ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨೦ ಶ್ರೀಮದ್ಭಾಗವತವು [ಅಧ್ಯಾ, ೮೨. ರು ತನ್ನನ್ನೇ ಏಕಾಗ್ರಮನಸ್ಸಿನಿಂದ ಧ್ಯಾನಿಸುತ್ತಿರುವುದನ್ನು ನೋಡಿ ಕೃಷ್ಣನು,ಅವರಲ್ಲಿ ಒಬ್ಬೊಬ್ಬರೊಡನೆಯೂ ಏಕಾಂತವಾಗಿ ಕಲೆತು, ಕುಶಲ ಪ್ರಶ್ನ ಪೂರೈಕವಾಗಿ ಅವರನ್ನು ಪ್ರೇಮದಿಂದಾಲಿಂಗಿಸಿಕೊಂಡು, ಕೊನೆಗೆ ಅವರೆಲ್ಲರನ್ನೂ ನೋಡಿ ಮಂದಹಾಸಪೂಕವಾಗಿ ಹೀಗೆಂದು ಹೇಳುವನು. 4 ಓ ! ಸಖೀಮಣಿಯರೆ ! ನಾವು ಸಾಧುಜನಗಳ ಕಾರಾರ್ಥವಾಗಿ ನಿಮ್ಮ ನ್ನು ಬಿಟ್ಟು ಹೋಗಿ ಬಹಳದಿವಸಗಳಾದುವು. ನೀವು ನಮ್ಮನ್ನು ಮರೆತಿಲ್ಲ ವಷ್ಟೆ ? ಲೋಕಕಂಟಕರಾದ ಶತ್ರುಗಳನ್ನು ನಿಗ್ರಹಿಸುವುದಕ್ಕಾಗಿ ನಾವು ಅಲ್ಲಿ ನಿಂತುಬಿಡಬೇಕಾಯಿತೇ ಹೊರತು, ನಿಮ್ಮಲ್ಲಿ ಅಲಕ್ಷಭಾವದಿಂದಲ್ಲ ! ನೀವು ನಮ್ಮನ್ನು ಕೃತಘ್ರ ರಂದು ಶಂಕಿಸಬಾರದು, ಭಗವಂತು ತನ್ನ ಇ ಚ್ಛಾನುಸಾರವಾಗಿ ಪ್ರಾಣಿಗಳಿಗೆ ಸಂಯೋಗವಿಯೋಗಗಳನ್ನು ಉಂಟು ಮಾಡುವನು. ಆದುದರಿಂದ, ನಮ್ಮ ನಮ್ಮ ಕೂಡಾಟಗಳಿಗೂ, ಅಗಲಿಕೆಗೂ ಆ ದೈವಸಂಕಲ್ಪವೇ ಮುಖ್ಯ ಕಾರಣವು, ಗಾಳಿಯು ಆಕಾಶದಲ್ಲಿರುವ ಮೇ ಫುಗಳನ್ನೂ, ಹುಲ್ಲುಕಡ್ಡಿಗಳನ್ನೂ, ದೂದಿಯನ್ನೂ ,ನೆಲದ ರೇಣುಗಳನ್ನೂ , ಆಗಾಗ ತನ್ನ ವೇಗದಿಂದ ಒಟ್ಟುಗೂಡಿಸಿ, ತಿರುಗಿ ಕದಲಿಸಿಬಿಡುವಂತೆ ಯೆ, ಸೃಷ್ಟಿಕರ್ತನಾದ ಭಗವಂತನೂಕೂಡ, ಭೂತಗಳನ್ನು ಸೇರಿಸುತ್ತಲ ಅಗಲಿಸುತ್ತಲೂ ಇರುವನು. ಈ ವಿಷಯದಲ್ಲಿ ನಮ್ಮ ಯತ್ನ ವೇನಿದೆ ? ಓ ! ಸಖಿ ಯರೇ ! ಈವಿಧವಾದ ಸಂಯೋಗ ವಿಯೋಗಗಳಿಂದುಂಟಾಗುವ ಸುಖ ದುಃಖಗಳನ್ನು ನೀಗಿಸಿ, ಮುಕ್ತಿಯನ್ನುಂಟು ಮಾಡುವುದಕ್ಕೆ, ನನ್ನಲ್ಲಿ ದೃಢ ವಾದ ಭಕ್ತಿಯೊಂದೇ ಮುಖ್ಯಸಾಧಕವು. ದೈವಾಧೀನದಿಂದ ನಿಮಗೆ ಅವಿಧ ವಾದ ಭಕ್ತಿಯಹುಟ್ಟಿರುವುದು. ಈಭಕ್ತಿಯೇ ಮುಂದೆ ನಿಮಗೆ ನನ್ನೊಡನೆ ನಿರಂತರವಾದ ಸಂಬಂಧವನ್ನುಂಟುಮಾಡುವುದು, ಮುಖ್ಯವಾದ ತತ್ವವನ್ನು ತಿಳಿಸುವೆನು ಕೇಳಿರಿ!ಸಮಭೂತಗಳ ಆದಿಯೂ ಅಂತವೂ ನಾನೇ! ನಾನು ಎಲ್ವಾಭೂತಗಳ ಒಳಗೂ, ಹೊರಗೂ ವ್ಯಾಪಿಸಿರತಕ್ಕವನು. ಪೃಥಿವಿ, ಆಪ್ಪ, ತೇಜಸ್ಸು, ವಾಯು, ಆಕಾಶವೆಂಬ ಪಂಚಭೂತಗಳೂ, ತಮ್ಮ ವಿಕಾರರೂಪವಾದ ದೇವಮನುಷ್ಯಾದಿಶರೀರಗಳಲ್ಲಿ ಒಳಗೂ, ಹೊರಗೂ ವ್ಯಾಪಿಸಿರುವಂತೆಯೇ, ನಾನೂ, ಸಮಸ್ತ ಪ್ರಪಂಚದ ಒಳಗೂ, ಹೊರಗೂ