ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮. ಶ್ರೀಮದ್ಭಾಗವತವು [ಅಧ್ಯಾ, ೮೪. -ವನ ಗುಣಗಳನ್ನು ಸ್ತುತಿಸುತಿದ್ದರು. ಗಂಧತ್ವಸಿಯರು ತಮ್ಮ ತಮ್ಮ ಪತಿ ಗಳೊಡನೆ ಸುಸ್ವರದಿಂದ ಗಾನಮಾಡುತಿದ್ದರು. ಯಜ್ಞಕ್ಕೆ ಮೊದಲು “ಋತ್ವಿಕ್ಕುಗಳೆಲ್ಲರೂ ಶಾಸ್ಕೂಕ್ತ ರೀತಿಯಿಂದ ಹದಿನಾರುಕಲೆಗಳೊಡ ಗೂಡಿದ ಚಂದ್ರನಂತೆ, ಹದಿನಾರುಮಂದಿ ಪತ್ನಿ ಯರೊಡಗೂಡಿದ ಆ ವಸು ದೇವನಿಗೆ, ನವನೀತರಿಂದ ಅಭ್ಯಂಗನವನ್ನು ಮಾಡಿಸಿ, ಕಣ್ಣುಗಳಿಗೆ ಅಂಜನ ವ೩ ಡಿಸಿ ಅಲಂಕರಿಸಿದರು. ಆ ವಸುದೇವ ಪತ್ನಿ ಯರೆಲ್ಲರೂ ಶುದ್ಧವಾದ ದು ಕೂಲದಿಂದಲೂ, ಹಾರ, ನೂಪುರ, ಕುಂಡಲಾದ್ಯಾಭರಣಗಳಿಂದಲೂ, ಅಲಂ ಕೃತರಾಗಿದ್ದರು. ಅವರನಡುವೆ ಯಜ್ಞದೀಕ್ಷೆಯನ್ನು ವಹಿಸಿದ ವಸುದೇವನು ಕೃಷ್ಣಾಜಿನವನ್ನು ಧರಿಸಿ ಶೋಭಿಸುತ್ತಿದ್ದನು. ಋತ್ವಿಕ್ಕುಗಳೆಲ್ಲರೂ, ಹೊಸ ಪಟ್ಟಿಮಡಿಗಳನ್ನು ಟ್ಯು, ಇತರಸದಸ್ಯರೊಡನೆ ಸಿದ್ಧರಾಗಿದ್ದರು. ಆ ಎರಡು -ಗೋಷ್ಠಿಯೂ, ಪೂವ್ವದಲ್ಲಿ ಇಂದ್ರಯಾಗದಲ್ಲಿದ್ದ ಯಾಗಗೋಷ್ಠಿಯಂತೆ ಶೋಭಿಸುತ್ತಿತ್ತು, ಈ ಯಜ್ಞಕಾಲದಲ್ಲಿ ಬ್ರಹ್ಮಾದಿಸಮಸ್ತಜೀವಗಳಿಗೂ, - ಆಧೀಶ್ವರರಾದ ಬಲರಾಮಕೃಷ್ಣರೂಕೂಡ, ತಮ್ಮ ತಮ್ಮ ಬಂಧುಗಳೊಡ ನೆಯೂ, ಹೆಂಡಿರುಮಕ್ಕಳೊಡನೆಯೂ, ಇತರವೈಭವಗಳೊಡನೆಯೂ, ಅಲ್ಲಿ ಬಂದು ಸಿದ್ದರಾಗಿದ್ದರು. ಯಜ್ಞಾರಂಭವಾಯಿತು, ಆಗ ವಸುದೇವನು - ಜ್ಯೋತಿಷೋಮ, ದರ್ಶ, ಪೂರ್ಣಮಾಸಗಳೇ ಮೊದಲಾದ ಪ್ರಾಕೃತ ಕರ್ಮಗಳಿಂದಲೂ, ಅವುಗಳ ವೈಕೃತಗಳೆನಿಸಿಕೊಂಡ ಸೌಗ್ಯಸತ್ರಾದಿಗ ಳಿಂದಲೂ, ಆಗ್ನಿ ಹೋತ್ರಾದಿಗಳೆಂಬ ಹೋಮಕಾಠ್ಯಗಳಿಂದಲೂ, ದ್ರವ್ಯ ಜ್ಞಾನ ಕ್ರಿಯಾರೂಪಗಳಾದ ಭೂತಪಂಚಕ, ಜ್ಞಾನೇಂದ್ರಿಯಪಂಚಕ, ಕರ್ಮೆಂದ್ರಿಯಪಂಚಕಗಳಿಗೂ ನಿರ್ವಾಹಕನಾದ ಭಗವಂತನನ್ನು ವಿಧ್ಯು ಕವಾಗಿ ಆರಾಧಿಸಿದನು, ಆಮೇಲೆ ಋತ್ವಿಕ್ಕುಗಳಿಗೆ ಯಥೋಕ್ತವಾದ ದಕ್ಷಿ ಹೆಯನ್ನು ಕೊಟ್ಟನು. ಸದಸ್ಯರೆಲ್ಲರನ್ನೂ ಅಲಂಕರಿಸಿ, ತಾನೂ ದೇಹಾಲಂ ಕಾರಮಾಡಿಕೊಂಡು, ಗೋದಾನ, ಭೂದಾನ, ಕನ್ಯಾದಾನ ಮೊದಲಾದು ವುಗಳನ್ನೂ ನಡೆಸಿದನು, ಆಮೇಲೆ ಯಜ್ಞಾಂತದಲ್ಲಿ ನಡೆಸತಕ್ಕ ಪಸಂ ಯಾಜ, ಅವಚ್ಛಥ್ಯಗಳೆಂಬ ಎರಡುಯಾಗಗಳೂ ನಡೆದುವು, ಅದರಿಂದಾಚೆಗೆ ಎಲ್ಲರೂ ಪರಶುರಾಮನಿರ್ಮಿತವಾದ ಮಡುವಿನಲ್ಲಿಳಿದು, ಶಾಸೊಕ್ಕ