾನಮಾಡಿ, ತಿರುಗಿ ಪ್ರಭಾಸತೀರಕ್ಕೆ ಬಂದು ಸೇರಿದನು. ಇಷ್ಟರಲ್ಲಿ ಅಲ್ಲಿದ್ದ ಬಾಹ್ಮಣರು, ಕೌರವಪಾಂಡವಯುದ್ಧದಲ್ಲಿ, ಉಭಯಪಕ್ಷದಲ್ಲಿ ಅನೇಕಾನೇಕರಾಜರು ಹತರಾದ ಸಂಗತಿಯನ್ನು ಕುರಿತು, ಒಬ್ಬರಿಗೊಬ್ಬರಿಗೆ ಮಾತಾಡಿಕೊಳ್ಳುತಿದ್ದುದನ್ನು ಕೇಳಿ, ಅಂದಿಗೆ ಭೂಭಾರಪರಿಹಾರವಾಯಿ ತೆಂದು ತಿಳಿದುಕೊಂಡನು, ಆದರೆ ಭೀಮದುರೈಧಸರಿಬ್ಬರಿಗೆಮಾತ್ರ ಇನ್ನೂ ಗದಾಯುದ್ಧವು ನಡೆಯುತ್ತಿರುವುದಾಗಿ ತಿಳಿದು ಬಂದುದರಿಂದ, ಆದರಿಂದುಂಟಾಗಬಹುದಾದ ಅನರವನ್ನಾದರೂ ತಪ್ಪಿಸಬೇಕೆಂದು ಯೋ ಚಿಸಿ, ನೆಟ್ಟಗೆ ಆ ಯುದ್ಧವು ನಡೆಯುತ್ತಿದ್ದ ಸ್ಥಳಕ್ಕೆ ಬಂದನು. ಆಗ ಧಮ್ಮರಾ ಜನೂ, ಕೃಷ್ಣಾರ್ಜುನರೂ, ನಕುಲಸಹದೇವರೂಬಲರಾಮನು ಆತುರದಿಂದ ಬರುತ್ತಿರುವುದನ್ನು ಕಂಡು, ಮುಂದೆ ಬಂದು ನಮಸ್ಕರಿಸಿ, ಅವನು ಯಾವ ಉದ್ದೇಶದಿಂದ ಬಂದನೆಂಬುದನ್ನು ತಿಳಿಯದೆ, ಸಂಶಯಗ್ರಸ್ತರಾಗಿ ಸುಮ್ಮ ನಿದ್ದರು. ಬಲರಾಮನು ನೆಟ್ಟನೆ ರಣರಂಗಕ್ಕೆ ಬಂದು, ಅಲ್ಲಿ ಭೀಮದುರೊ ಧನರಿಬ್ಬರೂ ಗದಾಪಾಣಿಗಳಾಗಿ ಒಬ್ಬರನ್ನೊಬ್ಬರು ಜಯಿಸಬೇಕೆಂಬ ಹಟ ದಲ್ಲಿ ಚಿತ್ರವಿಚಿತ್ರವಾದ ಮಂಡಲಗತಿಯಿಂದ ಸುತ್ತಿ ಹೋರಾಡುತ್ತಿರುವು ದನ್ನು ನೋಡಿದನು. ಆಗ ಬಲರಾಮನು ಆವರಿಬ್ಬರನ್ನೂ ಕುರಿತು ಹೀಗೆಂದು ಹೇಳುವನು, “ಓ ಕೌರವರಾಜಾ ! ಓ ಭೀಮಾ ! ನೀವಿಬ್ಬರೂ ವೀಳ್ಯದಲ್ಲಿ ಸಮಾನರು ! ನಿಮ್ಮಲ್ಲಿ ಒಬ್ಬನು (ಭೀಮನು) ದೇಹಬಲದಲ್ಲಿಯೂ, ಮತೊ