ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦೩ ಆಧ್ಯಾ, ೮೦.] ದಶಮಸ್ಕಂಧವು. ಕೈಯಿಂದಲೇ ಅವನ ಮೈಗೆ ಲೇಪಿಸಿದನು, ಸುಗಂಧ, ಧೂಪ, ದೀಪಗಳನ್ನು ತಂದು ಸತ್ಕರಿಸಿದನು. ಬೇಕುಬೇಕಾದ ಉಪಹಾರಗಳನ್ನು ತಂದಿಟ್ಟನು. ಹೀಗೆ ಸಮಸ್ಯಸತ್ಕಾರಗಳನ್ನೂ ನಡೆಸಿದಮೇಲೆ, ಉತ್ತಮವಾದ ಗೋದಾ ನದೊಡನೆ ತಾಂಬೂಲವನ್ನು ಕೊಟ್ಟು, ಕುಶಲಪ್ರಶ್ನೆಗಳನ್ನು ಮಾಡಿದನು. ಆಹಾರವಿಲ್ಲದೆ ಕೃಶನಾಗಿ, ಚರ್ಮವೆಲ್ಲವೂ ಸುಕ್ಕಿ, ಅಂಗಾಂಗಗಳಲ್ಲಿಯೂ ನರಗಳು ಕಾಣಿಸುತ್ತಿರುವ ಆ ಬ್ರಾಹ್ಮಣನನ್ನು, ರುಕ್ಕಿಣೀದೇವಿಯಕೂಡ ನಾನಾವಿಧವಾಗಿ ಉಪಚರಿಸಿದಳು, ಅವನ ಆಯಾಸಪರಿಹಾರಾರ್ಥರಾಗಿ ತಾನೇ ಚಾಮರವನ್ನೂ, ಬೀಸಣಿಗೆಯನ್ನೂ ಹಿಡಿದು ಬೀಸುತ್ತಿದ್ದಳು, ಲೋ ಕೇಶ್ವರನಾದ ಕೃಷ್ಣನು, ಹೀಗೆ ಯಾವನೋ ಒಬ್ಬ ಬಡಬ್ರಾಹ್ಮಣನನ್ನು ಕರೆತಂದು ಮಂಚದಲ್ಲಿ ಕುಳ್ಳಿರಿಸಿ, ಅಷ್ಟು ವಿಧವಾಗಿ ಗೌರವಿಸಿದುದನ್ನು ನೋಡಿ, ಆ ಅಂತಃಪುರದ ಜನವೆಲ್ಲವೂ ಆಶ್ಚಯ್ಯಪಡುತ್ತ, “ ಆಹಾ ! ಇದೇ ನಿದು ? ತಿರುಕನಾದ ಈ ಬ್ರಾಹ್ಮಣನು ಪೂತ್ವದಲ್ಲಿ ಎಷ್ಟು ಪುಣ್ಯವನ್ನು ಮಾಡಿದ್ದನೋ? ಲೋಕದಲ್ಲಿ ಯಾರಿಗೂ ಗಣನೆಗೆ ಬಾರದ ಈ ಬಡಬ್ರಾಹ್ಮ ಣನೆಲ್ಲಿ? ಮೂರುಲೋಕಕ್ಕೂ ಪ್ರಭುವಾಗಿಯೂ, ಸಾಕ್ಷಾತ್ ಲಕ್ಷ್ಮಿದೇವಿಗೆ ನಿವಾಸಭೂತನಾಗಿಯೂ ಇರುವ ಈ ಕೃಷ್ಣನೆಲ್ಲಿ ? ಈ ಬ್ರಾಹ್ಮಣನನ್ನು ಕಂಡೊಡನೆ ಕೃಷ್ಣನು, ತನ್ನೊಡನೆ ಮಂಚದಮೇಲಿದ್ದ ಲಕ್ಷ್ಮಿ ಸ್ವರೂಪಿಣಿ ಯಾದ ರುಕ್ಷ್ಮಿಣಿಯನ್ನೂ ಅನಾದರಿಸಿ, ತನ್ನಣ್ಣನನ್ನು ಹೇಗೋಹಾಗೆ, ಇವನನ್ನು ಆಲಿಂಗಿಸಿಕೊಂಡನಲ್ಲ ! " ಎಂದು ಒಬ್ಬರಿಗೊಬ್ಬರು ಗುಸು ಗುಟ್ಟುತ್ತಿದ್ದರು. ಇಷ್ಟರಲ್ಲಿ ಕೃಷ್ಣಕುಚೇಲರಿಬ್ಬರೂ, ಒಬ್ಬರೊಬ್ಬರ ಕೈ ಹಿಡಿದು, ಪೂರದಲ್ಲಿ ತಾವು ಗುರುಕುಲವಾಸದಲ್ಲಿದ್ದಾಗ ನಡೆಸಿದ ಆಟಪಾಟಗಳೆಲ್ಲವನ್ನೂ ಹೇಳಿಕೊಂಡು, ವಿನೋದದಿಂದ ಮಾತಾಡುತಿದ್ದರು. ಇವೆಲ್ಲವೂ ನಡೆದಮೇಲೆ ಕೃಷ್ಣನು, ಆ ಬ್ರಾಹ್ಮಣನ ಯೋಗಕ್ಷೇಮವನ್ನು ವಿಚಾರಿಸತೊಡಗಿದನು. ಓ ಸುಧಾಮಾ ! ಗುರುಕುಲದಲ್ಲಿ ನೀನು ವೇದಾ ಧ್ಯಯನವನ್ನು ಮುಗಿಸಿದಮೇಲೆ, ವ್ರತಸಮಾರ್ತನವನ್ನು ಮಾಡಿ ಗುರು ದಕ್ಷಿ ಣೆಯನ್ನು ಸಮರ್ಪಿಸಿ ಬಂದೆಯಲ್ಲವೆ? ಆಮೇಲೆ ನೀನು ಮದುವೆಮಾಡಿಕೊಂ ಡಿರಬಹುದಷ್ಟೆ ? ಮದುವೆಯಾಗಿದ್ದರೆ ! ನಿನಗೆ ತಕ್ಕ ಭಾರೈಯು ಲಭಿ