ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥಾ, ೮೪.] ದಶಮಸ್ಕಂಧವು. ೨೩೩೩ ಕುಲವನ್ನು ನೀನು ಬಹುಮಾನಿಸುವುದೂ ಸಹಜವೇ? ಇದರಿಂದಲ್ಲವೇ ನೀನು ಬ್ರಹ್ಮಣ್ಯರಲ್ಲಿ ಮೇಲೆನಿಸಿಕೊಂಡಿರುವೆ. ಕೃಷ್ಣಾ ! ಈಗ ನಿನ್ನ ಸಮಾಗಮ ದಿಂದ ನಮ್ಮ ಜನ್ಮವು ಸಾರ್ಥಕವಾಯಿತು! ನಮ್ಮ ಕಣ್ಣುಗಳು ಸಫಲವಾದು ವು, ನಮ್ಮ ವಿದ್ಯೆ, ನಮ್ಮ ತಪಸ್ಸು, ಇವೆಲ್ಲವೂ, ಈಗ ಸಾರ್ಥಕ್ಯವನ್ನು ಹೊಂದಿ ದುವು, ನಿನ್ನ ಸಂದರ್ಶನಮಾತ್ರವೇ ಸಮಸ್ಯಶ್ರೇಯಸ್ಸಿಗೂ ಮೇಲಾದ ಶ್ರೇ ಯಸ್ಸು!ದೇವಾ! ಯೋಗಮಾಯೆಯೆಂಬ ಆಶ್ಚರ ಶಕ್ತಿಯಿಂದ ತನ್ನ ಪರಮ್ಯ ಶೃಶ್ಯವನ್ನು ಮರೆಸಿಕೊಂಡು, ಆಕುಂಠಿತಜ್ಞಾನಸಂಪನ್ನನಾಗಿ,ಪರಮಾತ್ಮನೆನಿ ಸಿಕೊಂಡ ನಿನಗೆ ನಮಸ್ಕಾರವು. ಓ ! ಪ್ರಭ ! ನೀನು ಮಾಯೆಯೆಂಬ ತೆರೆ ಯಿಂದ, ನಿನ್ನ ಪರಸ್ವರೂಪವನ್ನು ಕಾಣಿಸದೆ, ಸಮಸ್ತ ಜೀವಗಳನ್ನೂ ಮೋ ಹಗೊಳಿಸುತ್ತ, ಪರಮಾತ್ಮ ರೂಪದಿಂದ ಆ ಸಮಸ್ತ ಜೀವರಾಶಿಗಳ ಒಳಗೂ, ಕಾಲರೂಪದಿಂದ ಹೊರಗೂ ವ್ಯಾಪಿಸಿರತಕ್ಕವನು, ಆತ್ಮಾನುಭವವೆಂಬ ಆ ನಂದದಲ್ಲಿಯೇ ನಿರತರಾದ ಯೋಗಿಗಳೂ, ಈ ನಿನ್ನ ನಿಜಸ್ಥಿತಿಯನ್ನು ತಿಳಿಯಲಾ ರರು. ಇನ್ನು ಇಲ್ಲಿರತಕ್ಕ ಸಾಮಾನ್ಯರಾಜರು ಹೇಗೆತಾನೇ ತಿಳಿಯಬಲ್ಲರು ? ಈ ರಾಜರ ಸಂಗತಿಯೂ ಹಾಗಿರಲಿ ! ನಿನ್ನೊಡನೆ ಯಾವಾಗಲೂ ಕಲೆತಿರುವ ಯಾದವರೂ ಕೂಡ, ನಿನ್ನ ಮಹಿಮೆಯನ್ನು ಹೀಗೆಂದು ಕಂಡುಕೊಳ್ಳಲಾರ ರು: ಗುಣಪರಿಣಾಮರೂಪವಾದ ದೇಹವನ್ನೇ ಆತ್ಯವೆಂದು ತಿಳಿಯತಕ್ಕ ಪುರು ಷನು, ತನ್ನ ಶರೀರವನ್ನು ಮರೆತು ಮಲಗಿರುವಾಗಲೂ ಕೂಡ, ಸ್ವಗ್ರದಲ್ಲಿ ತನ್ನ ನು ನಾಮರೂಪೇಂದ್ರಿಯಗಳಿಂದ ಕೂಡಿರುವಂತೆಯೇ ತಿಳಿಯುವನೇ ಹೊರತು, ತನ್ನ ಆತ್ಮವು ದೇಹಕ್ಕಿಂತಲೂ ವಿಲಕ್ಷಣವೆಂಬುದನ್ನಾಗಲಿ, ಆದ ಕೈ ನಾಮರೂಪಭೇದಗಳೊಂದೂ ಇಲ್ಲವೆಂಬುದನ್ನಾಗಲಿ ಹೇಗೆ ಕಂಡು ಕೊಳ್ಳಲಾರನೋ, ಹಾಗೆಯೇ ಎಚ್ಚರಗೊಂಡಿರುವಾಗಲೂ, ನಿನ್ನ ಮಾಯಾ ಮೂಲಕವಾಗಿ ನಾಮರೂಪೇಂದ್ರಿಯಗಳಿಗೆ ಅನುಗುಣವಾಗಿ ಹುಟ್ಟಿದಚೇಷ್ಟೆ ಯಿಂದ, ಸ್ವಸ್ವರೂಪ ಪರಸ್ವರೂಪ ಜ್ಞಾನವನ್ನು ಮರೆತು,ಆತ್ಮವಲ್ಲದ ದೇಹ ವನ್ನೇ ಆತ್ಮವೆಂದೂ, ಪರತಂತ್ರವಾದ ಆತ್ಮವನ್ನೇ'ಸ್ವತಂತ್ರವೆಂದೂ ಭ್ರ ಮಿಸುವನು. ಹೀಗೆ ತನ್ನ ಆತ್ಮ ಸ್ವರೂಪವನ್ನೇ ತಿಳಿಯಲಾರದವನು, ಆ ಆತ್ಮಕ್ಕೂ ಅಂತರಾತ್ಮನಾಗಿ, ಅದಕ್ಕೆ ಆಶ್ರಯನಾದ ಪರಮಾತ್ಮನ (ನಿನ್ನ)