ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೦ ಶ್ರೀಮದ್ಭಾಗವತವು [ಅಧ್ಯಾ. ೮೪, ಪರಶುರಾಮ, ವಸಿಷ್ಠ, ಗಾಲವ, ಬೃಗು, ಪುಲಸ್ಯ, ಕಶ್ಯಪ, ಅತ್ರಿ, ಮಾರ್ಕಂಡೇಯ, ಬೃಹಸ್ಪತಿ, ಬ್ರಹ್ಮಪುತ್ರನಾದ ಅಂಗಿರಸ್ಸು, ಅಗಸ್ಯ, ಯಾಜ್ಞವಲ್ಕ, ವಾಮದೇವ, ಮುಂತಾದವರೆಲ್ಲರೂ ತಮ್ಮ ತಮ್ಮ ಶಿಷ್ಯ ರೊಡನೆ ಕಲೆತು,ಒಬ್ಬೊಬ್ಬರಾಗಿಯೂ ಇಬ್ಬಿಬ್ಬರಾಗಿಯೂ, ಮೂವರುಮೂ ವರಾಗಿಯೂ ಬಂದು ಸೇರಿದ್ದರು. ಈಮಹರ್ಷಿಗಳನ್ನು ಕಂಡೊಡನೆ ಅಲ್ಲಿದ್ದ ರಾಜರೂಪಾಂಡವರೂ,ಬಲರಾಮಕೃಷ್ಣರೂ ಧಟ್ಟನೆ ಇದಿರೆದ್ದು ನಮಸ್ಕರಿ ಸಿ, ಕುಶಲಪ್ರಶ್ನ ವನ್ನು ಮಾಡಿ, ಅರ್ಫ್ಯಪಾದ್ಯ, ಆಸನ, ಧೂಪ, ದೀಪ, ಗಂಧ ಮಾಲ್ಯ, ಮೊದಲಾದ ಸರ್ವೋಪಚಾರಗಳಿಂದ ಸತ್ಕರಿಸಿದರು, ಆಗ ಧರ್ಮ ರಕ್ಷಣಾರ್ಥವಾಗಿ ಅವತರಿಸಿದ ಭಗವಂತನು, ಆ ಸಭೆಯಲ್ಲಿದ್ದವರೆಲ್ಲರೂ ಸಾವಧಾನದಿಂದ ಕೇಳುತ್ತಿರುವಾಗ ಹೀಗೆಂದು ಹೇಳುವನು. ( ಅಹಾ ! ನಮ್ಮ ಜನ್ಮ ವೇ ಜನ್ಮವು! ನಾವು ಜನ್ಮವನ್ನೆತ್ತಿದುದಕ್ಕೆ ಪೂರ್ಣವಾದ ಫಲ ವನ್ನು ಹೊಂದಿದೆವು, ದೇವತೆಗಳಿಗೂ ದುರ್ಲಭವಾದ ತಮ್ಮಂತಹ ಯೋಗೀ ಶ್ವರರ ದರ್ಶನವು ಈಗ ನಮಗೆ ಲಭಿಸಿತಲ್ಲವೆ, ದೇವತಾ ಪ್ರತಿಮೆಗಳಲ್ಲಿ ದೈವ ಬುದ್ದಿಯನ್ನಿಟ್ಟು, ಮೂಢಭಕ್ತಿಯಿಂದ ಅವುಗಳನ್ನೇ ಆರಾಧಿಸತಕ್ಕ ಅಲ್ಪಪ ಆ್ಯರಾದ ನಮ್ಮಂತಹ ಮನುಷ್ಯರಿಗೆ, ನಿಮ್ಮ ಸಾಕ್ಷಾದರ್ಶನವೂ, ಪ್ರತ್ಯಕ್ಷ ವಾಗಿ ನಿಮ್ಮ ಪಾದಸ್ಪರ್ಶವೂ, ನಿಮ್ಮೊಡನೆ ಕುಶಲಪ್ರಶ್ನಾ ದಿಗಳೂ, ನಿಮ್ಮ ಪಾದಪೂಜೆಯೂ, ನಿಮ್ಮ ಪಾದಪ್ರಣಾಮವೂ ಲಭಿಸಬೇಕಾದರೆ, ನಮ್ಮ ಭಾಗ್ಯವು ಎಷ್ಟಿರಬೇಕು? ಇಂತಹ ಮಹಾಭಾಗ್ಯವು ನಮಗೆ ಯಾವ ಪುಣ್ಯ ಫಲದಿಂದ ಲಭಿಸಿತೋ ಕಾಣೆನು! ವಾಸ್ತವದಲ್ಲಿ ನೋಡಿದರೆ, ಜಲಮಯವಾ ದ ಮಡುಗಳು ತೀರ್ಥಗಳಲ್ಲಿ! ಕಲ್ಲು ಮಣ್ಣಿನ ವಿಗ್ರಹಗಳು ದೇವತಾಮೂರ್ತಿ ಗಳಲ್ಲ!ಅವೆಲ್ಲವೂ ದರ್ಶನಮಾತ್ರದಿಂದ ಪಾವನಮಾಡಲಾರವು, ಅವುಗಳ ಪೂಜಾಫಲವೂ ಬಹುಕಾಲಕ್ಕೆ ಸಿದ್ಧಿಸುವುದು, ನಿಮ್ಮಂತಹ ಸಾಧುಗಳು ದರ್ಶನಮಾತ್ರದಿಂದಲೇ ಪಾವನಮಾಡುವರು. ಲೋಕದಲ್ಲಿ ಎಲ್ಲಾ ಬಗೆಯ ಪಾಪಗಳಿಗೂ ಒಂದೊಂದು ವಿಧವಾದ ಶುದ್ಧಿಯುಂಟು-ದೇಹಗತವಾದ ಭೇ ದವನ್ನು ಆತ್ಮನಲ್ಲಿ ಆರೋಪಿಸಿತಕ್ಕ ಮಹಾಪಾಪವನ್ನು , ಅಗ್ನಿ,ಸೂರ್, ಚಂ ದ್ರ,ನಕ್ಷತ್ರಗಳು, ಭೂಮಿ, ಜಲ, ಆಕಾಶ, ವಾಯು, ವಾಕ್ಕು, ಮನಸ್ಸು,