ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨of೩ ಅಧ್ಯಾ, ೫೧. || ದಶಮಸ್ಕಂಧವು. ಲ್ಲಿ ಶ್ರೀವತ್ಸವೆಂಬ ಮಚ್ಚೆ ! ಕಂಠದಲ್ಲಿ ಕೌಸ್ತುಭಮಣಿ ! ಯಾವಾಗಲೂ ಉಲ್ಲಾಸದಿಂದರಳಿ ಕಾಂತಿವಿಶಿಷ್ಟವಾದ ಕಪೋಲಗಳು ' ಮುಖದಲ್ಲಿ ಶುದ್ಧ ವಾದ ಮುಗುಳ್ಳಗೆ!ಮಾಂಸಪಟ್ಟಿಯಿಂದುಬ್ಬಿ ನೀಡಿದನಾಲ್ಕುತೋಳುಗಳು. ಆಗಲೇ ಆರಳಿದಕಮಲದಂತಕೆಂಪಾದ ಕಣ್ಣುಗಳು!ಕಿವಿಯಲ್ಲಿ ಜಾಜ್ವಲ್ಯಮಾ ನವಾಗಿ ಹೊಳೆಯುವ ಮಕರಕುಂಡಲಗಳು ! ಇಂತಹ ದಿವ್ಯಾಕೃತಿಯನ್ನು ನೋಡಿದೊಡನೆ ಕಾಲಯವನನು ತನ್ನಲ್ಲಿ ತಾನು ಆಶ್ಚ ಲ್ಯದಿಂದ ಓಹೋ ! ಈತನೇ ಯಾದವರಿಗೆಲ್ಲಾ ಬೆಂಬಲವೆನಿಸಿರುವ ವಸುದೇವಪುತ್ರನಾದ ಕೃಷ್ಣ ನೆಂದು ತೋರುವುದು, ಇದರಲ್ಲಿ ಸಂದೇಹವಿಲ್ಲ. ನಾರದನು ಹೇಳಿದ ಲಕ್ಷಣ ಗಳೆಲ್ಲವೂ ಇವನಲ್ಲಿ ಕಾಣುತ್ತಿರುವುವು. ಇದೋ ! ಇವನಿಗೆ ಎದೆಯಲ್ಲಿ ಶ್ರೀ ವತ್ಸವೆಂಬ ಮಚ್ಚೆಯ ಶೋಭಿಸುತ್ತಿರುವುದು, ನಾಲ್ಕು ಭುಜಗಳು! ಕಮಲ ದಂತೆ ಕಣ್ಣುಗಳು ! ಕಂಠದಲ್ಲಿ ವನಮಾಲಿಕೆ! ಅತ್ಯಂತಸುಂದರಾಕೃತಿ ! ಆದುದರಿಂದ ನಾರದನು ಹೇಳಿದಂತೆ ಈಗ ನನಗೆ ಸಮಾನಬಲವುಳ್ಳ ವೀರ ನು ಈತನೇ ಆಗಿರಬೇಕು, ಆದರೆ ಈತನು ಈಗ ನಿರಾಯುಧನಾಗಿ ಕಾಲು ನಡೆಯಿಂದಲೇ ಬರುತ್ತಿರುವನು. ಆದುದರಿಂದ ಈಗ ನಾನುಮಾತ್ರ ಆಯು ಧವನ್ನು ಹಿಡಿದು ಅವನೊಡನೆ ಯುದ್ಧಮಾಡುವುದು ಧಮ್ಮವಲ್ಲ ! ನಾನೂ ಅವನಂತೆ ನಿರಾಯುಧನಾಗಿಯೇ ಯುದ್ಧಕ್ಕೆ ನಿಲ್ಲುವೆನು”ಎಂದು ನಿಶ್ಚಯಿಸಿ ಕೊಂಡು,ಯೋಗಿಗಳ ಮನಸ್ಸಿಗೂ ಸಿಕ್ಕಲಾರದ ಆ ಭಗವಂತನನ್ನು ಕೈಯಿಂ ದ ಹಿಡಿಯುವುದಕ್ಕಾಗಿ ಆತುರದಿಂದ ಓಡಿಬಂದನು. ಅತ್ತಲಾಗಿ ಕೃಷ್ಣನೂ ಕೂಡ, ಈ ಯವನನು ಸಮೀಪಕ್ಕೆ ಬರುವವರೆಗೂ ಸಮ್ಮನಿದ್ದು, ಆಮೇಲೆ ಅವನಿಗೆ ಭರಪಟ್ಗೊಡುವವನಂತೆ ಹಿಂತಿರುಗಿ ಓಡಲಾರಂಭಿಸಿದನು. ಕಾಲ ಯವನನೂ ಅವನನ್ನು ಹಿಡಿಯಬೇಕೆಂದು ಬೆನ್ನಟ್ಟಿ ಹೋಗುತಿದ್ದನು.ಕೃಷ್ಣ ನು ಆಗಾಗ ಅವನ ಕೈಗೆ ಸಿಕ್ಕಿಬಿದ್ದಹಾಗೆ ಆಸೆಯನ್ನು ತೋರಿಸುತ್ತ, ಕೊನೆ ಗೆ ಅವನನ್ನು ಒಂದಾನೊಂದು ಪಕ್ವತಗುಹೆಗೆ ಕರೆತಂದನು.ಇಷ್ಟರಲ್ಲಿ ಯವ ವನು ಬಹಳವಾಗಿ ಬಳಲಿ, ಕೈಗೆ ಸಿಕ್ಕದೆ ಓಡುತ್ತಿರುವ ಕೃಷ್ಣನನ್ನು ಕುರಿತು (ಎಲಕೃಷ್ಣಾ! ಉತ್ತಮವಾದ ಯದುಕುಲದಲ್ಲಿ ಹುಟ್ಟಿದ ನೀನು, ಯುದ್ಧ ಕ್ಯಾಗಿ ಹೀಗೆ ಭಯಪಟ್ಟೋಡುವುದು ಉಚಿತವಲ್ಲ ! ನಿಲ್ಲು!"ಎಂದು ಮೂದ