ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೫.] | ದಶಮಸ್ಕಂಧವು, ೨೩೪೫ ಗ್ರಹಿಸಬೇಕು. ಕೃಷ್ಣಾ ! ನಿನ್ನ ಜನನಕಾಲದಲ್ಲಿ ಪ್ರಸವಗೃಹದಲ್ಲಿದ್ದಾಗಲೇ ನೀನು ನಮ್ಮನ್ನು ನೋಡಿ ನನಗೆ ಕರ್ಮಾಧೀನವಾದ ಜನ್ಮಾದಿಗಳಿಲ್ಲದಿದ್ದರೂ ಧರ್ಮಮತ್ಯಾದೆಯನ್ನು ರಕ್ಷಿಸುವುದಕ್ಕಾಗಿ ಒಂದೊಂದು ಯುಗದಲ್ಲಿಯೂ ಹೀಗೆ ಅವತರಿಸುತ್ತಿರುವೆನು” ಎಂದು ಹೇಳಿರುವೆ ? ನೀನು ಈವಿಧವಾಗಿ ಆಗಾಗ ಅನೇಕ ದೇಹಗಳನ್ನು ಗ್ರಹಿಸುತ್ತಲೂ,ಬಿಡುತ್ತಲೂ ಇದ್ದರೂ ನಿನ್ನ ಸ್ವಭಾವವು ಮಾತ್ರ ಆಕಾಶದಂತೆ ನಿರ್ಲೇಪವಾಗಿರುವುದು, ಎಲೈ ಪುಣ್ಯ ಶ್ಲೋಕನೆ ! ಈ ನಿನ್ನ ಮಾಯೆಗಳನ್ನೂ, ವಿಭೂತಿಗಳನ್ನೂ ಯಾವನು ತಾನೇ ತಿಳಿಯಬಲ್ಲನು” ಎಂದನು. ಓ ! ಪರೀಕ್ಷಿದಾಜಾ ! ತನಗೆ ತಂದೆಯಾದ ವಸುದೇವನು ಹೇಳಿದ ಈ ಸತಿವಾಕ್ಯವನ್ನು ಕೇಳಿ ಕೃಷ್ಣನು, ಮಂದಹಾಸದಿಂದ ನಗುತ್ತ, ವಿನಯ ಪೂರೈಕವಾದ ಮೃದುವಾಕ್ಯಗಳಿಂದ ಹೀಗೆಂದು ಹೇಳುವನು.'ಜನಕಾ!ನೀನು ನನ್ನನ್ನೇ ಪರಬ್ರಹ್ಮವೆಂದು ಹೇಳಿದೆ! ನಿನ್ನ ಮಕ್ಕಳಾದ ನಮಗೆ, ಲೋಕದಲ್ಲಿ ಸಮಸ್ತವೂ ಬ್ರಹ್ಮಾತ್ಮಕವೆಂಬ ತತ್ವವನ್ನು ಉಪದೇಶಿಸುವುದಕ್ಕಾಗಿ ನೀನು ಹೀಗೆಹೇಳಿರಬಹದೇಹೊರತು ಬೇರೆಯಲ್ಲ ! ನಾನು ಅಷ್ಟೊಂದು ಗೌರ ವಕ್ಕೆ ಪಾತ್ರನಲ್ಲಿದ್ದರೂ, ನೀನು ಹೇಳಿದ ಮಾತು ಯುಕ್ತವೆಂದೇ ಭಾವಿಸ ಬೇಕಾಗಿದೆ. ಜನ ಕಾ ! ನಾನಾಗಲಿ, ನೀನಾಗಲಿ, ನನ್ನಣ್ಣನಾದ ಬಲರಾಮ ನಾಗಳಿ, ಅಷ್ಟೇಕೆ? ಈ ಚರಾಚರಾತ್ಮಕವಾದ ಸಮಸ್ತಪ್ರಪಂಚವೂ ಪರ ಬ್ರಹ್ಮಾತ್ಮಕವಾಗಿಯೇ ಇರುವುದೆಂದು ತಿಳಿಯಬೇಕು. ಏಕೆಂದರೆ, ಸ್ವಯಂ ಪ್ರಕಾಶನಾದ ಪರಮಾತ್ಮನು ತಾನೊಬ್ಬನೇ ಆಗಿದ್ದರೂ, ಪ್ರಾಕೃತಗುಣ ಗಳ ಸಂಬಂಧವಿಲ್ಲದವನಾಗಿದ್ದರೂ, ಆ ಸತ್ಯಾದಿಗುಣಗಳ ಮೂಲಕವಾಗಿ ತನ್ನಿಂದ ಸೃಷ್ಟಿಸಲ್ಪಟ್ಟ ದೇವಮನುಷ್ಯಾಣಸಮಸ್ತಶರೀರಗಳಲ್ಲಿಯೂ, ವ್ಯಾಪಿಸಿ, ತಾನೇ ನಾನಾವಿಧದಿಂದ ಕಾಣಿಸಿಕೊಳ್ಳುವನೆಂದು ಪ್ರಮಾಣಗ ಳಿಂದ ಸ್ಪಷ್ಟವಾಗುವುದು. ಪೃಥಿವಿ, ಅಪ್ಪ, ತೇಜಸ್ಸು, ವಾಯು, ಆಕಾ ಶಗಳೆಂಬ ಪಂಚಭೂತಗಳೂ, ತಮ್ಮಿಂದುಂಟಾದ ಕಾಠ್ಯವಸ್ತುಗಳಲ್ಲಿ ತಾವೇ ಆಯಾಆಕೃತಿಗೆ ತಕ್ಕಂತೆ, ಸಣ್ಣದಾಗಿಯೂ, ದೊಡ್ಡದಾಗಿಯೂ, ಪ್ರತ್ಯೇ