ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೨.] - ದಶಮಸ್ಕಂಧವು. ೨೩೧೩ ದ್ರಾಜಾ ! ಪರಾತ್ಪರನೆನಿಸಿಕೊಂಡ ಶ್ರೀ ಕೃಷ್ಣನು, ಆ ದರಿದ್ರಬ್ರಾಹ್ಮಣ ನನ್ನು ತನಗೆ ಸಮಾನವಾಗಿ ಭಾವಿಸಿ,ಅಷ್ಟೊಂದುಗೌರವವನ್ನು ತೋರಿಸಿದು ದೇನೂ ವಿಶೇಷವೆಂದು ತಿಳಿಯಬೇಡ!ತಾನೇ ಬ್ರಹ್ಮಾ ದೇವತೆಗಳಿಗೂ ದೇವ ನಾಗಿ, ಯಜ್ಞಪತಿಯೆನಿಸಿಕೊಂಡಿದ್ದರೂ, ಆ ಕೃಷ್ಣನು ಬ್ರಾಹ್ಮಣರೇ ತನ ಗೆ ದೈವವೆಂದೂ, ಅವರೇ ತನಗೆ ಪ್ರಭುಗಳೆಂದೂ, ಆ ಬ್ರಾಹ್ಮಣರಿಗಿಂತಲೂ ತನಗೆ ಮೇಲಾದ ಗುರುವಿಲ್ಲವೆಂದೂ ಭಾವಿಸುವನು. ಆ ಭಗವಂತನು ಯಾರಿ ಗೂ ದುರ್ಜಯನಾಗಿದ್ದರೂ, ತನ್ನ ಭಕ್ತರಿಂದ ಜಯಿಸಲ್ಪಟ್ಟಂತೆ ಅವರಿಗೆ ವಶನಾಗುವನು. ಅಂತಹ ಭಗವಂತನಿಗೆ ಆ ಬಾಲ್ಯಸ್ನೇಹಿತನಾದ ಕುಚೇ ಲನು, ಕೃಷ್ಣಾನುಗ್ರಹದಿಂದ ತನಗೆ ಬಂದ ಭಾಗ್ಯವನ್ನನುಭವಿಸುವ ಕಾಲದ ಕ್ಲಿಯೂ, ಆ ಪರಮಾತ್ಮನ ನಿರಂತರಧ್ಯಾನದಿಂದಲೂ, ಅದಕ್ಕೆ ಅಂಗಭೂತ ವಾಗಿ ನಡೆಸಿದ ಯಜ್ಞಾದಿಕರ್ಮಗಳಿಂದಲೂ, ತನ್ನ ಸಂಸಾರಬಂಧವನ್ನು ನೀಗಿ, ಮುಕ್ಕರಿಗೆ ಲಭಿಸತಕ್ಕ ಪರಮಪದವನ್ನು ಹೊಂದಿದನು. ಓ! ಪರೀಕ್ಷಿ ದ್ರಾಜಾ ! ಬ್ರಾಹ್ಮಣಪ್ರಿಯನಾದ ಶ್ರೀ ಕೃಷ್ಣನ ಈ ಚರಿತ್ರವನ್ನು ಕೇಳಿ, ಇದರ ಮೂಲಕವಾಗಿ ಆ ಭಗವಂತನಲ್ಲಿ ಭಕ್ತಿಯನ್ನು ಸಾಧಿಸಿದವರೆಲ್ಲ ರೂ,ಆ ಕುಚೇಲನಂತೆಯೇ ಕರ್ಮಬಂಧವನ್ನು ಸೀಗಿ ಮುಕ್ತಿಯನ್ನು ಹೊಂ ದವರು. ಇದು ಎಂಬತ್ತೊಂದನೆಯ ಅಧ್ಯಾ ಯವು. { ಒಮ್ಮೆ ಸೂರಗ್ರಹಣಕಾಲದಲ್ಲಿ ಕೃಷ್ಣಾದಿಗಳು | ಹೋದುದು ಓ! ಪರೀಕ್ಷಿದಾಜಾ ! ಕೇಳು ! ಕೃಷ್ಣಬಲರಾಮರಿಬ್ಬರೂ ದ್ವಾರ ಕೆಯಲ್ಲಿ ಸುಖದಿಂದಿರುವಾಗ, ಒಮ್ಮೆ ಕಲ್ಪಾಂತದಲ್ಲಿ ಹೇಗೋಹಾಗೆ ಭಯಂ ಕರವಾದ ಒಂದು ಸೂರಗ್ರಹಣವು ಸಂಭವಿಸಿತು. ಜ್ಯೋತಿಷ್ಠರಿಂದ ಮೊ ದಲೇ ನಿರ್ಣಯಿಸಲ್ಪಟ್ಟಿದ್ದ ಈ ಕಾಲದಲ್ಲಿ, ದ್ವಾರಕಾವಾಸಿಗಳಾದ ಶಿಷ್ಯರೆಲ್ಲರೂ, ಗ್ರಹಣಕಾಲದಲ್ಲಿ ನಡೆಸತಕ್ಕ ಕರ್ಮಗಳನ್ನು ನಡೆಸುವುದ ಕ್ಯಾಗಿ, ಕುರುಕ್ಷೇತ್ರದಲ್ಲಿರುವ ಸ್ಯಮಂತಪಂಚಕವೆಂಬ ಸ್ಥಳಕ್ಕೆ ಹೋದರು. ಆ ಸ್ಯಮಂತಪಂಚಕದ ವೃತ್ತಾಂತವನ್ನು ನೀನೂ ಕೇಳಿರಬಹುದಷ್ಟೆ, ಹಿಲ