ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೨.] ದಶಮಸ್ಕಂಧವು. ೨೦೧೩ ತಿರುವಾಗ, ಕೃಷ್ಣನೂಕೂಡ, ಉಗ್ರಸೇವನೇ ಮೊದಲಾದ ರಾಜರೆಲ್ಲರನ್ನೂ ನೋಡಿ, ಅವರ ಸುಖದುಃಖಗಳನ್ನು ವಿಚಾರಿಸುತ್ತಿದ್ದನು. ಅವರೂ ಶ್ರೀಕೃಷ್ಣ ದರ್ಶನದಿಂದ ಪರಮಾನಂದಭರಿತರಾಗಿದ್ದರು. ಅಲ್ಲಿ ಯಾತ್ರೆಗಾಗಿ ಬಂದಿದ್ದ ಭೀಷ್ಮ, ದ್ರೋಣ, ಧೃತರಾಷ್ಟ್ರ, ಗಾಂಧಾರಿ, ಅವಳ ಮಕ್ಕಳಾದ ದುರೊಧನಾದಿಗಳು, ಅವರ ಪತ್ನಿ ಯರು, ಪಾಂಡವರು, ಕುಂತಿ, ಸಂಜ ಯ, ವಿದುರ, ಕೃಪ, ಕುಂತಿಭೆ ಗೀಜ, ವಿರಾಟ, ಭೀಷ್ಟಕ, ನಗ್ನ ಜಿತ್ತು, ಪುರು ಜಿತು, ದುಪದ, ಶಲ್ಯ, ದೃಷ್ಯ ಕೇತು, ಕಾಶಿರಾಜ, ದಮಘೋಷ, ವಿಶಾ ಲಾಕ್ಷ, ಮೈಥಿಲ, ಮದ್ರ, ಕೇಕೆಯ, ಯುಧಾಮನ್ಯು, ಸುಶರ್ಮ, ಬಾಕ್ಸಿಕ, ಮೊದಲಾದ ರಾಜರು, ತಮ್ಮ ಪತ್ನಿ ಪುತ್ರಾದಿಗಳೊಡನೆ ಬಂದು, ಲಕ್ಷ್ಮಿಗೆ ನಿವಾಸಭೂತವಾದ ಶ್ರೀಕೃಷ್ಣನ ದಿವ್ಯಮೂರ್ತಿಯನ್ನು ದರ್ಶನ ಮಾ:ತಿ, ಆನಂ ವಾತ್ಸಲ್ಯಗಳಲ್ಲಿ ಮಗ್ನರಾಗಿದ್ದರು. ಇನ್ನೂ ಕೆಲವು ರಾಜರು, ಧರ್ಮರಾಜನ ಮೂಲಕವಾಗಿ ಶ್ರೀಕೃಷ್ಣನ ದರ್ಶನವನ್ನು ಮಾಡಿ ಆನಂದಿತ ರಾದರು, ಆಗ ಬಲರಾಮಕೃಷ್ಣರಿಬ್ಬರೂ ತನ್ನನ್ನು ನೋಡುವುದಕ್ಕಾಗಿ ಬಂದ ಗಾಜರೆಲ್ಲರನ್ನೂ ಯಥೋಚಿತವಾಗಿ ಗೌರವಿಸಿದರು. ಆಗ ಆ ರಾಜ ರೆಲ್ಲರೂ, ಶ್ರೀ ಕೃಷ್ಣನ ಆಶ್ರಯದಲ್ಲಿರುವ ವೃಷ್ಟಿಗಳನ್ನು ನೋಡಿ, ಅವರ ಭಾಗ್ಯವನ್ನು ಕೊಂಡಾಡುತ್ಯ ಹೀಗೆಂದು ಹೇಳುವರು. “ಓ ಭೋಜಪತೀ! ಉಗ್ರಸೇನಾ! ಈ ಮನುಷ್ಯಲೋಕದಲ್ಲಿ ನಿಮ್ಮ ಜನ್ಮದೇ ಸಾರ್ಥಕವು'ಏಕೆಂ ದರೆ, ಮಹಾಯೋಗಿಗಳಿಗೂ ಗೋಚರನಲ್ಲದ ಶ್ರೀ ಕೃಷ್ಣನು ಯಾವಾಗಲೂ ನಿಮ್ಮ ಕಣ್ಣ ಮುಂದೆ ನಿಂತಿರುವನು, ವೇದಾಂತಗೋಚರವಾದ ಯಾವನ ಕೀರ್ತಿಯೂ, ಯಾವನ ಪಾದತೀರ್ಥವಾದ ಗಂಗಾನದಿಯೂ, ಯಾವನ ವಾಕ್ಯರೂಪಗಳಾದ ಕಾವ್ಯಪುರಾಣಾದಿಗಳೂ, ಶಾಸನರೂಪವಾದ ವೇದ ವೂ, ಈ ಜಗತ್ತೆಲ್ಲವನ್ನೂ ಪಾವನಮಾಡುತ್ತಿರುವುವೊ, ಈ ಭೂಮಿಗೆ ದುಷ್ಕಾಲವಶದಿಂದ ತನ್ನ ಸಹಜವಾದ ಮಹಿಮೆಯು ಕೆಟ್ಟು ಹೋಗಿದ್ದರೂ, ಯಾವನ ಪಾದಸ್ಪರ್ಶಬಲದಿಂದ ತಿರುಗಿ ಅದು ತನ್ನ ಮಹತ್ವವನ್ನು ಹೊಂದಿ, ನಮಗೆ ಸಾಭೀಷ್ಟಗಳನ್ನೂ ಕೊಡುತ್ತಿರುವುದೋ, ಅಂತಹ ಪರಮಾತ್ಮ ನಾದ ಶ್ರೀ ಕೃಷ್ಣನೊಡನೆ ನಿಮಗೆ ನಿತ್ಯಸಹವಾಸವಿರುವುದಲ್ಲವೆ ? ಮತ್ತು