ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೮೧] ದಶಮಸ್ಕಂಧವು. ೨೩೦೭ ನಾದರೂ ತಂದಿದ್ದರೆ ಸಂಕೋಚವಿಲ್ಲದೆ ಕೊಡು” ಎಂದನು. ಕೃಷ್ಣನು ಇಷ್ಟು ವಿಧವಾಗಿ ಹೇಳಿದರೂ, ಆ ಬ್ರಾಹ್ಮಣನು ಸಾಕ್ಷಾತ್ ಲಕ್ಷ್ಮೀಪತಿಯಾ ದ ಕೃಷ್ಣನಿಗಾಗಿ ತಾನು ಬಟ್ಟೆಯಲ್ಲಿ ಕಟ್ಟಿ ತಂದಿದ್ದ ಅವಲಕ್ಕಿಯನ್ನು ತೋ ರಿಸಲಾರದೆ, ಬಹಳ ಹೊತ್ತಿನವರೆಗೆ ತಲೆಯನ್ನು ತಗ್ಗಿಸಿ ನಾಚಿಕೆಯಿಂದ ಸುಮ್ಮನಿದ್ದನು, ಕೃಷ್ಣನು ಸತ್ವಸಾಕ್ಷಿಯಾಗಿ, ಸಮಸ್ತ ಭೂತಗಳ ಅಂತರಂಗವನ್ನೂ ತಿಳಿಯಬಲ್ಲವನಾದುದರಿಂದ, ಆ ಬ್ರಾಹ್ಮಣನು ತನ್ನ ಲ್ಲಿಗೆ ಬಂದ ಕಾರಣವನ್ನು ತಿಳಿದುಕೊಂಡು, ಮನಸ್ಸಿನಲ್ಲಿ ( ಈತನಾದರೋ ಇದುವರೆಗೆ ಮೋಕ್ಷಾಪೇಕ್ಷೆಯಿಂದಹೊರತು ಧನಾರ್ಥಿಯಾಗಿ ನನ್ನನ್ನು ಭಜಿಸಿದವನಲ್ಲ, ಪತಿವ್ರತೆಯಾದ ತನ್ನ ಪತ್ನಿಯ ನಿರ್ಬಂಧದಿಂದ, ಈಗ ಹಣ ವನ್ನು ಯಾಚಿಸುವುದಕ್ಕಾಗಿ ನನ್ನಲ್ಲಿಗೆ ಬಂದಿರುವನು. ಈತನು ನನಗೆ ಪರಮ ಭಕ್ತನುಮಾತ್ರವೇ ಅಲ್ಲದೆ, ಆ ಬಾಲ್ಯಸ್ನೇಹಿತನಾಗಿಯೂ ಇರುವನು. ಆದು ದರಿಂದ ಈಗ ನಾನು ಇವನಿಗೆ, ಲೋಕದಲ್ಲಿ ಬೇರೊಬ್ಬರಿಗೂ ದುರಭವಾದ ಭಾಗ್ಯವನ್ನು ಕೈಗೂಡಿಸುವೆನು” ಎಂದು ಸಂಕಲ್ಪಿಸಿಕೊಂಡನು. ತಿರುಗಿ ಆ ಬ್ರಾಹ್ಮಣನನ್ನು , ತನಗಾಗಿ ತಂದಿರುವ ಕಾಣಿಕೆಯೇನೆಂದು ಪುನಃಪುನಃ ನಿರ್ಬಂಧಿಸುತ್ತ, ಕೊನೆಗೆ ತಾನೇ ಬಲಾತ್ಕಾರದಿಂದ ಆ ಬ್ರಾಹ್ಮಣನ ಮೈಯನ್ನು ಶೋಧಿಸಿ, ಅವನು ತನ್ನ ಚಿಂದಿಬಟ್ಟೆಯಲ್ಲಿ ಕಟ್ಟಿದ ಅವಲಕ್ಕಿಯ ಗಂಟನ್ನು ಕಂಡುಹಿಡಿದು 11 ಬ್ರಾಹ್ಮಣಾ ! ಇದೇನಿದು !” ಎಂದು ಅದನ್ನು ಬಿಚ್ಚಿ ನೋಡಿದನು, ಆಮೇಲೆ ಬ್ರಾಹ್ಮಣನನ್ನು ಕುರಿತು, < ಮಿತ್ರನೆ ! ಇದನ್ನೇ ಅಲ್ಲವೇ ನೀನು ನನಗೆ ಕಾಣಿಕೆಯಾಗಿ ತಂದಿರುವೆ? ಈ ಅವಲಕ್ಕಿಯ ನ್ನು ಕಂಡರೆಸನಗೆ ಬಹಳ ಇಷ್ಟವುತಾನುಂಟೋ ಮೂರುಲೋಕವುಂಟೋ” ಎಂಬ ಸಾಮತಿಯನ್ನು ಕೇಳಿಲ್ಲವೆ ? ಅದರಂತೆ ಈಗೆ ನಾನು ತೃಪ್ತನಾದರೆ ಲೋಕವೆಲ್ಲವೂ ತೃಪ್ತಿ ಹೊಂದಿದಂತೆ ಭಾವಿಸುವೆನು.” ಎಂದು ಹೇಳಿ, ಆತ್ಯಾ ತುರದಿಂದ ಅದರಲ್ಲಿ ಒಂದುಹಿಡಿಯಷ್ಟು ಅವಲಕ್ಕಿಯನ್ನು ತೆಗೆದು, ಥಟ್ಟನೆ ಬಾಯಿಗೆ ಹಾಕಿಕೊಂಡನು. ಇನ್ನೊಂದಾವರ್ತಿ ಇನ್ನೊಂದು ಹಿಡಿಯನ್ನು ಎತ್ತುವುದಕ್ಕಾಗಿ ಆ ಗಂಟೆಗೆ ಕೈಯಿಕ್ಕುವಾಗ, ಲಕ್ಷ್ಮೀ ಸ್ವರೂಪೆಯಾದ ರುಸ್ಮಿಣೀದೇವಿಯು, ಥಟ್ಟನೆ ಬಂದು, ಆ ಕೃಷ್ಣನ ಕೈಯನ್ನು ಹಿಡಿದು,ಆಷ್ಯ