ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ೨೩೧೨ ಶ್ರೀಮದ್ಭಾಗವತವು [ಅಧ್ಯಾ, ೮೧. ವನ್ನು ಈಡೇರಿಸಿಕೊಡುವವಿಷಯದಲ್ಲಿ ನಾಚಿಕೆಪಟ್ಟವನಂತೆ ಬಾಯಿಂದ ಯಾವಮಾತನ್ನೂ ಆಡದೆ,ಪರೋಕ್ಷದಲ್ಲಿದ್ದೇ ನಡೆಸಿಬಿಡುವನು.ತಾನು ಭಕ್ಷ್ಯ ರಿಗೆ ಮಹತ್ತಾಗ ಐಶ್ವರವನ್ನು ಕೊಟ್ಟರೂ, ಅದನ್ನು ಅತ್ಯಲ್ಪವೆಂದೇ ಭಾವಿ ಸುವನು ಭಕ್ತರು ತನಗೆ ಕೊಡತಕ್ಕುದು ಅತ್ಯಲ್ಪವಾಗಿದ್ದರೂ ಅದನ್ನೇ ಮಹ ತೆಂದು ತಿಳಿದು ಸಂತೋಷಪಡುವನು, ಆ ಮಹಾತ್ಮನ ಸ್ವಭಾವವೇ ಇದು! ಅದರಿಂದಲ್ಲವೇ ನನ್ನಲ್ಲಿದ್ದ ಒಂದುಹಿಡಿ ಅವಲಕ್ಕಿಯನ್ನು ಎಷ್ಟೊಪ್ರೀತಿಯಿಂ ದ ಪರಿಗ್ರಹಿಸಿದನು. ಹೀಗೆ ಸಮಸ್ಯಗುಣಗಳಿಗೂ ನಿವಾಸಭೂತನಾಗಿ, ಮಹಾನುಭಾವನಾಗಿರುವ ಆ ಭಗವಂತನೊಡನೆ ನನಗೆ ಜನ್ಮ ಜನ್ಮ ದಲ್ಲಿಯೂ ಇದೇವಿಧವಾದ ಪ್ರೇಮವೂ, ಸ್ನೇಹವೂ, ಹಿತಾಕಾಂಕ್ಷೆ ಯೂ, ದಾಸ್ಯವೂ, ಇದೇಮೊದಲಾದ ಸವಿಧಸಂಬಂಧವೂ ಉಂಟಾಗಲಿ! ನನಗೆ ಬೇರೆ ಯಾವ ಐಶ್ವರದಲ್ಲಿಯೂ ಅಪೇಕ್ಷೆಯಿಲ್ಲ! ಆ ಮಹಾತ್ಮನೊಡನೆಯ, ಆತನ ಭಕ್ತರೊಡನೆಯೂ, ನಿರಂತರವಾದ ಸಂಬಂಧವಿದ್ದರೆ ಸಾಕು!ಅವನು ನನ್ನಲ್ಲಿ ವಿಶೇಷಪ್ರೇಮವನ್ನು ತೋರಿಸಿ, ನನಗೆ ಇಷ್ಟೊಂದು ಮಹಾಭಾ ಗ್ಯವನ್ನು ಕೊಟ್ಟಿರುವುದರಿಂದ, ಅವನು ನನ್ನನ್ನು ತನ್ನ ಭಕ್ತಕೋಟೆಯಲ್ಲಿ ಸೇ ರಿಸಿಕೊಂಡಿರುವಹಾಗೆ ತೋರಲಿಲ್ಲ. ಏಕೆಂದರೆ, ಆತನು ಯಾರಲ್ಲಿ ಸಂಪೂರ್ಣ ವಾದ ಪ್ರೀತಿಯನ್ನು ತೋರಿಸಬೇಕೆಂದಿರುವನೋ, ಅವರಿಗೆ ಈವಿಧವಾದ ಐಶ್ವ ರವನ್ನು ಕೊಡಲಾರನು. ಈ ಸಂಪತ್ತುಗಳೆಲ್ಲವೂ ಮನುಷ್ಯನಿಗೆ ಮದವನ್ನು ಹೆಚ್ ಸಿ, ಭೋಗಾಸಕ್ಕನನ್ನಾಗಿ ಮಾಡುವುದರಿಂದ ನರಕ ಕಾರಣಗಳೆನಿಸುವು ವು, ಈ ವಿಷಯವನ್ನು ಯೋಚಿಸಿಯೇ ಆ ಭಗವಂತನು, ತನ್ನ ಅಂತರಂಗಭ ಕರಿಗೆ ಇಂತಹ ಭೋಗಸಾಮಗ್ರಿಯನ್ನು ಕೊಡಲಾರನು. ಇದರಿಂದ ಆ ಕೃ ವ್ಯನಿಗೆ ನನ್ನಲ್ಲಿ ಪ್ರೀತಿಯಿಲ್ಲವೆಂದೇ ಭಾವಿಸಬೇಕಾಗಿರುವುದು.ಆ ಭಗವಂತನಿ ಗೆ ನನ್ನಲ್ಲಿ ಈ ಅಭಿಪ್ರಾಯವು ಬಿಟ್ಟು ಹೋಗುವಂತೆ, ಅವನಲ್ಲಿ ನನಗೆ ನಿರಂತರವಾದ ಭಕ್ತಿಯುಂಟಾಗಲಿ”ಎಂದು ಆ ಕುಚೇಲನ,ಮನಸ್ಸಿನಲ್ಲಿ ನಿಶ್ನ ಯಿಸಿಕೊಂಡು, ಕೃಷ್ಣಾನುಗ್ರಹದಿಂದ ತನಗೆ ಲಭಿಸಿದ ಭೋಗಾನುಭವದಲ್ಲಿ ಅಷ್ಟಾಗಿ ಆಸೆಯನ್ನು ತೋರಿಸದೆ, ಆತನಲ್ಲಿ ಭಕ್ತಿಯೊಂದನ್ನೇ ಮುಖ್ಯವಾಗಿ ಟ್ಟುಕೊಂಡು, ತನ್ನ ಪತೀಪುತ್ರರೊಡನೆ ಸುಖವಾಗಿರುತ್ತಿದ್ದನು. ಓ! ಪರೀಕ್ಷೆ