ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨Off ಅಧ್ಯಾ, ೫೧.] ದಶಮಸ್ಕಂಧವು. ನು ಅವರನ್ನು ತನ್ನ ಪರಾಕ್ರಮದಿಂದ ರಕ್ಷಿಸುತಿದ್ದನು, ಆಮೇಲೆ ಆ ದೇವತೆ ಗಳು ರುದ್ರನ ಮಗನಾದ ಕುಮಾರಸ್ವಾಮಿಯನ್ನು ತಮ್ಮ ಸ್ವರ್ಗಲೋಕ ಕೈ ರಕ್ಷಕನನ್ನಾಗಿ ಪಡೆದಮೇಲೆ, ಈ ಮುಚುಕುಂದನನ್ನು ಕುರಿತು «ಓ, ರಾಜೇಂದ್ರಾ ! ಇದುವರೆಗೆ ನೀನು ನಮಗೆ ಅನೇಕಕಷ್ಟಗಳನ್ನು ಬಿಡಿಸಿ ಕಾ ಪಾಡಿದೆ: ಇನ್ನು ನೀನು ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು, ಓ ವಿರಾಗ್ರಣೀ : ನೀನು ನಮಗಾಗಿ ನಿನ್ನ ರಾಜ್ಯವನ್ನೂ ಬಿಟ್ಟು, ಸಮಸ್ತಕಾಮಭೋಗಗಳನ್ನೂ ನಿರಾಕರಿಸಿ, ಮನುಷ್ಯಲೋಕದಿಂದ ಇಲ್ಲಿಗೆ ಬಂದು ನಮ್ಮನ್ನು ಕಾಪಾಡುತಿದ್ದೆ, ಇನ್ನು ನೀನು ಹೋಗಬಹುದು, ಆದರೆ ಈಗ ಭೂಲೋಕದಲ್ಲಿ ನಿನ್ನ ಮಕ್ಕಳಾಗಲಿ, ಪತ್ನಿ ಯರಾಗಲಿ, ಜ್ಞಾತಿಗಳಾ ಗಲಿ, ಮಂತ್ರಿಗಳಾಗಲಿ, ಆಮಾತ್ಯರಾಗಲಿ, ಪ್ರಜೆಗಳಾಗಲಿ, ಯಾರೂ ಇರ ಲಾರರು. ನಿನ್ನ ಸಮಕಾಲದವರೆಲ್ಲರೂ ಈಗ ಕಾಲವಶರಾಗಿರುವರು. ಆ ಕಾಲವೆಂಬುದು ಬೇರೆಯಲ್ಲ, ಅವ್ಯಯನಾಗಿಯೂ, ಸಧ್ವನಿಯಾಮಕನಾ ಗಿಯೂ ಇರುವ ಭಗವಂತನೇ ಕಾಲಸ್ವರೂಪನಾಗಿರುವನು. ಆತನು ಬಲಾ ಢರಿಗೂ ಬಲಾಢನು, ಗೋಪಾಲಕರು ಪಶುಗಳನ್ನು ಹೇಗೋ ಹಾಗೆ, ಅವನು ಸಮಸ್ತಪ್ರಾಣಿಗಳನ್ನೂ ತನಗೆ ವಶಮಾಡಿಕೊಂಡು ಅದರಿಂದ ವಿನೋದಿಸುತ್ತಿರುವನು. ರಾಜೇಂದ್ರಾ ! ಮುಖ್ಯವಾಗಿ ನಾವು ನಿನಗೆ ಬಹಳ ಕೃತಜ್ಞರಾಗಿರುವೆವು, ನಿನಗೆ ಬೇಕಾದ ವರಗಳನ್ನು ಕೇಳು ! ಕೈವಲ್ಯವೊಂ ದನ್ನು ಹೊರತು ಬೇರೆ ಯಾವವರವನ್ನು ಕೇಳಿದರೂ ನಾವು ಕೊಡಬಲ್ಲೆವು. ಆ ಕೈವಲ್ಯವನ್ನು ಕೊಡುವುದಕ್ಕೆ ಭಗವಂತನಾದ ವಿಷ್ಣುವೊಬ್ಬನುಹೊ ರತು, ಬೇರೆಯಾವ ದೇವತೆಗಳೂ ಸಮರ್ಥರಲ್ಲ. ಅದೊಂದನ್ನು ಬಿಟ್ಟು ನಿನ ಗಿಷ್ಟವಾದ ವರವನ್ನು ಕೇಳಬಹುದು” ಎಂದರು. ಆಗ ಮುಚುಕುಂದನು ದೇವತೆಗಳಿಗೆ ನಮಸ್ಕರಿಸಿ, ಎಲೈ ದೇವತೆಗಳಿರಾ ! ನಾನು ಬಹುಕಾಲದಿಂದ ನಿದ್ರೆಯಿಲ್ಲದೆ ಆಯಾಸಪಟ್ಟಿರುವೆನು. ಆದುದರಿಂದ ನನಗೆ ಮಲಗುವುದ ಕ್ಯಾಗಿ ವಿವಿಕ್ತವಾದ ಒಂದು ಸ್ಥಳವನ್ನು ತೋರಿಸಿಕೊಟ್ಟರೆ ಸಾಕು"ಎಂದು ಕೇಳಿದನು, ಅದರಂತೆ ದೇವತೆಗಳು, ಆತನಿಗೆ ಈ ಪದ್ವತಗುಹೆಯನ್ನು ತೋರಿಸಿ ಕೊಟ್ಟು, ಅವನನ್ನು ಕುರಿತು ಓ ಮುಚುಕುಂದಾ ! ಇದೋ! ಈ ಗುಹೆ