ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨೬ ಅಧ್ಯಾ, ೮೩.] ದಶಮಸ್ಕಂಧವು. ದೊಡನೆ ಭೂಮಿಯಲ್ಲಿ ಜಯಶಬ್ದವೂ, ಆಕಾಶದಲ್ಲಿ ದೇವದುಂದುಭಿಶಬ್ದ ವೂ ಮೊಳಗಿದುವು, ದೇವತೆಗಳು ಸಂತೋಷದಿಂದ ಪಕ್ಷ ವರ್ಷವನ್ನು ಕರೆ ದರು. ಒಡನೆಯೇ ನಾನು ರತ್ನ ಖಚಿತವಾದ ಸುವರ್ಣಮಾಲೆಯನ್ನು ಹಿಡಿದು ಹೊಸದಾದ ಪಟ್ಟೆ ಮಡಿಗಳನ್ನು ಟ್ಯ, ಪತ್ನಗಳನ್ನು ಮುಡಿದು, ಕಾಲಂದು ಗೆಗಳ ಫಲಧ್ವನಿಯೊಡನೆ, ಮುಖದಲ್ಲಿ ಲಜ್ಞಾಗರ್ಭಿತವಾದ ಮಂದ ಹಾಸವನ್ನು ತುಳುಕಿಸುತ್ತ,ರಂಗಸ್ಥಳವನ್ನು ಪ್ರವೇಶಿಸಿದೆನು. ಅಲ್ಲಿ ನನ್ನ ಸು ರುಳಿಗಟ್ಟಿದ ಮುಂಗುರಳನ್ನೂ , ಕುಂಡಲಕಾಂತಿಯಿಂದ ಕೂಡಿದ ಕಪೋಲವ ನ್ನೂ ನೋಡಿ, ರಾಜರೆಲ್ಲರೂ ಮೋಹಿತರಾಗುತ್ತಿರಲು, ನಾನು ಮೆಲ್ಲಗೆ ಮುಖ ವನ್ನೆ ತಿ, ಮಂದಹಾಸವಿಶಿಷ್ಟವಾದ ಕಡೆಗಣ್ಣಿನಿಂದ ಸುತ್ತಲೂ ಇದ್ಯ ರಾಜರೆಲ್ಲರನ್ನೂ ನೋಡುತ್ತ ಮೆಲ್ಲಗೆ ಶ್ರೀಕೃಷ್ಣ ಬಳಿಗೆ ಬಂದು, ಆ ವನ ಕಂಠಕ್ಕೆ ಮಾಲೆಯಿಕ್ಕಿದೆನು. ಆ ಕಾಲದಲ್ಲಿ ಮೃದಂಗ, ಪಟಹ, ಶಂಖ, ಭೇರಿ, ಆನಕ ಮೊದಲಾದ ಮಂಗಳವಾದ್ಯಗಳು ಮೊಳಗಿದುವು. ನಟನರ್ತಕಿ ಯರು ಸಂಗೀತದೊಡನೆ ನರ್ತನವನ್ನು ಮಾಡುತ್ತಿದ್ದರು, ಗಾಯಕರು ಗಾ ನಮಾಡಿದರು. ಹೀಗೆ ನಾನು ಅನುರಾಗಪೂರೈಕವಾಗಿ ಕೃಷ್ಣನ ಕಂಠಕ್ಕೆ ಮಾಲೆಯಿಕ್ಕಿದುದನ್ನು ನೋಡಿ ಸಹಿಸಲಾರದೆ, ಅಲ್ಲಿದ್ದ ರಾಜರೆಲ್ಲರೂ ಸಂಕ ಟದಿಂದ ಕೃಷ್ಣನಮೇಲೆ ಕಲಹಾತುರರಾಗಿದ್ದರು. ಒಡನೆಯೇ ಕೃಷ್ಣನು ನಾಲ್ಕುಉತ್ತಮಾಶ್ವಗಳಿಂದ ಕೂಡಿದ ತನ್ನ ರಥದಲ್ಲಿ ನನ್ನನ್ನು ಕುಳ್ಳಿರಿಸಿ, ತಾನೂ ಶಾರ್ಣ್ಮವೆಂಬ ತನ್ನ ಧನುಸ್ಸನ್ನು ಕೈಗೆತ್ತಿಕೊಂಡು, ಆ ರಾಜರೆ ಡನೆ ಯುದ್ಧಸನ್ನದ್ಧನಾದನು. ಆಗ ಕೃಷ್ಣನು ಚತುರ್ಭುಜಗಳುಳ್ಳವನಾಗಿ ಯೇ ಕಾಣಿಸುತ್ತ, ಎರಡು ಕೈಗಳಿಂದ ಧನುರ್ಬಾಣಗಳನ್ನು ಹಿಡಿದು, ಮತ್ತೆ ರಡು ತೋಳುಗಳಿಂದ ಭಯಾತುರೆಯಾಗಿದ್ದ ನನ್ನನ್ನು ಆಲಂಗಿಸಿಕೊಂಡೇ ಯುದ್ಧವನ್ನಾರಂಭಿಸಿದನು. ಒಡನೆಯೇ ದಾರುಕನು, ಸುವರ್ಣಾಲಂಕೃತ ವಾದ ಆರಥವನ್ನು ಮುಂದೆ ನಡೆಸಿಕೊಂಡುಬರಲು,ಮೃಗಗಳ ಹಿಂಡನ್ನು ಪ್ರ ವೇಶಿಸುವ ಮೃಗರಾಜನಂತೆ ಆರಾಜರ ನಡುವೆ ಬಂದು ಸೇರಿದನು. ಇಷ್ಟರಲ್ಲಿ ಕೆಲವ್ರರಾಜರು ಧನುರ್ಧಾರಿಗಳಾಗಿ, ನಾಯಿಗಳು ಸಿಂಹವನ್ನು ತಡೆಯು ವಂತೆ, ಕೃಷ್ಣನನ್ನು ತಡೆದುಮುಂದೆಬಂದು ನಿಂತರು, ಕೆಲವರು ಹಿಂದಿನಿಂದ 147 B |