ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೪.) ದಶಮಸ್ಕಂಧವು. ೨೩೩ ವಾಗಿ ಅವಭ್ಯಥಸ್ನಾನವನ್ನು ಮುಗಿಸಿದರು, ಅಲ್ಲಿ ವಸುದೇವನು ವಂಡಿಗಳಿಗೆ ವಸ್ತ್ರಾಲಂಕಾರಗಳನ್ನು ಬಹುಮಾನಿಸಿದನು, ಸ್ತ್ರೀಯರೆಲ್ಲರೂ ಸ್ನಾನಮಾಡಿ. ಉತ್ತಮಾಲಂಕಾರಗಳಿಂದ ಶೋಭಿಸುತ್ತಿದ್ದರು. ಆಮೇಲೆ ವಸುದೇವನು, ನಾಯಿ ಮೊದಲುಗೊಂಡು ಸಮಸ್ತ ಪ್ರಾಣಿಗಳಿಗೂ, ಅನ್ನ ವನ್ನಿ ಕ್ಕಿಸಂತೋ ಷಪಡಿಸಿದನು. ತನ್ನ ಬಂಧುಗಳಿಗೂ, ಅವರ ಹೆಂಡಿರುಮಕ್ಕಳಿಗೂ, ಯಥೋ। ಚಿತವಾದ ಬಹುಮಾನವನ್ನು ಮಾಡಿದನು. ವಿದರ್ಭ, ಕೋಸಲ, ಕಾಶಿ, ಕೇ ಕಯ, ಸೃಂಜಯಾದಿರಾಜರೆಲ್ಲರನ್ನೂ ಅವರವರ ಯೋಗ್ಯತಾನುಸಾರವಾಗಿ ಸತ್ಕರಿಸಿದನು. ಯಜ್ಞಕ್ಕಾಗಿ ಅಲ್ಲಿಗೆ ಬಂದಿದ್ದ ಸದಸ್ಯರೂ, ಋತ್ವಿಕ್ಕು ಗಳೂ, ದೇವತೆಗಳೂ, ಮನುಷ್ಯರೂ, ಭೂತಗಣಗಳೂ ಪಿತೃಗಣಗಳೂ, ಚಾರಣರೂ, ವಸುದೇವನಿಂದ ಸತ್ತರಾಗಿ, ಶ್ರೀಕೃಷ್ಣ ನಿಗೆ ನಮಸ್ಕರಿಸಿ, ಅವನ ಅನುಮತಿಯನ್ನು ಪಡೆದು, ಆ ಯಾಗದ ವೈಭವವನ್ನು ಕೊಂಡಾಡುತ್ತ, ತಮ್ಮ ತಮ್ಮ ಸ್ಥಾನಗಳಿಗೆ ಹಿಂತಿರುಗಿದರು. ಹಾಗೆಯೇ, ಧೃತರಾಷ್ಟ್ರು, ವಿದುರ, ಧರ್ಮರಾಜ, ಭೀಷ್ಮ, ದ್ರೋಣಾದಿ ಗಳೂ, ಕುಂತೀದೇವಿಯೂ, ನಕುಲಸಹದೇವರೂ, ನಾರದಮುನಿಯೂ, ಪೂಜ್ಯನಾದ ವ್ಯಾಸಮಹರ್ಷಿಯೂ, ಕ್ರಮವಾಗಿ ತಮ್ಮ ಬಂಧುಗಳನ್ನೂ, •ಯಾದವರನ್ನೂ ಪ್ರೀತಿಯಿಂದಾಲಿಂಗಿಸಿ, ಅವರನ್ನು ಬಿಟ್ಟು ಹೋಗಲಾ ರದೆ ವ್ಯಸನಪಡುತ್ತ, ಕೊನೆಗೆ ಪ್ರಯತ್ನದಿಂದ ತಮ್ಮ ತಮ್ಮ ಪರಿವಾರಗ ಳೊಡನೆ ಸ್ವದೇಶಗಳಿಗೆ ಹೋದರು. ಅಲ್ಲಿ ನಂದಗೋಪನಿಗೂ, ಅವನೊಡನೆ ಬಂದಿದ್ದ ಇತರಗೋಪಾಲಕರಿಗೂ ಎಲ್ಲರಿಗಿಂತಲೂ ವಿಶೇಷವಾದ ಸತ್ಕಾರ ಗಳು ನಡೆದುವು. ಆತನು ಬಲರಾಮಕೃಷ್ಣರಲ್ಲಿಯೂ, ವಸುದೇವನಲ್ಲಿಯೂ, ಉಗ್ರಸೇನಾದಿಗಳಲ್ಲಿಯೂ ತನಗಿರುವ ನಿರತಿಶಯವಾದ ಪ್ರೀತಿಯಿಂದ, ಅವರನ್ನು ಬಿಟ್ಟು ಹೋಗಲಾರದೆ, ಕೆಲವು ದಿನಗಳವರೆಗೆ ಅವರೊಡನೆಯೇ ನಿಂತುಬಿಟ್ಟನು. ಓ ಪರೀಕ್ಷಿದ್ರಾಜಾ ! ಹೀಗೆ ವಸುದೇವನು ದೊಡ್ಡ ಯಜ್ಞ ವನ್ನು ಮಾಡಿ ಮುಗಿಸಿ, ತನ್ನ ಮನೋರಥವೆಂಬ ಮಹಾಸಮುದ್ರವನ್ನು ದಾಟಿದಮೇಲೆ, ಸಂತೋಷದಿಂದ ಸಕಲಬಂಧುಮಿತ್ರರನ್ನೂ ಮಾತಾಡಿ ಸುತ್ತ, ನಂದನ ಬಳಿಗೆ ಬಂದು, ಅವನ ಕೈಯ್ಯನ್ನು ಹಿಡಿದು ಹೀಗೆಂದು