ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨೨ ಶ್ರೀಮದ್ಭಾಗವತವು - [ಅಧ್ಯಾ ೮೩, ರವಾಗಿಯೂ, ಮಹಾತ್ಮರ ಪರಿಶುದ್ಧವಾದ ಮುಖಾರವಿಂದದಿಂದ ಸ್ರವಿಸಿ ದುದಾಗಿಯೂ, ಜೀವನಿಗೆ ಪ್ರಕೃತಿ (ದೇಹ)ಸಂಬಂಥಕಾರಣವಾದ ಅನಾದಿ ಮಾಯೆಯನ್ನು ನೀಗಿಸತಕ್ಕುದಾಗಿಯೂ ಇರುವ ನಿನ್ನ ಕಥಾರಸವನ್ನು , ಕರ್ಣಪಟದಿಂದ ಪಾನಮಾಡತಕ್ಕವರಿಗೆ ಅಶುಭವೆಲ್ಲಿಯದು ? ದೇವಾ ! ನಿನ್ನ ನಿಜಸ್ವರೂಪವಾದರೋ ಆನಂದರಸಪ್ರವಾಹರೂಪವಾಗಿ, ಅಖಂಡ ವಾಗಿ, ಜ್ಞಾನಮಯವಾಗಿರುವುದು, ಪ್ರಪಂಚದ ಸೃಷ್ಟಿಸ್ಥಿತಿಸಂಹಾ ರಗಳಿಗೆ ನೀನು ನಿರಾಹಕನೇಹೊರತು, ಆ ವಿಕಾರಗಳು ನಿನ್ನನ್ನು ಮುಟ್ಟಲಾ ರವು ಇಂತಹ ಅಪ್ರಾಕೃತಸ್ವರೂಪವನ್ನೂ ಬಿಟ್ಟು, ನೀನು ಸ್ನೇಚ್ಛೆಯಿಂದ ಈ ಮಾನುಷರೂಪವನ್ನು ಪರಿಗ್ರಹಿಸಿರುವುದು, ಕಾಲಗತಿಯಿಂದ ಕಟ್ಟು ಹೋದ ವೇದಧರ್ಮಗಳನ್ನು ರಕ್ಷಿಸುವುದಕ್ಕೇ ಹೊರತು ಬೇರೆಯಲ್ಲ. ಹೀಗೆ ಆಶ್ರಕರವಾದ ಯೋಗಮಾಯಾಶಕ್ತಿಯಿಂದ ಈ ದಿವ್ಯ ವಿಗ್ರಹವನ್ನು ತಾಳಿ,ಪರಮಹಂಸರಾದ ಯೋಗಿಗಳಿಗೂ ಗತಿಯೆನಿಸಿಕೊಂಡ ನಿನ್ನನ್ನು ವಂ ದಿಸುವೆವು.” ಎಂದು ಸ್ತೋತ್ರಮಾಡಿದರು. ಹೀಗೆಯೇ ಕೌರವಯಾದವ ಸ್ತ್ರೀಯರೂಕೂಡ, ಅಲ್ಲಲ್ಲಿ ಗುಂಪುಗೂಡಿ, ಪುಣ್ಯಶ್ಲೋಕಶಿಖಾಮಣಿಯಾದ ಆ ಶ್ರೀಕೃಷ್ಣನ ಗುಣಗಳನ್ನೂ, ಚರಿತ್ರಗಳನ್ನೂ ಕೊಂಡಾಡುತ್ತಿದ್ದರು. ಹೀಗೆ ಸ್ತ್ರೀಯರೆಲ್ಲರೂ ಸೇರಿ, ಕೃಷ್ಣ ಕಥಾಲಾ ಪಗಳನ್ನು ಮಾಡುತ್ತಿರುವಾಗ ಬ್ರೌಪದಿಯು ಕೃಷ್ಣನ ಭಾರೈಯರನ್ನು ಕುರಿತು ಹೀಗೆಂದು ಪ್ರಶ್ನೆ ಮಾಡು ವಳು, 11 ಓ ರುಕ್ಕಿಗೇ ! ಓ ಭದ್ರೇ ! ಜಾಂಬವತೀ ! ಸತ್ಯಭಾಮೇ ! ಕಾ ಳಿಂದೀ ! ಮಿತ್ರವಿಂದೇ ! ರೋಹಿಣೀ ! ಲಕ್ಷಣೇ ! ಓ ಕೃಷ್ಣಪತಿ ಯರೆ ! ನಿಜಮಾಯೆಯಿಂದ ಲೀಲಾಮಾನುಷವಿಗ್ರಹವನ್ನು ಧರಿಸಿದ ಭಗವಂತನು, ನಿಮ್ಮೆಲ್ಲರನ್ನೂ ಯಾವಯಾವ ವಿಧದಿಂದ ವಿವಾಹಮಾಡಿಕೊಂಡನೋ, ಆ ವೃತ್ತಾಂತವನ್ನು ಕೇಳಬೇಕೆಂದು ನನಗೆ ಬಹಳ ಕುತೂಹಲವಿರುವುದು. ನಿಮ್ಮ ನಿಮ್ಮ ವಿವಾಹಕ್ರಮವನ್ನು ನನಗೆ ತಿಳಿಸಬೇಕು” ಎಂದಳು. ಆಗ ರುಕ್ಕಿಣಿಯು ( ಅಮ್ಮ ಬ್ರೌಪದಿ ! ನನ್ನ ಸಂಗತಿಯನ್ನು ಕೇಳು! ಧನುರ್ಧಾರಿಗಳಾದ ಅನೇಕರಾಜರು ನನ್ನನ್ನು ಶಿಶುಪಾಲನಿಗೆ ಕೊಟ್ಟು ವಿವಾ ಹಮಾಡಬೇಕೆಂಬ ಹಟದಿಂದ ಕಾದಿದ್ದರು. ಆದರೇನು? ಲೋಕದಲ್ಲಿ ದುರ್ಜ