ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೪ ಶ್ರೀಮದ್ಭಾಗವತವು | [ಅಧ್ಯಾ.೮೫, ಗಳ ವೃತ್ತಿಗಳೂ, ಪರಬ್ರಹ್ಮನೆನಿಸಿಕೊಂಡ ನಿನ್ನ ಸಂಕಲ್ಪ ರೂಪಜ್ಞಾನ ದಿಂದಲೇ ಕಲ್ಪಿತಗಳಾಗಿರುವುವು. ಆದುದರಿಂದ ಈ ಕಲ್ಪನೆಗಳು ಚೇತನಾ ಚೇತನಗಳಿಗಿಂತಲೂ ಭಿನ್ನ ನಾದ ನಿನ್ನಲ್ಲಿ ಸಂಬಂಧಿಸಲಾರವು. ಈ ವಿಕಾ ರಗಳೆಲ್ಲವೂ ಪ್ರಕೃತಿ ಮೊದಲಾದುವುಗಳಲ್ಲಿಯೇ ಸೇರಿರುವುವು. ಆದರೆ ನೀನು ಅಂತಹ ವಿಕಾರವಸ್ತುಗಳೊಳಗೆ ಯಾವಾಗಲೂ ಅಂತರಾಮಿಯಾಗಿ ಪ್ರವೇ ತಿಸಿರುವೆಯೆಂದು ಶಾಸ್ತ್ರ ಪ್ರಮಾಣಗಳಿಂದ ಸಿದ್ಧವಾಗುವುದು, ಸತ್ಯಾದಿ ಗುಣಗಳ ಪ್ರವಾಹರೂಪವಾದ ಸಂಸಾರದಲ್ಲಿ ಬಿದ್ದವರು, ಸತ್ಯಾಂತರಾತ್ಮ ನಾದ ನಿನ್ನ ಯಾಥಾತ್ಮವನ್ನು ತಿಳಿಯಲಾರದೆ, ಅಜ್ಞಾನದಿಂದಲೂ, ಪಾಪ ಪುಣ್ಯಕರ್ಮಸಂಬಂಧದಿಂದಲೂ ಕಳವಳಿಸುವರು. ಈ ಲೋಕದಲ್ಲಿ ದುರ್ಲ ಭವಾದ ಮನುಷ್ಯ ಜನ್ಮವನ್ನೂ , ಇಂದ್ರಿಯಪಟತ್ವವನ್ನೂ ಹೊಂದಿ ದ್ದರೂ, ಪುರುಷನು ನಿನ್ನ ಮಾಯೆಯಿಂದ ಮೋಹಿತನಾಗಿ, ತನಗೆ ಶ್ರೇಯ ಸ್ನಾಧನವಾದ ನಿನ್ನ ಯಾಥಾತ್ಮಜ್ಞಾನವನ್ನೇ ಮರೆತಿರುವನು. ಆಯ್ಯೋ ! ಆಂತವನ ಆಯುಸ್ಸು ವ್ಯರ್ಥವಾಗಿಯೇ ಕಳೆದು ಹೋಗುತ್ತಿರು ವುದು. ಈ ದೇಹದಲ್ಲಿಯೂ, ದೇಹಸಂಬಂಧಿಗಳಾದ ಹೆಂಡಿರು ಮಕ್ಕಳು ಮೊದಲಾದವರಲ್ಲಿಯೂ, 'ನಾನು, ನನ್ನ ದು” ಎಂಬ ಸ್ನೇಹಪಾಶಗಳಿಂದ ನೀನೇ ಸಮಸ್ಯಜಗತ್ತನ್ನೂ ಕಟ್ಟಿಹಾಕಿರುವೆ. ಕೃಷ್ಣಾ! ನೀವಿಬ್ಬರೂ ನಿಜ ವಾಗಿಯೂ ನನ್ನ ಮಕ್ಕಳಲ್ಲ! ನೀವಿಬ್ಬರೂ ಸಾಕ್ಷಾತ್ನ ಕೃತಿಪುರುಷರು. ಭೂವಿಗೆ ಭಾರಭೂತರಾದ ಕ್ಷತ್ರಿಯರನ್ನು ನಿಗ್ರಹಿಸುವುದಕ್ಕಾಗಿಯೇ ಅವತ ರಿಸಿದವರು, ನಿನ್ನ ಅವತಾರಕಾಲದಲ್ಲಿ ನಿನ್ನ ಬಾಯಿಂದಲೇ ಈ ವಿಷಯವನ್ನು ನೀನು ನನಗೆ ತಿಳಿಸಿದ್ದರೂ, ಆಗಾಗ ನಾನೂ ನಿನ್ನ ಮಾಯೆಯಿಂದ ಮೋಹಿತನಾಗಿ, ನಿನ್ನನ್ನು ಪತ್ರ ಮೋಹದಿಂದ ಕಾಣುತ್ತಿದ್ದೆನು, ಓ ದೀನ ಬಂಧೋ ! ಈಗ ನಾನು ಬೇರೆ ಉಪಾಯವೊಂದನ್ನೂ ಕಾಣದೆ, ಸಂಸಾರ ಭಯನಿವರ್ತಕವಾದ ನಿನ್ನ ಪಾದಾರವಿಂದವನ್ನು ಶರಣುಹೊಂದಿರುವೆನು. ದೇಹದಲ್ಲಿ ಆತ್ಮ ಬುದ್ಧಿಯಿಂದಲೂ, ಪಾತ್ಪರನಾದ ನಿನ್ನಲ್ಲಿ ಪುತ್ರ ಮೋಹ ದಿಂದಲೂ, ಬುದ್ಧಿಗೆಟ್ಟು ನಾನು ವಿಷಯಾಭಿಲಾಷೆಯಿಂದ ಕಳೆದ ಕಾಲವು ಇಷ್ಟಕ್ಕೇ ಸಾಕು, ಇನ್ನು ಮೇಲಾದರೂ ನನಗೆ ವಿಷಯವೈರಾಗ್ಯವನ್ನು ಅನು