ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨೫ ಅಧ್ಯಾ, ೮೩. ದಶಮಸ್ಕಂಧವು ಆಮೇಲೆ ಮಿತ್ರವಿಂದೆಯು (ಎಲೆ ಕೃಪೈ: ಕೇಳು! ನನಗೆ ಮೊದ ಲಿಂದಲೂ ಆ ಕೃಷ್ಣನಲ್ಲಿಯೇ ಮೋಹವಿದ್ದಿತು.ಆ ಕೃಷ್ಣನು ನನ್ನ ತಂದೆಗೆ ಮಾವನ ಮಗನಾದುದರಿಂದ, ಅವನೊಡನೆ ನಮಗೆ ಬಂಧುತ್ವದ ಸಂಬಂಧ ವೂ ಉಂಟು.ಇವೆಲ್ಲವನ್ನೂ ನೋಡಿ ನನ್ನ ತಂದೆಯು, ತಾನಾಗಿಯೇ ಕೃಷ್ಣ ನನ್ನು ಕರೆದು ನನ್ನನ್ನು ವಿವಾಹಮಾಡಿಕೊಟ್ಟನು. ಒಂದಕ್ಷೌಹಿಣೀಸೈನ್ಯ ವನ್ನೂ, ಅನೇಕದಾಸೀಜನರನ್ನೂ ಬಳುವಳಿಯಾಗಿಯೂ ಕಳುಹಿಸಿಕೊ ಟ್ಯನು, ಪುಣ್ಯಪಾಪಕರ್ಮಗಳಿಂದ ಸಂಸಾರದಲ್ಲಿ ತೊಳಲುತ್ತಿರುವವರಿಗೆ ಆ ಸಂಸಾರಬಂಧವನ್ನು ನೀಗಿಸತಕ್ಕ ಆ ಶ್ರೀಕೃಷ್ಣನ ಪಾದಸೇವೆಯು ಜನ್ಮ ಜನ್ಮಾಂತರಗಳಲ್ಲಿಯೂ ನನಗೆ ಲಭಿಸುತ್ತಿರಲೆಂದು ನಾನು ಭಗವಂತನನ್ನು ಪ್ರಾರ್ಥಿಸುವೆನು” ಎಂದಳು. ಆಮೇಲೆ ಅಕ್ಷಣೆಯೆಂಬವಳು 'ಅಮ್ಮ ಪಾಂಚಾಲಿ! ನಾನು ಆಗಾ ಗ್ರ ನಾರದನ ಮುಖದಿಂದ ಆ ಶ್ರೀಕೃಷ್ಣನ ಗುಣಕರ್ಮಗಳನ್ನು ಕೇಳುತ್ತಿ ದೈನು, ಅದರಿಂದ ನನ್ನ ಮನಸ್ಸು ಅವನಲ್ಲಿಯೇ ನೆಲೆಗೊಂಡಿತು. ಪದ್ಮಹಸ್ತೆ ಯಾದ ಸಾಕ್ಷಾತ್ ಲಕ್ಷ್ಮಿದೇವಿ ಯೂಕೂಡ, ತಾನು ಕ್ಷೀರಸಮುದ್ರದಿಂದ ಆ ದೃವಿಸಿದೊಡನೆ, ಸಮಸ್ತಲೋಕಪಾಲಕರನ್ನೂ ಅನಾದರಿಸಿ,ಯಾವನನ್ನು ವ ರಿಸಿದಳೆ,ಅಂತಹ ಭಗವಂತನಲ್ಲಿ ನನಗೆ ಮೋಹವುಂಟಾಗುವುದೇನಾಶ್ವರ ವು'ನನ್ನ ತಂದೆಯಾದ ಬೃಹತ್ತೇನನೆಂಬವನಿಗೆ, ನನ್ನಲ್ಲಿ ಬಹಳ ಪ್ರೀತಿಯಿದ್ದುದ ರಿಂದ, ನನ್ನ ಉದ್ದೇಶವನ್ನು ತಿಳಿದು,ನನ್ನನ್ನು ಕೃಷ್ಣನಿಗೆ ವಿವಾಹಮಾಡುವು ದಕ್ಕಾಗಿ ಒಂದುಪಾಯವನ್ನು ಏರ್ಪಡಿಸಿದ್ದನು. ಏನೆಂದು ಕೇಳುವೆಯಾ ? ನಿನ್ನ ತಂದೆಯು ನಿನ್ನನ್ನು ಅರ್ಜುನನಿಗೇ ಕೊಡಬೇಕೆಂಬ ಉದ್ದೇ ಶದಿಂದ ಮಯಂತ್ರವನ್ನು ಏರ್ಪಡಿಸಿದ್ದನಲ್ಲವೆ ? ಅದರಂತೆ ಈಗ ನನ್ನ ತಂದೆಯೂ ಒಂದು ಮಯಂತ್ರವನ್ನಿಟ್ಟಿದ್ದನು. ಆದರೆ ಈಗಿನ ಮತ್ಯಂತ್ರದಲ್ಲಿ ಒಂದು ವಿಶೇಷವುಂಟು. ಆಗಿನ ಮತ್ಯಂತ್ರವನ್ನು ಮೇಲೆ ನೋಡಿ ಹೊಡೆಯಬಹುದಾಗಿದ್ದಿತು. ಈಗಿನ ಮತ್ಯಂತ್ರವನ್ನಾ ದರೋ, ಮೇಲೆ ನೋಡಿ ಹೊಡೆಯುವುದಕ್ಕಿಲ್ಲದೆ, ಕೆ ಳಗೆ ನೀರಿನಲ್ಲಿ ಅದರ ಪ್ರತಿಬಿಂಬವನ್ನು ನೋಡಿ ಹೊಡೆಯಬೇಕಾಗಿದ್ದಿತು.