ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೦ ಶ್ರೀಮದ್ಭಾಗವತವು | [ಅಭ್ಯಾ. ೫೧. ಯಲ್ಲಿ ನೀನು ಸುಖವಾಗಿ ನಿದ್ರಿಸುತ್ತಿರು, ನೀನು ಸುಖನಿದ್ರೆಯಲ್ಲಿರುವಾಗ ಯಾರು ನಿನಗೆ ನಿದ್ರಾಭಂಗವನ್ನು ಮಾಡುವರೋ, ಅವರು ನಿನ್ನ ದೃಷ್ಟಿ ಯಿಂದ ದಗ್ಧರಾಗಲಿ” ಎಂದು ಅನುಗ್ರಹಿಸಿ ಕಳುಹಿಸಿದರು. ಅದರಂತೆ ಆ ಮುಚುಕುಂದನು ಈ ಗುಹೆಯಲ್ಲಿ ಮಲಗಿದ್ದಾಗ, ಕಾಲಯವನನು ಅವನಿಗೆ ನಿದ್ರಾಭಂಗವನ್ನು ಮಾಡಿದುದರಿಂದ ಮೃತನಾದನು, ರಾಜೇಂದ್ರಾ ? ಇತ್ತಲಾಗಿ ಕಾಲಯವನನು ಮೃತನಾದ ಸಂಗತಿಯನ್ನು ತಿಳಿದೊಡನೆ, ಕೃಷ್ಣನು ಹಿಂತಿರುಗಿ ಬಂದು, ಮುಚುಕುಂದನಿಗೆ ಕಾಣಿಸಿಕೊಂಡನು. ಆಗ ಮುಚುಕುಂದನು, ನೀಲಮೇಘಶ್ಯಾಮನಾಗಿಯೂ, ಶ್ರೀವತ್ಸ, ಕೌಸ್ತುಭ ವೈಜಯಂತೀ ವನಮಾಲಿಕೆಗಳಿಂದಲಂಕೃತನಾಗಿಯೂ, ಪೀತಾಂಬರಧಾರಿ ಯಾಗಿಯೂ, ಕುಂಡಲಶೋಭಿತವಾದ ಪ್ರಸನ್ನ ಮುಖದಿಂದಲೂ, ಅನು ರಾಗಪೂರೈಕವಾದ ಕಟಾಕ್ಷದಿಂದಲೂ, ಎಳವಯಸ್ಸಿನಿಂದಲೂ, ಸಿಂಹ ದಂತೆ ಗಂಭೀರವಾದ ನಡೆಯಿಂದಲೂ, ತ್ರೈಲೋಕ್ಯವನ್ನೂ ಮೋಹ ಗೊಳಿಸತಕ್ಕ ದಿವ್ಯಾಕೃತಿಯುಳ್ಳವನಾಗಿದ್ದ ಆ ಭಗವಂತನನ್ನು ನೋಡಿ, ಅದ್ಭುತವಾದ ಅವನ ತೇಜಸ್ಸಿಗೆ ಮರುಳಾಗಿ, ಅವನನ್ನು ಕುರಿತು ಭಯಭಕ್ತಿಗಳೊಡನೆ ಹೀಗೆಂದು ಪ್ರಶ್ನೆ ಮಾಡುವನುಎಲೈ ನೀನು ಯಾರು? ನಿರ್ಜನವಾದ ಈ ಪರೈತಗುಹೆಗೆ ನೀನು ಬರಲು ಕಾರಣವೇನು ? ತೀಕ್ಷ ವಾದ ಕಲ್ಲು ಮುಳ್ಳುಗಳಿಂದ ಕಠಿನವಾದ ಈ ಅರಣ್ಯಪ್ರದೇಶದಲ್ಲಿ, ಕಮಲ ದಳದಂತೆ ಮೃದುವಾದ ಈ ನಿನ್ನ ಕಾಲಿನಿಂದ ಸಂಚರಿಸುವ ಕಾರಣವೇನು ? ಲೋಕದಲ್ಲಿ ಮಹಾತೇಜಸ್ವಿಗಳ ತೇಜಸ್ಸೆಲ್ಲವೂ ಒಂದಾಗಿ ನಿನ್ನಲ್ಲಿ ಮೂರ್ತಿ ಭವಿಸಿದಂತೆ ತೋರುವುದು, ಪೂಜ್ಯನಾದ ಸೂಯ್ಯದೇವನೇ ನೀನಾಗಿರ ಬಹುದೆ ? ಅಥವಾ ಸೀನು ಅಗ್ನಿ ಪುರುಷನಾಗಿರಬಹುದೆ ? ಇಂದ್ರಚಂದ್ರರಲ್ಲಿ ನೀನೊಬ್ಬನಾಗಿರಬಹುದೆ ? ಅಥವಾ ! ಲೋಕಪಾಲಕರಲ್ಲಿ ಸೇರಿದವನೇ ? ಅಷ್ಟು ಮಾತ್ರವೂ ಸಾಲದು, ದೇವೋತ್ತಮರಾದ ತ್ರಿಮೂರ್ತಿಗಳಲ್ಲಿಯೇ ನೀನೊಬ್ಬನಾಗಿರಬಹುದೆಂದೂ ತೋರುವುದು.ದೀಪವನ್ನು ಬೆಳಗಿದಂತೆ ನಿನ್ನ ದೇಹಕಾಂತಿಯಿಂದಲೇ ಇಲ್ಲಿನ ಅಂಧಕಾರವೆಲ್ಲವೂ ಅಡಗಿಹೋಗಿರುವುದು. ಓ!ಪುರುಷಶ್ರೇಷ್ಟಾ ! ನಿನ್ನ ಪೂರೋತ್ತರಗಳನ್ನು ತಿಳಿಯಬೇಕೆಂದು ನನಗೆ