ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೬ +ರಷ್ಯನು ತನಗೆ ಶ್ರೀಮದ್ಭಾಗವತವು. - [ಅಧ್ಯಾ, ೮೫. ಕವಾಗಿಯೂ, ಗುಂಪಾಗಿಯೂ ತೋರುವಂತೆ, ಈ ಪರಮಾತ್ಮನು, ತನ್ನ ಒಂದೇ ಸ್ವರೂಪವನ್ನು ನಾನಾವಿಧವಾಗಿ ತೋರಿಸುತ್ತಿರುವನು.” ಎಂದನು. ಹೀಗೆ ಭಗವಂತನಾದ ಕೃಷ್ಣನ ಬಾಯಿಂದ ಹೊರಟ ತತ್ವಾರ್ಥ ಸಾರವನ್ನು ಕೇಳಿ ವಸುದೇವನು,ಪ್ರಪಂಚದಲ್ಲಿ! ಬಹ್ಮಾತ್ಮಕವಲ್ಲದ ವಸ್ತುವೇ ಇಲ್ಲವೆಂಬ ನಿಶ್ಚಯಜ್ಞಾನವನ್ನು ಹೊಂದಿ ಸಂತೋಷದಿಂದಿದ್ದನು. ( ಕೃಷ್ಣನು ತನಗೆ ಮೊದಲು ದೇವಕೀದೇವಿಯಲ್ಲಿ) ಹುಟ್ಟಿದ ಆರು ಗರ್ಭಶಿಶುಗಳನ್ನು ತಂದು ತೋರಿಸಿದದು. ಪರೀಕ್ಷಿದ್ರಾಜಾ ! ಹೀಗಿರುತ್ತಿರುವಾಗ ಒಮ್ಮೆ, (ಶ್ರೀಕೃಷ್ಣನಿಗೆ ತಾಯಿ ಯೆನಿಸಿದುದರಿಂದ) ತಾನೇ ಸಯ್ಯದೇವತಾಸ್ವರೂಪೆಯೆನಿಸಿ ಕೊಂಡ ದೇವಕೀದೇವಿಯು, ತನ್ನ ಮಕ್ಕಳಾದ ಬಲರಾಮಕೃಷ್ಣರು ಆಗಾಗ ನಡೆಸಿದ ಅದ್ಭುತಕಾರಗಳನ್ನು ಕೇಳಿ ಆನಂದಿಸುತ್ತಿದ್ದಳು. ಆದ ರಲ್ಲಿ ಶ್ರೀ ಕೃಷ್ಣನು ಸಾಂದೀಪನಿಯೆಂಬ ತನ್ನ ಗುರುವಿನ ಮೃತಪುತ್ರನನ್ನು ಬದುಕಿಸಿ ತಂದ ವೃತ್ತಾಂತವನ್ನು ಕೇಳಿದಳು. ಆಗ ಅವಳಿಗೆ, ಹಿಂದೆ ಕಂಸ ನಿಂದ ಸಂಸ್ಕೃತರಾದ ತನ್ನ ಆರುಮಕ್ಕಳ ಮರಣವು ನೆನಪಿಗೆ ಬಂದಿತು. ತ ಟೂನೆ ಅವಳ ಕಣ್ಣುಗಳಲ್ಲಿ ನೀರು ತುಂಬಿತು. ಆಗ ರಾಮಕೃಷ್ಣರನ್ನು ಕರೆಸಿ ಬಹಳದೈನ್ಯದಿಂದ ಹೀಗೆಂದು ಕೇಳುವಳು ! I« ರಾಮಾ ! ರಾಮಾ ! ನೀನು ಅಪ್ರಮೇಯಪ್ರಭಾವವುಳ್ಳವನು. ಕೃಷ್ಣಾ ! ನೀನು ಸಮಸ್ತಯೋಗೀಶ ರರಿಗೂ ಈಶ್ವರನೆನಿಸಿಕೊಂಡಿರುವೆ. ನೀವಿಬ್ಬರೂ ಸೃಷ್ಟಿಕರ್ತರಾದ ಬ್ರಹ್ಮಾದಿಗಳಿಗೂ ಈಶ್ವರರೆಂದೂ, ಆದಿಪುರುಷರೆಂದೂ, ನಾನು ಕೇಳಿ ಬಲ್ಲೆನು. ಕಾಲವಶದಿಂದ ಸತ್ವಗುಣವು ಕೆಟ್ಟಾಗ, ಶಾಸ್ತಮರಾದೆಯನ್ನು ಇಂಫಿಸಿ ಪ್ರವರ್ತಿಸುವ ಭೂಭಾರಭೂತರಾದ ಕ್ಷತ್ರಿಯರನ್ನು ಕೊಲ್ಲುವುದ ಕಾಗಿಯೇ ನೀವಿಬ್ಬರೂ ಅವತರಿಸಿರುವಿರಿ! ಕೃಷ್ಣಾ! ಯಾವನ ಶಕ್ತಿಯಲ್ಲಿ ಕೋಟೆಕಲಾಂಶಮಾತ್ರದಿಂದಲೇ ಪ್ರಪಂಚದ ಸೃಷ್ಟಿ ಸ್ಥಿತಿಲಯಗ ಳೆಲ್ಲವೂ ನಡೆದು ಹೋಗುತ್ತಿರುವುವೋ ಅಂತಹ ಪರಬ್ರಹ್ಮವೇ ನೀನಾ ಗಿರುವುದರಿಂದ, ಈಗ ನಾನು ನಿನ್ನ ಮರೆಹೊಕ್ಕು ಒಂದು ವಿಷಯವನ್ನು