ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೧೬ ಶ್ರೀಮದ್ಭಾಗವತನ [ಅಧ್ಯಾ. ೮೨ ಆನಂದಬಾಷ್ಪದಿಂದಲೂ ಅನೋನ್ಯಪ್ರೇಮವನ್ನು ತೋರಿಸುತ್ತ, ಒಬ್ಬರ ನ್ನೊಬ್ಬರು ಕೈನೀಡಿ ಆಲಿಂಗಿಸಿಕೊಂಡರು. ಆಮೇಲೆ ಆ ಸೀಪುರುಷರೆಲ್ಲರೂ. ಅಲ್ಲಿ ಬಂದಿದ್ದ ಗುರುಹಿರಿಯರಿಗೆ ನಮಸ್ಕರಿಸಿ, ತಮಗಿಂತಲೂ ಕಿರಿಯವರಾಗಿ ತಮಗೆ ನಮಸ್ಕಾರಮಾಡಿದವರನ್ನು ಪ್ರೇಮದಿಂದ ಮನ್ನಿಸಿ, ಅವರ ಕುಶಲ ಪ್ರಶ್ನ ವನ್ನು ಕೇಳುತ್ಯ, ಕೊನೆಗೆ ಎಲ್ಲರೂ ಗುಂಪಾಗಿ ಕುಳಿತು ವಿನೋದ ದಿಂದ ಮಾತಾಡುತಿದ್ದರು. ಹಾಗೆಯೇ ಅಲ್ಲಿ ಸ್ನಾನಕ್ಕಾಗಿ ಬಂದ ಕುಂತೀದೇವಿಯೂ ಕೂಡ, ತನ್ನ ಸಹೋದರರನ್ನೂ, ಸಹೋದರಿಯರನ್ನೂ ಅವರವರ ಮಕ್ಕಳನ್ನೂ, ಸಹೋದರಪತ್ನಿ ಯರನ್ನೂ, ಶ್ರೀ ಕೃಷ್ಣನನ್ನೂ ಕಂಡು ಮಾತಾಡಿಸುತ್ಯ, ತಾನು ಹಿಂದೆ ಅನುಭವಿಸಿದ ದುಃಖವನ್ನೇ ತಿಳಿಯ ದಂತೆ ಸಂತೋಷದಿಂದಿದ್ದಳು. ಆಮೇಲೆ ಆಕೆಯು ಅಣ್ಣನಾದ ವಸು ದೇವನನ್ನು ನೋಡಿ ಅಣ್ಣಾ! ಲೋಕದಲ್ಲಿ ನನ್ನ ಜನ್ಮವು ನಿರರ್ಥಕವು. ನಾನು ಹುಟ್ಟಿ ಒಂದು ಸುಖವನ್ನಾ ದರೂ ಅನುಭವಿಸಲಿಲ್ಲ. ನನ್ನ ಇಷ್ಟ ವೊಂದಾದರೂ ಕೈಗೂಡಲಿಲ್ಲ! ನಾನು ಕಷ್ಟದಲ್ಲಿದ್ದಾಗ ಬೇರೊಬ್ಬರು ನನ್ನ ಮಾತನ್ನಾ ದರೂ ಮನಸ್ಸಿಗೆ ತಂದುಕೊಳ್ಳುತ್ತಿರಲಿಲ್ಲ ! ನನಗೆ ಮಾತ್ರವೇನು ? ದೈವವು ಯಾರಿಗೆ ಪ್ರತಿಕೂಲವೋ, ಅಂತವರನ್ನು ಸ್ನೇಹಿತರಾಗಲಿ, ಬಂಧುಗಳಾಗಲಿ, ಅಣ್ಣತಮ್ಮಂದಿರಾಗಲಿ, ತಾಯಿ ತಂದೆಗಳಾಗಲಿ ಲಕ್ಷಮಾಡುವುದಿಲ್ಲ” ಎಂದಳು. ಆಗ ವಸುದೇವನು. ಕುಂತಿ ಯನ್ನು ಕುರಿತು, (ಅಮ್ಮಾ ! ಮನುಷ್ಯರೆಲ್ಲರೂ ಈಶ್ವರನ ಆಜ್ಞಾಥಿ-ನರಾ ಗಿ ನಡೆ ಯತಕ್ಕವರಲ್ಲವೆ? ಹೀಗಿರುವಾಗ ನಮ್ಮಲ್ಲಿ ನೀನು ಅಸಮಾಧಾನ ಪಡಬಾರದು, ಏಕೆಂದರೆ, ಈಶ್ವರನು ಜನರನ್ನು ತನ್ನ ವಶಾನುವರ್ತಿಗಳನ್ನಾಗಿ ಮಾಡಿಕೊಂಡು, ತನಗೆ ಇಷ್ಟ ಬಂದ ರೀತಿಯಲ್ಲಿ ಅವರಿಂದ ಕೆಲಸವನ್ನು ಮಾಡಿ ಸುವನು. ಆದುದರಿಂದ ಯಾವ ಮನುಷ್ಯನೇ ಆಗಲಿ ತನ್ನ ಇಷ್ಟದಂತೆ ನಡೆಯಲಾರನು. ನಾವೂ ಕಂಸನ ಭಯದಿಂದ ದಿಕ್ಕುದಿಕ್ಕಿಗೆ ಪಲಾಯನ ಮಾಡಿದ್ದೆವಲ್ಲವೆ? ಓ! ತಂಗೀ ! ದೈವಾನುಗ್ರಹದಿಂದ ಈಗಲ್ಲವೇ ನಾವೂ ಇಲ್ಲಿಗೆ ಬಂದು ಪೂರಸ್ಥಿತಿಯಲ್ಲಿರುವೆವು.” ಎಂದನು. ಓ ! ಪರೀಕ್ಷಿದ್ರಾಜಾ ! ಹೀಗೆಯೇ ಒಬ್ಬರಿಗೊಬ್ಬರು ತಮ್ಮ ಯೋಗಕ್ಷೇಮವನ್ನು ಹೇಳಿಕೊಳ್ಳು