ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೪] ದಶಮಸ್ಕಂಧವು ೨೩೩೧ ಮುಂತಾದುವುಗಳಲ್ಲಿ ಯಾವುದೂ, ಅನೇಕಕಾಲದವರೆಗೆ ಅನೇಕ ವಿಧದಿಂದ ಉಪಾಸಿಸಿದರೂ, ಪರಿಹರಿಸಲಾರವು, ಸಾಧುಗಳ ಸೇವೆಯಿಂದಮಾತ್ರ, ಮು ಹೂರ್ತಮಾತ್ರದಲ್ಲಿಯೇ ಅದು ಪರಿಕೃತವಾಗುವುದು, ವಾತ, ಪಿಶೇಷ ಗಳಿಂದ ತುಂಬಿ ಶವಪ್ರಾಯವಾದ ದೇಹದಲ್ಲಿ ಯಾವನಿಗೆ ತಾನೆಂಬ ಅಭಿಮಾ ನವೂ, ಹೆಂಡಿರುಮಕ್ಕಳಲ್ಲಿ ತನ್ನ ವರೆಂಬ ಬುದ್ಧಿಯೂ, ಕಲ್ಲು ಮಣ್ಣಿನ ಬೋಂ ಬೆಗಳಲ್ಲಿ ದೇವತಾಬುದ್ದಿಯೂ, ಗಂಗಾದಿಜಲಗಳಲ್ಲಿ ತೀರ್ಥಬುದ್ದಿಯೂ ಇವು ಮಾತ್ರವೇ ಇದ್ದು, ಆತ್ಮಪರಮಾತ್ಮತತ್ವವನ್ನು ತಿಳಿದ ನಿಮ್ಮಂತಹ ಸಾಧು ಗಳಲ್ಲಿ ಆ ವಿಧವಾದ ಗೌರವಬುದ್ದಿಯು ಇರುವುದಿಲ್ಲವೋ, ಅಂತವನನ್ನು ಪ ಶುಗಳಿಗಿಂತಲೂ, ಕತ್ತೆಗಳಿಗಿಂತಲೂ ಕಡೆಯೆಂದೇ ಹೇಳಬಹುದು” ಎಂದನು. ಓ ಪರೀಕ್ಷಿಧಾಜಾ!ಹೀಗೆ ಸರ್ವೆಶ್ವರನಾದ ಭಗವಂತನು, ತನಗೆ ಅನುರೂಪ ವಲ್ಲದ ಆ ಮಾತುಗಳನ್ನು ಆಡುತ್ತಿರುವಾಗ, ಋಷಿಗಳೆಲ್ಲರೂ ಭ್ರಾಂತರಾಗಿ (ಆಹಾ! ಯಾವನ ಪಾದಸೇವೆಯಿಂದಲೇ ನಾವು ಕೃತಾರ್ಥರಾಗಿರುವೆವೋ, ಅಂತಹ ಭಗವಂತನು, ನಮ್ಮನ್ನೇ ತನಗಿಂತಲೂ ಇಷ್ಟು, ಮೇಲಾಗಿ ಹೇಳು ತಿರುವನಲ್ಲಾ!” ಎಂದು ಆಶ್ಚರ್ಯದಿಂದ, ಮಾತಾಡುವುದಕ್ಕೂ ತೋರದೆ ಸುಮ್ಮನಿದ್ದರು. ಅವರೆಲ್ಲರೂ, ಕೃಷ್ಣನು ತಮ್ಮನು ಇಷ್ಟೊಂದುವಿಧ ವಾಗಿ ಹೊಗಳುವುದಕ್ಕೆ ಕಾರಣವೇನೆಂದು ಬಹುಕಾಲದವರೆಗೆ ಯೋಚಿಸಿ, ಲೋಕದಲ್ಲಿ ತಿಳಿಯದ ಜನರಿಗೆ ದಾರಿಯನ್ನು ತೋರಿಸುವದಕ್ಕಾಗಿಯೇ ಅವ ಮತನ್ನಲ್ಲಿ ನೈಚ್ಯಾನುಸಂಧಾನವನ್ನು ಮಾಡಿರಬೇಕೆಂದು ನಿಶ್ಚಯಿಸಿಕೊಂಡು, ಲೋಕಗುರುವಾದ ಆ ಕೃಷ್ಣನನ್ನು ನೋಡಿ ಮುಗುಳ್ಳ ಗೆಯೊಡನೆ ಹೀಗೆಂದು ಹೇಳುವರು. ಬಹ್ಮಾದಿಗಳಿಗೂ ಪ್ರಭುವಾದ ಓ ಕೃಷ್ಣಾ! ನಮ್ಮನ್ನು ತತ್ವಜ್ಞರೆಂದು ನೀನು ಸ್ತೋತ್ರಮಾಡಿದೆಯಲ್ಲವೆ? ನಮಗೆ ಆ ತತ್ವಜ್ಞಾ ನವು ನಿನ್ನ ಅನುಗ್ರಹದಿಂದಲ್ಲವೇ ಹುಟ್ಟಿರಬೇಕು?ನಾವು ಎಷ್ಟು ತತ್ವಗಳನ್ನು ತಿಳಿದರೇನು ? ನಿನ್ನ ಮಾಯೆಯಿಂದ ಮೋಹಿತರಾಗಿ ಭ್ರಮಿಸುವೆವು, ನೀನು ಬಹ್ಮಾದಿದೇವತೆಗಳಿಗೂ ಪ್ರಭುವಾಗಿದ್ದರೂ, ಮನುಷ್ಯ ಚೇಷ್ಟೆಯಿಂದ ನಿಜ ಸ್ವರೂಪವನ್ನು ಮರೆಸಿಕೊಂಡು, ಕರ್ಮವಶ್ಯರಾದ ಪ್ರಾಕೃತರಂತೆ ನಟಿಸು ತಿರುವೆಯಲ್ಲವೆ ! ಈ ನಿನ್ನ ಆಶ್ಚರೈವ್ಯಾಪಾರವನ್ನು ಒಮ್ಮೊಮ್ಮೆ ನಾವೂ