ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೯ ಅಧ್ಯಾ, ೮೨.] ದಶಮಸ್ಕಂಧವು. ರೋಹಿಣೀದೇವಕಿಯರೂಕೂಡ, ಆ, ಯಶೋದೆಯನ್ನು ಪ್ರೇಮದಿಂದಾಲಿಂ. ಗಿಸಿ, ಹಿಂದೆ ಅವಳು ತಮಗೆ ಮಾಡಿದ ಉಪಕಾರವನ್ನು ಸ್ಮರಿಸಿಕೊಂಡು ಪ್ರೇಮಬಾಷ್ಪವನ್ನು ಸುರಿಸುತ್ತ, ಗದ್ಯ ದಸ್ವರದಿಂದ ಹೀಗೆಂದು ಹೇಳು ವರು, “ಓ ! ವ್ರಜೇಶ್ವರಿ ! ನೀನೂ, ನಿನ್ನ ಪತಿಯಾದ ನಂದಗೋಪನೂ, ನಮ್ಮಲ್ಲಿ ತೋರಿಸಿದ ಪ್ರೇಮವನ್ನು ಎಂದಿಗೆತಾನೇ ಮರೆಯುವೆವು! ಆ ವಿಧ ವಾದ ಉಪಕಾರವನ್ನು ಈ ದೇಹವಿರುವವರೆಗೂ ಮರೆಯಲಾರೆವು! ನಿನ್ನಿಂದ ನಾವು ಪಡೆದ ಉಪಕಾರಕ್ಕೆ, ನಿಮಗೆ ಮಹೇಂದ್ರನ ಐಶ್ವರವನ್ನು ಕೊಟ್ಟ ರೂ ಸಾಟಿಯಾಗಲಾರದು, ಈ ಮಕ್ಕಳಿಬ್ಬರೂ ತಮಗೆ ಹೆತ್ತ ತಾಯಿತಂ ದೆಗಳಾರೆಂಬುದನ್ನೇ ತಿಳಿಯಲಾರದಷ್ಟು ಶೈಶವಾವಸ್ಥೆಯಲ್ಲಿದ್ದಾಗ,ನಿಮ್ಮ ಕೈ ಯಲ್ಲಿಬಿದ್ದು, ಸತ್ವವಿಧದಿಂದಲೂ ನಿಮ್ಮಿಂದ ಪೋಷಿಸಲ್ಪಟ್ಟರು.ಅವರಿಗೆ ನಾ ಮಕರಣಾದಿಸಂಸ್ಕಾರಗಳೂ ನಿಮ್ಮಿಂದಲೇ ನಡೆದುವು.ಇವರು ಇಷ್ಟು ಪುರೋ ವೃದ್ಧಿಗೆ ಬಂದು ನಿಮ್ಮಿಂದಲೇ : ರೆಪ್ಪೆಗಳು ಕಣ್ಣನ್ನು ಹೇಗೋಹಾಗೆ, ನೀವಿಬ್ಬರೂ ಇವರನ್ನು ಎಷ್ಟೊಜಾಗರೂಕತೆಯಿಂದ ಕಾಪಾಡುತ್ತ ಬಂದಿರಿ! ಇವರಿಬ್ಬರೂ ನಿಮ್ಮಿಂದರಕ್ಷಿತರಾಗಿ ಯಾವ ಭಯವನ್ನೂ ಕಾಣದೆ,ನಿಮ್ಮ ಮನೆ ಯಲ್ಲಿ ಬೆಳೆದು ಮುಂದಕ್ಕೆ ಬಂದರು, ಆದರೆ ಈ ವಿಷಯದಲ್ಲಿ ನಾವು ನಿಮ್ಮನ್ನು ಹೊಸದಾಗಿ ಸೋತ್ರಮಾಡಬೇಕಾದುದೇನೂ ಇಲ್ಲ. ನಿಮ್ಮಂತಹ ಸಾತ್ವಿಕ ಸ್ವಭಾವವುಳ್ಳವರಿಗೆ, ತನ್ನ ವರೆಂದೂ, ಇತರರೆಂದೂ ಭೇದಬುದ್ಧಿಯಿಲ್ಲದಿರು ವುದು ಸಹಜವೇ: ಆದುದರಿಂದ,ಕಂಡವರ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ನೋಡುತಿದ್ದುದು, ನಿಮ್ಮ ವಿಷಯದಲ್ಲಿ ಏನೂ ವಿಶೇಷವಲ್ಲ.” ಎಂದರು. ಓ! ಪರೀಕ್ಷೆ ಬ್ರಾಜಾ ! ಹೀಗೆಯೇ ನಂದನೊಡನೆ ಬಂದಿದ್ದ ಗೋಪಿಯರೊಕೊ ಡ, ತಮಗೆ ಬಹುಕಾಲದಿಂದ ಕಾಣಿಸದ ಕೃಷ್ಣನನ್ನು ನಮ್ಮ ದೃಷ್ಟಿಯಿಂದ ನೋಡುತ್ತ, ಆ ಕೃಷ್ಣದರ್ಶನಕ್ಕೆ ಆಗಾಗ ವಿಘಾತವನ್ನುಂ ಟುಮಾಡುವ ತಮ್ಮ ಎವೆಯಾ ಟವನ್ನು ನಿಂದಿಸುತ್ತ, ನೇತ್ರರಂಧಗಳ ಮೂಲಕವಾಗಿ ಆತನ ಮರ್ತಿಯನ್ನು ಹೃದಯದಲ್ಲಿಟ್ಟುಕೊಂಡು, ಮನಸ್ಸಿ ನಿಂದಲೇ ಆಲಿಂಗಿಸಿಕೊಂಡರು. ಆತನ ಸಂತತಧ್ಯಾನದಿಂದ, ಯೋಗಿಗಳಿಗೂ ದುರ್ಲಭವಾದ ತನ್ಮಯತ್ವವನ್ನು ಹೊಂದಿದಂತಾದರು, ಹೀಗೆ ಗೋಪಿಯ.