ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮೪ ಶ್ರೀಮದ್ಭಾಗವತವು [ಅಧ್ಯಾ, ೮೦. ಸಿದಳೆ ? ಅವಳು ನಿನಗೆ ಅನುಕೂಲೆಯಾಗಿರುವಳಷ್ಟೆ? ಆದರೆ ನಿನ್ನ ಸ್ವಭಾ ವವನ್ನು ನೋಡಿದರೆ, ನಿನ್ನ ಮನಸ್ಸು ಕಾಮೋಪಭೋಗಗಳಲ್ಲಿ ಸಿಕ್ಕಿಬಿಳುವ ಹಾಗಿಲ್ಲ ! ಅದರಿಂದ ಕುಟುಂಬಭೋಗದಲ್ಲಿ ನಿನಗೆ ಅಷ್ಟಾಗಿ ಪ್ರೀತಿಯಿರದು! ನೀನು ವಿವೇಕಿಯಾದುದರಿಂದ, ಹಣದಲ್ಲಿಯೂ ಅಷ್ಟಾಗಿ ನಿನಗೆ ಆಸೆಯಿಲ್ಲ ಎಂಬ ವಿಷಯವನ್ನೂ ನಾನು ಚೆನ್ನಾಗಿ ಬಲ್ಲೆನು. ಹೀಗೆಯೇ ಕೆಲವು ಜ್ಞಾನಿ ಗಳು, ಕಾಮಕ್ಕೆ ಸಿಕ್ಕಿಬೀಳದೆ ಕರಗಳನ್ನು ನಡೆಸುವರು. ಅವರು ಪ್ರಕೃತಿ ಸಂಬಂಧವನ್ನು ನೀಗುವ ಉದ್ದೇಶದಿಂದ ಬ್ರಹ್ಮವಿದ್ಯೆಗೆ ಆಂಗಭೂತ ವಾಗಿಯೇ ಕರಗಳನ್ನು ನಡೆಸುವರೇಹೊರತು ಕಾಮಾಭಿಸಂಧಿಯಿಂದಲ್ಲ. ನನ್ನಂತೆಯೇ ಆವರೂ ಆಯಾಕರ್ಮಗಳನ್ನು ನಡೆಸುವುದು,ಲೋಕಕ್ಕೆ ದಾರಿ ಯನ್ನು ತೋರಿಸಿಕೊಡುವುದಕ್ಕಲ್ಲದೆ ಬೇರೆಯಲ್ಲ. ಓ!ಬ್ರಾಹ್ಮಣಾ! ಗುರುಕು ಲದಲ್ಲಿ ನಾವಿಬ್ಬರೂ ಸಹಾಧ್ಯಾಯಿಗಳಾಗಿದ್ದುದನ್ನ ನೀನು ಮರೆತಿಲ್ಲವಷ್ಟೆ? ಗುರುಕುಲವಾಸದಿಂದಲ್ಲವೇ ದ್ವಿಜನು, ತಾನು ಅವಶ್ಯವಾಗಿ ತಿಳಿಯಬೇ ಕಾದ ಆತ್ಮ ಪರಮಾತ್ಮ ತತ್ವವನ್ನು ತಿಳಿದು, ಅಜ್ಞಾನವನ್ನು ನೀಗಿಸಿಕೊಳ್ಳು ವನು, ಆ ಗುರುಕುಲವಾಸದಿಂದಲ್ಲವೇ ಕರ್ಮಾನುಷ್ಠಾನಕ್ಕೆ ಸಾಧನವಾದ ಜ್ಞಾನವುಂಟಾಗುವುದು. ಗುರುಕುಲವಾಸವನ್ನೂ ಒಂದಾನೊಂದು ಮುಖ್ಯವಾದ ಆಶ್ರಮವೆಂದೇ ಹೇಳಬಹುದು. ತನಗೆ ಜ್ಞಾನೋಪ ದೇಶಮಾಡತಕ್ಕೆ ಗುರುವನ್ನು ಆದಿಪುರುಷನಾದ ಈಶ್ವರನೆಂಬ ಭಾವದಿಂದ ಲೇ ನೋಡಬೇಕು. ಲೋಕದಲ್ಲಿ ಸಂಸಾರಿಯಾದ ದ್ವಿಜನಿಗೆ, ತನ್ನ ಜನನಕ್ಕೆ ಕಾರಣನಾದ ತಂದೆಯೊಬ್ಬನೂ, ಉಪನಯನ ವೇದಾಧ್ಯಯನಗಳನ್ನು ಮಾ ಡಿಸಿ ಕರ್ಮಾನುಷ್ಠಾನಗಳಿಗೆ ಯೋಗ್ಯತೆಯನ್ನುಂಟುಮಾಡತಕ್ಕ ಆಚಾರ ನೊಬ್ಬನೂ, ಬ್ರಹ್ಮವಿದ್ಯೆಯನ್ನು ಪದೇತಿಸತಕ್ಕವನೊಬ್ಬನೂ, ಈ ಮೂವರೂ ಗುರುಗಳೆನಿಸಿಕೊಳ್ಳುವರು. ಈ ಮೂವರಲ್ಲಿ ಬ್ರಹ್ಮ ಜ್ಞಾನವನ್ನು ಪದೇಶಿಸಿ ದವನೇ ಉತ್ತಮಗುರುವು, ಅವನನ್ನು ಸಾಕ್ಷಾತ್ತಾಗಿ ನನ್ನ ಸ್ವರೂಪದಿಂದಲೇ ತಿಳಿಯಬೇಕು. ಓ ! ಬ್ರಾಹ್ಮಣೋತ್ರಮಾ! ಹೀಗೆ ಗುರುರೂಪದಿಂದ ನಾನು ಲೋಕದ ಎಲ್ಲಾ ವರ್ಣಾಶ್ರಮಗಳಿಗೂ, ಉಪದೇಶಿಸತಕ್ಕ ಜ್ಞಾನ ವನ್ನಾಶ್ರಯಿಸಿ, ಸಂಸಾರವೆಂಬ ಮಹಾಸಮುದ್ರವನ್ನು ದಾಟುವಂತ