ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩08 ಅಧ್ಯಾ. ೮೦] ದಶಮಸ್ಕಂಥವು. ವರೇ ಪುರುಷಾರ್ಥತತ್ವವನ್ನು ಬಲ್ಲವರು. ಸತ್ವಭೂತಾತ್ಮಕನಾದ ನಾನು ಗುರುಶುಶ್ರಫೆಯಿಂದ ಹೇಗೆ ತೃಪ್ತನಾಗುವೆನೋ, ಹಾಗೆ ಪಂಚಮಹಾಯ ಜ್ಯಗಳಿಂದಲಾಗಲಿ, ಕುಲೋನ್ನತಿಯಿಂದಾಗಲಿ, ತಪಸ್ಸಿನಿಂದಾಗಲಿ, ಶಮ ದಮಾದಿಗುಣಗಳಿಂದಾಗಲಿ ತುಷಿಹೊಂದಲಾರೆನು. ಎಲೈ ಮಿತ್ರನೆ ! ನಾ ವಿಬ್ಬರೂ ಗುರುಕುಲದಲ್ಲಿದ್ದಾಗ, ಒಂದಾನೊಂದುದಿನದಲ್ಲಿ, ಗುರುಪತ್ತಿ ಯು ನಮ್ಮಿಬ್ಬರಿಗೂ ಕಾಡಿನಲ್ಲಿಸೌದೆಯನ್ನು ಕಡಿದುತರಬೇಕೆಂದು ಹೇಳಿಕಳುಹಿಸಿ ದುದು ನಿನ್ನ ನೆನಪಿನಲ್ಲಿರುವುದಷ್ಟೆ? ಆಗ ಅಕಾಲವಾಗಿದ್ದರೂ ನಾವು, ಆಕೆ ಯ ಆಜ್ಞೆಯನ್ನು ಮೀರಲಾರದೆ, ಒಂದುದೊಡ್ಡ ಅರಣ್ಯಕ್ಕೆ ಪ್ರವೇಶಿಸಿದೆವು. ಆಗ ಭಯಂಕರವಾದ ಮಳೆಗಾಳಿಗಳು ಆರಂಭಿಸಿದುವು.ಮೇಫುಗಳು ಭಯಂ ಕರವಾಗಿ ಗರ್ಜಿಸುತಿದ್ದುವು. ಹೊತ್ತು ಮುಳುಗಿ,ಸುತ್ತಲೂ ಗಾಢಾಂಧಕಾಂ ವು ಕವಿದುಹೋಯಿತು. ಎಲ್ಲಿ ನೋಡಿದರೂ ನೀರುನಿಂತು, ಹಳ್ಳತಿಟ್ಟುಗಳೇ ಕಾಣದಂತಾಯಿತು. ಎಲ್ಲೆಲ್ಲಿಯೂ ಪ್ರವಾಹಗಳು ಹರಿಯುತ್ತಿದ್ದುದರಿಂದ, ನಾವು ಮಳೆಗಾಳಿಗಳ ಬಾಧೆಗೆ ಸಿಕ್ಕಿ,ದಿಕ್ಕುತೋರದೆ, ಒಬ್ಬರಿಗೊಬ್ಬರು ಕೈಹಿ ಡಿದುಕೊಂಡು,ಹೇಗೋ ಪ್ರಯತ್ನದಿಂದ ಒಂದಿಷ್ಟು ಕಟ್ಟಿಗೆಯನ್ನು ಸಂಗ್ರ ಹಿಸಿ, ಅದನ್ನು ಹೊರಲಾರದೆ ಹೊತ್ತುಕೊಂಡು,ದಾರಿತಪ್ಪಿ ಆಶಾಡನ್ನೆಲ್ಲಾ ಸುತ್ತುತಿದ್ದೆವೆಲ್ಲವೆ? ಆರಾತ್ರಿಯೆಲ್ಲಾ ನಾವು ಹಿಂತಿರುಗಿ ಬಾರದುದನ್ನು ನೋ ಡಿ,ನಮ್ಮ ಗುರುವಾದ ಸಾಂದೀಪನಿಯು,ಬೆಳಗಾದಮೇಲೆ ತೇನೇನಮ್ಮನ್ನು ಹುಡುಕಿಕೊಂಡುಬಂದು, ನಮ್ಮ ದುರವಸ್ಥೆಯನ್ನು ನೋಡಿ ಕನಿಕರಪಡುತ್ತ ಆಹಾ ! ಬಾಲಕರೆ! ಪ್ರಾಣಿಗಳೆಲ್ಲಕ್ಕೂ ದೇಹಕ್ಕಿಂತ ಪ್ರಿಯವಾದುದು ಬೇರೊಂದಿಲ್ಲ. ನೀವು ಅದನ್ನೂ ಲಕ್ಷಮಾಡದೆ, ನನ್ನಲ್ಲಿರುವ ಭಕ್ತಿಯಿಂದ ನನಗಾಗಿ ಇಷ್ಟು ಕಷ್ಟಕ್ಕೆ ಗುರಿಯಾಗಿರಲ್ಲವೆ ? ಹೀಗೆ ಪರಿಶುದ್ಧಭಾವದಿಂದ ಆತ್ಮ ತ್ಯಾಗಪೂರಕವಾಗಿ ಗುರುವಿಗೆ ಪ್ರಿಯವನ್ನು ಂಟಮಡವದೇ ಸಫ್ಟ್ ಪೈರ ಲಕ್ಷಣವು, ಅವರು ಗುರುವಿನಿಂದ ತಾವು ಪಡೆದ ಉಪಕಾರಕ್ಕೆ ನೂ ಡಬೇಕಾದ ಪ್ರತ್ಯುಪಕಾರವೂ ಅದೇ!ನಿಮ್ಮ ವಿಧೇಯತೆಗಾಗಿ ನಾನು ಬಹಳ ಸಂತೋಷಪಟ್ಟೆನು, ನಿಮ್ಮ ಕೋರಿಕೆಗಳೆಲ್ಲವೂ ಕೈಗೂಡಲಿ ! ನೀವು ನನ್ನಿಂ ದ ಅಭ್ಯಸಿಸಿದ ವೇದಗಳೆಲ್ಲವೂ ನಿಮಗೆ ಇಹಲೋಕದಲ್ಲಿಯೂ, ಪರಲೋಕ