ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܦ ܬܦ ಶ್ರೀಮದ್ಭಾಗವತವು - [ಅಧ್ಯಾ, ೮೩. ಬೆನ್ನಟ್ಟಿಬಂದರು.ಆದರೇನು ? ಕೃಷ್ಣನ ಶಾರ್ಙ್ಗಧನುಸ್ಸಿನಿಂದ ಹೊರಟವಾ ಣಪರಂಪರೆಗಳ ವೇಗಕ್ಕೆ ಸಿಕ್ಕಿ ಅನೇಕರು ಕೈಕಾಲುಮುರಿದು, ತಲೆಹರಿದು ಕೆಳೆ ಗೆಬಿದ್ದರು. ಕೆಲವರು ಭಯಪಟ್ಟು ಆಸ್ಥಲವನ್ನೇ ಬಿಟ್ಟು ಪಲಾಯನಮಾಡಿ ದರು. ಹೀಗೆ ಆ ರಾಜರೆಲ್ಲರನ್ನೂ ನಿಗ್ರಹಿಸಿದಮೇಲೆ ಕೃಷ್ಣನು, ನನ್ನನ್ನು ಆರಥದಲ್ಲಿ ಕುಳ್ಳಿರಿಸಿಕೊಂಡು, ಸೂರನು ಉದಯಾಚಲವನ್ನು ಪ್ರವೇಶಿಸು ವಂತೆ, ವಿಚಿತ್ರಧ್ವಜ ತೋರಣಾದಿಗಳಿಂದಲಂಕೃತವಾದ ಕುಶಸ್ಥಲಿಯೆಂಬ ನಮ್ಮ ರಾಜಧಾನಿಯನ್ನು ಪ್ರವೇಶಿಸಿದನು, ಅಲ್ಲಿ ನನ್ನ ತಂದೆಯು, ಶ್ರೀಕೃ ವ್ಯನಿಗೂ, ಆತನ ಇಷ್ಟವಿತ್ರ ಬಂಧುಗಳಿಗೂ ಯಥೋಚಿತವಾಗಿ ವಸ್ಸಾ ಲಂಕಾರಗಳನ್ನೂ, ಶಯನಾಸನಗಳನ್ನೂ ಕೊಟ್ಟು ಸತ್ಕರಿಸಿ, ಬಹಳವಾಗಿ ಗೌರವಿಸಿದನು, ಮತ್ತು ಆತನು ಕೃಷ್ಣನಲ್ಲಿರುವ ತನ್ನ ಭಕ್ತಿಯನ್ನು ತೋರಿ ಸುವುದಕ್ಕಾಗಿ, ಪೂರ್ಣಕಾಮನಾದ ಆ ಭಗವಂತನಿಗೆ ಅನೇಕದಾಸದಾಸೀಜ ನರನ್ನೂ, ರಥ, ಗಜ, ತುರಗ, ಪದಾತಿಗಳೆಂಬ ಚತುರಂಗಸೈನ್ಯವನ್ನೂ, ಉ ತಮಾಯುಧಗಳನ್ನೂ, ಅನೇಕವಿಧವಾದ ಸಂಪತ್ತುಗಳನ್ನೂ, ಉಡುಗೊರೆ ಯಾಗಿ ಕೊಟ್ಟನು. ಅಮ್ಮ ಬ್ರೌಪದಿ ! ರುಕ್ಕಿಣಿ ಮೊದಲಾದ ನಾವು ಎಂ ಟುಮಂದಿಯೂ ಪೂರೈಜನ್ಮದಲ್ಲಿ ಮಾಡಿದ ತಪಸ್ಸಿನಿಂದಲೂ, ಸತ್ವಸಂಗ ನಿವೃತಿರೂಪವಾದ ವೈರಾಗ್ಯದಿಂದಲೂ, ಆತ್ಮಾನಂದಪೂರ್ಣನಾದ ಆ ಭಗವಂತನಿಗೆ ಗೃಹದಾಸಿಗಳಾಗಿ ಏರ್ಪಟ್ಟೆವು” ಎಂದಳು. ಆಮೇಲೆ ನರಕಾಸುರನ ಸೆರೆಯಲ್ಲಿದ್ದು ಕೃಷ್ಣನಿಂದ ಬಿಡಿಸಲ್ಪಟ್ಟ ಹದಿನಾರು ಸಾವಿರಮಂದಿ ರಾಜಕನೈಯರೂ ಸದಿಯನ್ನು ಕುರಿತು 14 ಓ ಸಾಥೀ ! ನಾವೂ ಕೃಷ್ಣನನ್ನು ವರಿಸಿದ ಸಂಗತಿಯನ್ನು ತಿಳಿಸುವೆವು ಕೇಳು. ಹಿಂದೆ ನರಕಾಸುರನು ದಿಗ್ವಿಜಯಕ್ಕಾಗಿ ಹೊರಟು, ಅನೇಕರಾಜರನ್ನು ಜಯಿಸಿ ಅವರ ಕನೈಯರಾದ ನಮ್ಮೆಲ್ಲರನ್ನೂ ಸೆರೆಹಿಡಿದು ತಂದಿದ್ದನು.ನಾವು ಸಂಸಾ ರಬಂಧವಿಮೋಚಕನಾದ ಆ ಶ್ರೀಕೃಷ್ಣನೇ ಗತಿಯೆಂದು ನಂಬಿ, ಅಹೋ ರಾತ್ರವೂ ಆತನನ್ನೇ ಸ್ಮರಿಸುತ್ತ, ದುಃಖದಿಂದ ಕೊರಗುತಿದ್ದೆವು. ಇದನ್ನು ತಿಳಿದು ಶ್ರೀಕೃಷ್ಣನು, ತಾನು ಪೂರ್ಣಕಾಮನಾಗಿದ್ದರೂ, ನಮ್ಮ ಕೋರಿಕೆ ಯಡೇರಿಸಬೇಕೆಂಬ ಕನಿಕರದಿಂದ, ಆ ನರಕಾಸುರನನ್ನೂ, ಅವನ ಪರಿವಾ