ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೧ ಅಧ್ಯಾ, ೫೧] ದಶಮಸ್ಕಂಧವು. ಬಹಳ ಕುತೂಹಲವುಂಟಾಗಿರುವುದು, ನೀನು ಹುಟ್ಟಿದುದೆಲ್ಲಿ? ನಿನ್ನ ಕುಲ ವಾವುದು? ನಿನ್ನ ಕಾರಗಳೇನು ? ಇವೆಲ್ಲವನ್ನೂ ಹೇಳಬಹುದಾದರೆ, ಕೃಪೆ. ಯಿಟ್ಟು ತಿಳಿಸಬೇಕು, ಓ ಮಹಾತ್ಮಾ : ನಾವು ಇಕ್ಷಾಕುಕುಲದವರು ನನಗೆ ಮುಚುಕುಂದನೆಂದು ಹೆಸರು. ನಾನು ಮಾಂಧಾತೃವಿನ ಮಗನು. ಬಹುಕಾಲದಿಂದ ನಿದ್ರೆಯಿಲ್ಲದೆ ಈ ಗುಹೆಯಲ್ಲಿ ಮೈ ತಿಳಿಯದೆ ಮಲಗಿದ್ದೆನು. ಈಗ ಸ್ವಲ್ಪ ಮುಂದೆ ಯಾವನೋ ಒಬ್ಬನು ನನ್ನನ್ನು ಕಾಲಿಂದೊದೆದು ಎಬ್ಬಿಸಿದನು, ಅವನ ಅಪರಾಧಕ್ಕೆ ಫಲವಾಗಿ ಆಗಲೇ ಅವನು ಭಸ್ಮಿಭೂತ ನಾದನು, ಆಮೇಲೆ ನೀನು ನನ್ನ ಕಣ್ಣಿಗೆ ಗೋಚರಿಸಿದೆ. ದುಸ್ಸಹವಾದ ನಿನ್ನ ತೇಜಸ್ಸಿನಿಂದ ನಿನ್ನನ್ನು ಚೆನ್ನಾಗಿ ನೋಡುವುದಕ್ಕೂ ನನಗೆ ಸಾಧ್ಯವಿಲ್ಲ. ದಂತಿದೆ! ನಿನ್ನ ದಿವ್ಯತೇಜಸ್ಸನ್ನು ನೋಡಿದರೆ ಸಮಸ್ತಲೋಕಕ್ಕೂ ನೀನು ಪೂಜ್ಯನೆಂದು ತೋರುವುದು, ನಿನ್ನ ನಿಜಸ್ಥಿತಿಯನ್ನು ತಿಳಿಸಬೇಕು.” ಎಂದನು. ಆಗ ಕೃಷ್ಣನು, ಅವನ ವಿನಯವಾಕ್ಯಗಳಿಗೆ ಸಂತೋಷಪಟ್ಟು, ಮುಖದಲ್ಲಿ ಮಂದಹಾಸವನ್ನು ತುಳುಕಿಸುತ್ತಾ, ಮೇಘಗಂಭೀರವಾದ ಧ್ವನಿಯಿಂದ ಹೀಗೆಂದು ಹೇಳುವನು. ಎಲೈ ರಾಜನೆ! ನನಗೆ ಒಂದು ಹೆಸರಲ್ಲ!ಸಾವಿರಾರು ಹೆಸರುಗಳುಂಟು. ನಾನು ನಡೆಸತಕ್ಕ ಕಾಠ್ಯಗಳೂ, ನಾನು ಪಡೆಯತಕ್ಕ ಜನ್ಮಗಳೂ ಅನೇಕವಾಗಿರುವುವು, ಅವೆಲ್ಲವೂ ಅಸಂಖ್ಯಾತವಾಗಿರುವುದರಿಂದ ಇಷ್ಟೆಂದು ಲೆಕ್ಕ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಕೊನೆಗೆ ನಾನೇ ಅದನ್ನೆಣಿಸುವುದಕ್ಕೆ ಸಮರ್ಥನಲ್ಲ. ಯಾವಾಗಲೂ, ಯಾವನಾ ದರೂ ಸೂಕ್ಷಬುದ್ಧಿಯುಳ್ಳವನೊಬ್ಬನು, ತನ್ನ ಅನೇಕಜನ್ಮಗಳಿಂದ ಭೂಮಿ ಯಲ್ಲಿರುವ ರೇಣುಗಳನ್ನಾದರೂ ಲೆಕ್ಕಮಾಡಿ ತೆಗೆಯಬಲ್ಲನು. ನನ್ನ ಗುಣಗಳನ್ನೂ , ಕರ್ಮಗಳನ್ನೂ , ನಾಮಗಳನ್ನೂ ಇಷ್ಟೆಂದು ನಿರ್ಣಯಿಸು ವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ, ಅಷ್ಟೇಕೆ? ಭೂತಭವಿಷ್ಯದ್ವರ್ತಮಾನ ಕಾಲಗಳನ್ನು ತಿಳಿಯತಕ್ಕ ಕೌನಕಪರಾಶರಾದಿಮಹರ್ಷಿಗಳೂಕೂಡ ನನ್ನ ಜನ್ಮ ಕರ್ಮಗಳನ್ನು ಎಷ್ಟೆಷ್ಟೇ ವರ್ಣಿಸುತಿದ್ದರೂ, ಅದನ್ನು ಕೊನೆ ಮುಟ್ಟಲಾರರು. ಹಾಗಿದ್ದರೂ ಎಲೈ ಮುಚುಕುಂದನೆ: ನನ್ನ ಈಗಿನ ಸ್ಥಿತಿ ಯನ್ನು ಮಾತ್ರ ತಿಳಿಸುವೆನು ಕೇಳು. ಪೂರದಲ್ಲಿ ಬ್ರಹ್ಮನು ಧರ್ಮಸಂರಕ್ಷ