ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥ್ಯಾ. ೮೩.] ದಶಮಸ್ಕಂಧವು. ೨೩೨೧ ವ್ಯಾಪಿಸಿರುವೆನು, ಈ ಆಕಾಶಾದಿಮಹಾಭೂತಗಳೂ, ಅವುಗಳ ಕಾಠ್ಯರೂಪ ವಾದ ಶರೀರವೂ, ಜೀವಾತ್ಮನೂ, ನನ್ನಿಂದ ವ್ಯಾಪ್ತವಾಗಿರುವುವು. ಆದುದ ರಿಂದ ಈ ಸಮಸ್ತ ಚೇತನಾ ಚೇತನಗಳೂ ನನ್ನ ಸ್ವರೂಪವೇ! ನಾನು ಹೀಗೆ ಸತ್ವವ್ಯಾಪಿಯಾಗಿದ್ದರೂ, ಅವುಗಳಿಗಿಂತ ಬೇರೆ ಯಾಗಿ, ಅವುಗಳ ದೋ ಷಕ್ಕೂ ಈಡಾಗದಿರುವುದರಿಂದ, ಪರನೆಂದೂ, ಆಕ್ಷನೆಂದೂ ಹೇಳಿಸಿ ಕೊಳ್ಳುವೆನು ” ಎಂದನು. ಓ 'ಪರೀಕ್ಷೆ ಪ್ರಾಜಾ ! ಹೀಗೆ ಕೃಷ್ಣನು,ಅಧ್ಯಾತ್ಮ ವಿದ್ಯೆ ಯನ್ನು ಪದೇತಿಸಿದಮೇಲೆ,ಗೋಪಿಯರೆಲ್ಲರೂ, ಆ ಉಪದೇಶವನ್ನೆ ಹೃ ದೃತವಾಗಿ ಮನನಮಾಡಿಕೊಂಡಿದ್ದರು. ಇದರಿಂದ ಅವರು ಗೂಡಿನಂತೆ ಜಿ' ವಾತ್ಮವನ್ನು ಮುಚ್ಚಿಟ್ಟು ಕೊಂಡಿರುವ ಕರ್ಮ ಮೂಲಕವಾದ ಅಜ್ಞಾನವನ್ನು ನೀಗಿ, ಆ ಕೃಷ್ಣನ ವಿಷಯವಾದ ಚಿಂತೆಯಲ್ಲಿಯೇ ಇದ್ದರು. ಕೊನೆಗೆ ಅವರೆಲ್ಲರೂ ಕೃಷ್ಣನನ್ನು ನೋಡಿ, “ ಓ ! ಪದ್ಮನಾಭಾ ! ಮಹಾ ಜ್ಞಾನಿಗಳಾದ ಯೋಗೀಶ್ವರರಿಗೂ ಕೊಡ, ಸಾಕ್ಷಾತ್ಕಾಗಿ ಕಣ್ಣಿಗೆ ಗೋಚರಿ ಸದೆ, ಕೇವಲಧ್ಯಾನ ಮಾತ್ರ ವಿಷಯವಾಗಿಯೂ, ಸಂಸಾರಸಾಗರದಲ್ಲಿ ಬಿದ್ದವರನ್ನು ಉದ್ಧರಿಸತಕ್ಕುದಾಗಿಯೂ ಇರುವ ನಿನ್ನ ಪಾದಾರವಿಂದವು, ಈ ಪ್ರಾಕೃತದೇಹದಲ್ಲಿರುವಾಗಲೂ ನಮ್ಮ ಮನಸ್ಸಿಗೆ ಯಾವಾಗಲೂ, ಸಾಕ್ಷಾತ್ತಾಗಿ ಗೋಚುಸುವಂತೆ ಅನುಗ್ರಹಿಸಬೇಕು. ಇಷ್ಟೇ ನಮ್ಮ ಕೋ ರಿಕೆ” ಎಂದರು. ಇದು ಎಂಬತ್ತೆರಡನೆಯ ಅಧ್ಯಾಯವು. 3 ಕೃಷ್ಣಪತಿ ಯರು ಬ್ರೌಪದಿಗೆ ತಮ್ಮ ತಮ್ಮ ವಿವಾಹ ) ಕ್ರಮಗಳನ್ನು ತಿಳಿಸಿದುದು ಹೀಗೆ ಕೃಷ್ಣನು ಗೋಪಿಯರಿಗೆ, ತನ್ನ ಪಾದಸಂಬಂಧವನ್ನನುಗ್ರ ಹಿಸಿ, ಆಮೇಲೆ ಧರಾಜನೇ ಮೊದಲಾದ ತನ್ನ ಬಂಧುಮಿತ್ರರೆಲ್ಲರನ್ನೂ ಕುಶಲಪ್ರಶ್ನಾ ಹಿಗಳಿಂದ ಮತ್ತೆ ಸಿದನು. ಲೋಕನಾಥನಾದ ಕೃಷ್ಣ ನಿಂದ ಸತ್ಯತಾದ ಆ ರಾಜರೆಲ್ಲರೂ, ಆ ಭಗವಂತನ ಪಾದಾರವಿಂದದರ್ಶ ನದಿಂದ ಪಾಪಮುಕ್ತರಾಗಿ, ಪರಮಸಂತೋಷದಿಂದ ಆತನನ್ನು ಕುರಿತು (ಓ ಪ್ರಭ ! ನಮ್ಮನ್ನು ಕುಶಲಪ್ರಶ್ನೆ ಮಾಡಿದೆಯಲ್ಲವೆ ? ಅಮೃತದಂತೆ ಮಧು