ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೧೮ ಶ್ರೀಮದ್ಭಾಗವತವು [ಅಥ್ಯಾ, ೮೨. ಆ ಶ್ರೀ ಕೃಷ್ಣನ ದರ್ಶನದಿಂದಲೂ,ಆತನ ಅಂಗಸ್ಪರ್ಶದಿಂದ, ಆಗಾಗ ಆತನೊಡನೆ ಸಂಭಾಷಣದಿಂದಲೂ, ಆಗಾಗ ಅವನನ್ನು ಹಿಂಬಾಲಿಸುವುದ ರಿಂದ, ಅವನೊಡನೆ ಶಯನಾಸನಭೋಜನಾದಿಗಳಿಂದಲೂ, ವಿವಾಹ ಸಂಬಂಧದಿಂದಲೂ, ಕುಲಗೋತ್ರಸಂಬಂಧದಿಂದಲೂ ನೀವು ಧನ್ಯರಾಗಿರು ವಿರಿ ? ಅಷ್ಟೇಕೆ ? ಆ ಭಗವಂತನು ಸಾಕ್ಷಾತ್ಕಾಗಿ ನಿಮ್ಮ ಮನೆಯಲ್ಲಿಯೇ ಅವತರಿಸಿರತಕ್ಕವನು, ನೀವು ಪ್ರವೃತ್ತಿ ಮಾರ್ಗದಲ್ಲಿ ವರ್ತಿಸುತ್ತಿದ್ದರೂ, ಆ ಭಗವಂತನ ಸಂಬಂಧದಿಂದ ಸ್ವರ್ಗಾಪವರ್ಗಗಳಲ್ಲಿಯೂ ನಿಮಗೆ ಆಸೆ ಯುಂಟಾಗದು. ಈ ವಿಧವಾದ ನಿಮ್ಮ ಜನ್ಮ ವಲ್ಲವೇ ಲೋಕದಲ್ಲಿ ಉತ್ತಮ ಜನ್ಮವೆನಿಸುವುದು” ಎಂದು ಸ್ತೋತ್ರಮಾಡುತಿದ್ದರು. ಓ! ಪರೀಕ್ಷಿದ್ರಾಜಾ! ಯಾದವರೆಲ್ಲರೂ ಕೃಷ್ಣನೊಡನೆ ಕುರುಕ್ಷೇತ್ರಕ್ಕೆ ಹೋಗಿರುವ ಸಂಗತಿಯನ್ನು ತಿಳಿದೇ ನಂದಗೋಪನೂ, ಅವರನ್ನು ನೋಡುವುದ ಕ್ಯಾಗಿ ತನ್ನ ಕಡೆಯ ಕೆಲವು ಗೋಪಾಲಕರನ್ನು ಕರೆದುಕೊಂಡು, ಅಲ್ಲಿಗೆ ಹೊರಟುಬಂದಿದ್ದನು. ಆಗ ವೃಷ್ಟಿಗಳೆಲ್ಲರೂ ಬಹುಕಾಲದಿಂದ ಕಾಣದಿದ್ದ ಆ ನಂದನನ್ನು ಕಂಡೊಡನೆ, ಹೋದ ಪ್ರಾಣವನ್ನು ತಿರುಗಿ ಪಡೆದಷ್ಟು ಸಂತೋಷದಿಂದ, ಇದಿರೆದ್ದು ಬಂದು, ಆತನನ್ನಾಲಿಂಗಿಸಿಕೊಂಡರು. ವಸು ದೇವನೂಕೂಡ ಪರಮಪ್ರೇಮದಿಂದ ಅವರೆಲ್ಲರನ್ನೂ ಆಲಿಂಗಿಸಿಕೊಂಡನು. ಅಲ್ಲಿ ಬಲರಾಮಕೃಷ್ಣರನ್ನು ಕಂಡೊಡನೆ, ನಂದನಿಗೆ ಹಿಂದೆ ಕಂಸನಿಂದ ಆವರಿಗುಂಟಾದ ಕಷ್ಟಗಳೂ, ಅವರನ್ನು ಗೋಕುಲದಲ್ಲಿ ಬಚ್ಚಿಟ್ಟಿದ್ದು ದೂ, ಇವೇ ಮೊದಲಾದ ಪೂರೈವೃತ್ತಾಂತಗಳೆಲ್ಲವೂ ನೆನಪಿಗೆ ಬಂದುವು. ರಾಮ ಕೃಷ್ಣರಿಬ್ಬರೂ ಮುಂದೆ ಬಂದು, ತಂದೆತಾಯಿಗಳಿಗೆ ನಮಸ್ಕರಿಸಿ ಅವರ ಸ್ನಾಲಿಂಗಿಸಿಕೊಂಡರು. ತಂದೆತಾಯಿಗಳನ್ನು ನೋಡಿದ ಸಂತೋಷದಿಂದ ಅವರ ಕಣ್ಣುಗಳಲ್ಲಿ ಆನಂದಬಾಷ್ಪವು ಉಕ್ಕಿ ಬರುತಿತ್ತು. ಗದ್ಯ ದಸ್ವರದಿಂದ ಸ್ಪಷ್ಟವಾಗಿ ಮಾತಾಡಲಾರದೆ,ಸುಮ್ಮನೆ ಆನಂದಪರವಶರಾಗಿ ನಿಂತಿದ್ದರು. ಆಗ ನಂದಯಶೋದೆಯರಿಬ್ಬರೂ, ಆಮಕ್ಕಳನ್ನು ಕರೆದು, ತೊಡೆಯಮೇಲೆ ಕುಳ್ಳಿರಿಸಿಕೊಂಡು, ಆ ಆನಂದದಿಂದ ಹಿಂದಿನ ದುಃಖವನ್ನೆಲ್ಲಾ ಮರೆತರು. ಈ ಸಮಯಕ್ಕೆ ಸರಿಯಾಗಿ, ಬಲರಾಮಕೃಷ್ಣರಿಗೆ ಹೆತ್ತ ತಾಯಿಯರಾದ