ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦೧ ಅಥ್ಯಾ, ೮೦.] ದಶಮಸ್ಕಂಧವು. ದೇಹಪೋಷಣೆಗಾಗಿಯೇ ಉಪಯೋಗಿಸುತ್ತ, ಹೊತ್ತಿಗೊತ್ತಿಗೆ ಆಹಾರ ವಿಲ್ಲದೆ ಹಸಿವಿನಿಂದ ಬಹಳ ಕೃಶವಾಗಿದ್ದಳು. ಇದರಿಂದ ಅವಳನ್ನು ಕುತ್ಕ್ಷಾ ಮೆಯೆಂದೇ ಹೇಳುತ್ತಿದ್ದರು. ಒಮ್ಮೆ ಆ ಸತೀಮಣಿಯು, ತನ್ನ ದಾರಿದ್ರದ ಕಷ್ಟವನ್ನು ಸಹಿಸಲಾರದೆ, ಬಾಡಿದ ಮುಖದಿಂದ ಪತಿಯನ್ನು ನೋಡಿ, ಭಯ ದಿಂದ ನಡುಗುತ್ತ ಹೀಗೆಂದು ವಿಜ್ಞಾಪಿಸುವಳು. « ಸ್ವಾಮೀ ! ನೀನಾದ ರೋ ಸಾಕ್ಷಾತ್ ಲಕ್ಷ್ಮಿಪತಿ ಯಾದ ಆ ಶ್ರೀಕೃಷ್ಣನಿಗೆ ಪ್ರೀತಿಯಮಿತ್ರನೆನಿಸಿ ಕೊಂಡಿರುವೆ ! ಅದರಲ್ಲಿಯೂ ಆ ಕೃಷ್ಣನು, ಬ್ರಾಹ್ಮಣರಲ್ಲಿ ಪ್ರೀತಿಯುಳ್ಳ ವನು, ಮರೆಹೊಕ್ಕವರನ್ನು ವಾತ್ಸಲ್ಯದಿಂದ ಪೋಷಿಸತಕ್ಕವನು, ನಿಮ್ಮಂ ತಹ ಸಾಧುಗಳಿಗೆ ಆತನೇ ದಿಕ್ಕಾಗಿರುವನು. ಹೀಗಿರುವಾಗ ನೀನು ಅವನಲ್ಲಿಗೆ ಹೋಗಿ ಯಾಚಿಸಿದರೆ, ಕುಟುಂಬಪೋಷಣೆಗಾಗಿ ನಾವು ಪಡುತ್ತಿರುವ ಕಷ್ಟವನ್ನು ನೋಡಿ, ನಮಗೆ ಬೇಕಾದಷ್ಟು ದ್ರವ್ಯವನ್ನು ಕೊಡಲಾರನೆ ? ಆತನು ಈಗ ಬ್ಯಾರಕೆಯಲ್ಲಿಯೇ ಇರುವನು. ಭೋಜರು, ವೃಷ್ಟಿಗಳು, ಅಂಧಕರು, ಈ ರಾಜರೆಲ್ಲರೂ ಅವನ ಆಜ್ಞಾಧಾಗಕರಾಗಿರುವರು. ಅವನು ತನ್ನ ಪಾದಾರವಿಂದವನ್ನು ಸೇವಿಸಿದವರಿಗೆ ತನ್ನನ್ನೇ ಕೊಟ್ಟುಬಿಡುವಷ್ಟು ಉದಾರನು.ಹೀಗಿರುವಾಗ,ಧನಾರ್ಥಿಗಳಾಗಿ ತನ್ನಲ್ಲಿಗೆ ಬಂದವರ ಕೋರಿಕೆಯ ನ್ನು ನಡೆಸಿ ಕೊಡದಿರುವನೆ ? ಆದುದರಿಂದ ನೀನು ಈಗಲೇ ಆ ಕೃಷ್ಣನಲ್ಲಿಗೆ ಹೋಗಿ ಹೇಗಾದರೂ ಸ್ವಲ್ಪ ಧನವನ್ನು ಯಾಚಿಸಿ ತರಬೇಕು” ಎಂದಳು. ಕೇವಲವಿರಕ್ತನಾದ ಆ ಬ್ರಾಹ್ಮಣನಿಗೆ, ಧನಾರ್ಜನೆಗಾಗಿ ಹೋಗು ವುದು ಸಮ್ಮತವಲ್ಲದಿದ್ದರೂತನ್ನ, ಹೆಂಡತಿಯು ಬಹಳವಾಗಿ ನಿರ್ಬಂಧಿಸಿದು ದರಿಂದ ಒಪ್ಪಿಕೊಳ್ಳಬೇಕಾಯಿತು. ಈ ನೆವದಿಂದ ಆ ಶ್ರೀಕೃಷ್ಣನ ದರ್ಶ ನವೇ ತನಗೆ ಪರಮಲಾಭವೆಂದು ನಿರ್ಧರಿಸಿ ಹೊರಡುವುದಕ್ಕೆ ಸಿದ್ಧನಾದನು. ಆಗ ಆ ಕುಚೇಲನು, ತನ್ನ ಪತ್ನಿ ಯನ್ನು ನೋಡಿ «ಓ ಕಲ್ಯಾಣೀ! ದೈವಸ್ತ್ರ ರೂಪನಾದ ಆ ಶ್ರೀಕೃಷ್ಣನನ್ನು ನೋಡುವುದಕ್ಕೆ ಹೋಗುವಾಗ, ಬರೀ ಕೈಯಿಂದ ಹೋಗಬಾರದು, ಏನಾದರೂ ನಮ್ಮಲ್ಲಿದ್ದುದನ್ನು ಅವನಿಗೆ ಕಾ ಣಿಕೆಯಾಗಿ ತೆಗೆದುಕೊಂಡು ಹೋಗಬೇಕು, ಮನೆಯಲ್ಲಿ ಆಹಾರಪದಾರ್ಥ ವೇನಾದರೂ ಇದ್ದರೆ ಕೊಡು”ಎಂದನು. ಆಗ ಮನೆಯಲ್ಲಿ ಯಾವುದೆಂದು