ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦೬ ಗವತವು [ಅಧ್ಯಾ ೮೧. ದಲ್ಲಿಯೂ ಫಲಕಾರಿಗಳಾಗಲಿ !” ಎಂದು ಅನುಗ್ರಹಿಸಲಿಲ್ಲವೆ ? ಹೀಗೆಯೇ ನಾವು ಗುರುಕುಲವಾಸದಲ್ಲಿದ್ದಾಗ ನಡೆದ ಅನೇಕಸಂಗತಿಗಳು ನಿನ್ನ ನೆನಪಿನಲ್ಲಿ ರುವುವಷ್ಯ ? ಓ ! ಬ್ರಾಹ್ಮಣೋತ್ತಮಾ ! ಹೀಗೆ ಗುರುವಿನ ಅನುಗ್ರಹಕ್ಕೆ ಪಾತ್ರನಾದವನೇ ಮುಕ್ತಿಗೂ ಅರ್ಹನಾಗುವನು” ಎಂದನು. ಆಗ ಬ್ರಾ ಹ್ಮಣನು.ಕೃಷ್ಣನನ್ನು ಕುರಿತು « ಓ ! ದೇವದೇವಾ! ಜಗದ್ದು ರೋ! ನನಗೆ ಆ ಗುರುವಿನ ಅನುಗ್ರಹವು ಹಾಗಿರಲಿ!ಸತ್ಯಸಂಕಲ್ಪ ನಾದ ನಿನ್ನೊಡನೆ ಸಹವಾ ಸವು ಲಭಿಸಿದಮಾತ್ರದಿಂದಲೇ ನಾನು ಕೃತಾರ್ಥನಾದೆನು, ನಿನ್ನ ಸಹವಾಸ ಪಾತ್ರನಾದ ನನಗೆ ಯಾವ ಕೋರಿಕೆಯು ತಾನೇ ದುರ್ಲಭವು.. ಪ್ರಭ ! ವೇದಮಯವಾದ ಬ್ರಹ್ಮವು ಯಾವನ ದೇಹವೆನಿಸಿರುವುದೋ, ಸಮಸ್ತ ಪುರುಷಾರ್ಥಗಳಿಗೂ ಯಾವನು ಬೀಜವೆನಿಸಿರುವನೋ, ಲೋಕಗುರುವಾದ ಅಂತಹ ನೀನು ಗುರುಕುಲವಾಸವನ್ನು ಮಾಡುತಿದ್ದುದಕ್ಕಿಂತಲೂ ಆಶ್ಚರ ವೇನಿರುವುದು” ಎಂದನು. ಇದು ಎಂಬತ್ತನೆಯ ಅಧ್ಯಾಯವು. + ಕೃಷ್ಣನು ಕುಚೇಲನನ್ನು ಅನುಗ್ರಹಿಸಿದುದು.wwಕೃಷ್ಣಕುಚೇಲರಿಬ್ಬರೂ ಹೀಗೆ ಮಾತಾಡುತ್ತಿರುವಾಗ, ಕೃಷ್ಣನು ಸಮಸ್ತಭೂತಗಳ ಮನೋವ್ಯಾಪಾರವನ್ನೂ ಬಲ್ಲವನಾದುದರಿಂದ, ಕುಚೇ ಲವ ಮನೋಭಾವವನ್ನು ತಿಳಿದು ಮುಗುಳ್ಳ ಗೆಯೊಡನೆ « ಓ ಬ್ರಾಹ್ಮಣಾ ? ನಾನು ನಿನ್ನ ಹಳೇಸ್ನೇಹಿತನಲ್ಲವೆ?ಮನೆಯಿಂದಬರುವಾಗ ನನಗೆಯಾವವಸ್ತು ವನ್ನು ಕಾಣಿಕೆಯಾಗಿ ತಂದಿರುವೆ? ಸಂಕೋಚವಿಲ್ಲದೆ ಹೇಳು! ನನ್ನಲ್ಲಿ ಪ್ರೀತಿ ಯುಳ್ಳವರು ತಂದುಕೊಡತಕ್ಕ ವಸ್ತುವು ಅತ್ಯಲ್ಪವಾಗಿದ್ದರೂ ಅದನ್ನು ನಾನು ಮಹತ್ತಾಗಿ ಭಾವಿಸುವೆನು, ನನ್ನಲ್ಲಿ ನಿಜವಾದ ಪ್ರೀತಿಯಿಲ್ಲದವರು ಎಷ್ಮೆ ಉತ್ತಮಪದಾರ್ಥಗಳನ್ನು ತಂದರೂ, ಅದು ನನಗೆ ಸಂತೋಷವ ನ್ನುಂಟುಮಾಡಲಾರದು, ಒಂದುಪತ್ರವಾಗಲಿ,ಒಂದು ಹೂವಾಗಲಿ,ಒಂದು ಹಣ್ಣಾಗಲಿ, ಕೊನೆಗೆ ಒಂದಿಷ್ಟು ನೀರಾಗಲಿ, ಪರಿಶುಬ್ಬಾತ್ಮನಾದವನು ನನಗೆ ಭಕ್ತಿಯಿಂದ ತಂದೊಪ್ಪಿಸಿದ ಕಾಣಿಕೆಯು ಎಷ್ಟೆ ಅಲ್ಪವಾಗಿದ್ದರೂ ಸಂತೋಷದಿಂದ ಭುಜಿಸುವೆನು. ಆದುದರಿಂದ ನನಗಾಗಿ ಮನೆಯಿಂದ ಏ