ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ಆ೪.] - ದಶಮಸ್ಕಂಧವು. ೨೩೨೯ ರವನ್ನೂ ಕೊಂದು, ನಮ್ಮನ್ನು ಮದಿವೆಯಾದನು. ಈಗ ನಾವೆಲ್ಲರೂಆವನ ಪಾದಸೇವೆಯಲ್ಲಿರುವೆವು, ದೌಪದೀ ! ಇನ್ನು ಹೆಚ್ಚು ಮಾತಿನಿಂದೇನು ? ಈಗ ನಾವು ಸಾಲ್ವಭೌಮ ಸಂಪತ್ತನ್ನಾಗಲಿ, ಇಂದ್ರ ಪದವಿಯನ್ನಾಗಲಿ, ಅಣಿಮಾದಿಸಿದ್ದಿಗಳನ್ನಾಗಲಿ, ಬ್ರಹ್ಮಪದವನ್ನಾಗಲಿ, ಶಾಶ್ವತವಾದ ವಿಷ್ಣು ಪದವನ್ನಾಗಲಿ, ಬೇರೆ ಯಾವ ಸೌಖ್ಯವನ್ನಾಗಲಿ ಅಪೇಕ್ಷಿಸತಕ್ಕವರಲ್ಲ! ಸಾ ಕ್ಷಾತ್ ಲಕ್ಷ್ಮಿದೇವಿಯ ಕುಚಕುಂಕುಮರೇಣುವಿನಿಂದ ಸುವಾಸಿತವಾದ ಆ ಶ್ರೀಕೃಷ್ಣನ ಪಾದಧೂಳಿಯು, ಯಾವಾಗಲೂ ನಮ್ಮ ತಿರಸ್ಸಿನಲ್ಲಿರ ಬೇಕೆಂಬುದೊಂದೇ ನಮ್ಮ ಕೋರಿಕೆ! ನಮಗೆ ಅದಕ್ಕಿಂತಲೂ ಅತಿಶಯವಾದ ಸುಖವಿಲ್ಲ.ಆ ಕೃಷ್ಣನು ನಂದಗೋಕುಲದಲ್ಲಿ ಗೋವುಗಳನ್ನು ಮೇಯಿಸುತಿ ದ್ದಾಗ,ಅಲ್ಲಿನಗೊಲ್ಲತಿಯರೂ,ಅದರ ಸಮೀಪದ ಕಾಡಿನಲ್ಲಿದ್ದ ಬೇಡಿತಿಯರೂ ಅಲ್ಲಿನ ಹುಲ್ಲು ಕಡ್ಡಿ ಗಿಡ ಬಳ್ಳಿ,ಮೊದಲಾದುವುಗಳೂ ಯಾವನಪಾದಸ್ಪರ್ಶ ವೆಂಬ ಭಾಗ್ಯಕ್ಕೆ ಪಾತ್ರವಾಗಿದ್ದುವೋ ಅಂತಹ ಪಾದಸ್ಪರ್ಶವೇ ನಿರಂತರ ವೂ ನಮಗೆ ಲಭಿಸಲೆಂದರು.” ಇದು ಎಂಭತ್ತು ಮೂರನೆಯ ಅಧ್ಯಾಯವು. w+ ವಸುದೇವನು ಯಾಗಮಾಡಿದುದು, wwಹೀಗೆ ರುಕ್ಕಿಣಿ ಮೊದಲಾದ ಕೃಷ್ಣನ ಪತ್ನಿ ಯರೆಲ್ಲರೂ ತಮಗೆ ಕೃಷ್ಣನಲ್ಲಿರುವಅಸಾಧಾರಣವಾದ ಮತ್ತು ನಿಷ್ಕಪಟವಾದ ಪ್ರೇಮವನ್ನೂ , ತಮ್ಮ ತಮ್ಮ ವಿವಾಹವೃತ್ತಾಂತವನ್ನೂ ಹೇಳುತಿದ್ದಾಗ, ದೌಪದಿ, ಕುಂತಿ ಗಾಂಧಾರಿ, ಸುಭದ್ರೆ, ಮುಂತಾದವರೂ,ಇತರ ರಾಜಪತ್ತಿ ಯರೂ ಅದನ್ನು ಕೇಳಿ ಆಶ್ಚಯ್ಯಪಟ್ಟಿ ರು.ಅವರ ಕಣ್ಣುಗಳಲ್ಲಿ ಆನಂದಬಾಷ್ಟ್ರವು ತುಳುಕುತಿತ್ತು. ಹೀಗೆ ಆ ಕರುಕ್ಷೇತ್ರದಲ್ಲಿ, ಸ್ತ್ರೀಯರೂ ಒಂದುಕಡೆಯಲ್ಲಿ ಪುರುಷರೂ, ಮತ್ತೊಂದುಕಡೆಯಲ್ಲಿ, ಗುಂಪುಗುಂಪಾಗಿ ಕಲೆತು, ಕೃಷ್ಣನ ಗುಣಗಳ ನ್ನು ಕೊಂಡಾಡುತ್ತ ನಾನಾವಿಧಸಲ್ಲಾಪಗಳನ್ನು ಮಾಡುತ್ತಿರುವಸಮ ಯದಲ್ಲಿ, ಬಲರಾಮಕೃಷ್ಣರನ್ನು ನೋಡಬೇಕೆಂಬ ಉದ್ದೇಶದಿಂದ, ಅನೇಕ ಮಹರ್ಷಿಗಳೂ ಅಲ್ಲಿಗೆ ಬಂದುಸೇರಿದರು. ಅವರಲ್ಲಿ ವ್ಯಾಸ, ನಾರದ, ಚೈವ ನ, ಅಸಿತ, (ದೇವಲ) ವಿಶ್ವಾಮಿತ್ರ, ಶತಾನಂದ, ಭರದ್ವಾಜ, ಗೌತಮ