ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೫.] ದಶಮಸ್ಕಂಧವು. ೨೩೪ ಪ್ರಾರ್ಥಿಸುವೆನು, ಹಿಂದೆ ನೀವು ನಿಮ್ಮ ವಿದ್ಯಾಗುರುವಾದ ಸಾಂದೀಪನಿ ಯೆಂಬ ಬ್ರಾಹ್ಮಣನ ಕೋರಿಕೆಯಂತೆ, ಬಹುಕಾಲಕ್ಕೆ ಹಿಂದೆ ಮೃತನಾದ ಅವನ ಪುತ್ರನನ್ನು ಯಮಲೋಕದಿಂದ ಬದುಕಿಸಿ ತಂದು, ಅವರಿಗೆ ಗುರುದ ಕ್ಷಿಣೆಯಾಗಿ ಕೊಟ್ಟಿರೆಂದು ಕೇಳಿದೆನು.ಅದರಂತೆಯೇ ಈಗ ನನಗೂ,ಒಂದು ಕೋರಿಕೆಯನ್ನಿಡೇರಿಸಬೇಕು, ದುಷ್ಟನಾದ ಕಂಸನು, ನಿಮಗೆ ಮೊದಲು ನನ್ನ ಗರ್ಭದಲ್ಲಿ ಜನಿಸಿದ ಆರುಮಕ್ಕಳನ್ನೂ ಕೊಂದುಹಾಕಿರುವನು. ಆ ಮಕ್ಕಳನ್ನು ತಿರುಗಿ ಒಂದಾವರ್ತಿ ಕಣ್ಣಿಂದ ನೋಡಬೇಕೆಂದು ನನಗೆ ಆಸೆ ಯಿರುವುದು, ಸಮಸ್ತ ಯೋಗಶಕ್ತಿಗಳಿಗೆ ನೀವೇ ಪ್ರಭುಗಳಾದುದರಿಂದ ಆ ಕಾಠ್ಯವೇನೂ ನಿಮಗೆ ಅಸಾಧ್ಯವಲ್ಲ ! ನನ್ನ ಉದ್ದೇಶವನ್ನು ಕೈಗೂಡಿಸ ಬೇಕು.” ಎಂದಳು, ಹೀಗೆ ತಾಯಿಯ ದೈನ್ಯದಿಂದ ಪ್ರಾರ್ಥಿಸುವುದನ್ನು ಕೆಳಿ, ಒಡವೆಯೇ ರಾಮಕೃಷ್ಣರಿಬ್ಬರೂ, ತಮ್ಮ ಯೋಗಮಾ ಯೆಯನ್ನವ ಲಂಬಿಸಿ, ಸುತಲವನ್ನು ಪ್ರವೇಶಿಸಿದರು. ಸಕಲಜೀವಗಳಿಗೂ ದೈವಸ್ವರೂ ಪರಾದ ಬಲರಾಮಕೃಷ್ಣರಿಬ್ಬರೂ ಬಂದುದನ್ನು ಕೇಳಿ, ದೈತ್ಯರಾಜ ನಾದ ಬಲಿಚಕ್ರವರ್ತಿಯ, ಉತ್ಸಾಹದಿಂದ ಸಪರಿವಾರನಾಗಿ ಇದಿರು ಗೊಂಡು ಬಂದು, ಅವರಿಗೆ ನಮಸ್ಕರಿಸಿ, ಇಬ್ಬರಿಗೂ ಉತ್ತಮಾಸನಗಳನ್ನು ತಂದೊಪ್ಪಿಸಿದನು. ಸುಖಾಸೀನರಾದ ಅವರ ಪಾದಗಳನ್ನು ತನ್ನ ಕೈಯಿಂ ದಲೇ ತೊಳೆದು, ಆ ಪಾದತೀರ್ಥಯನ್ನು ಶಿರಸ್ಸಿಗೆ ಪ್ರೋಕ್ಷಿಸಿಕೊಂಡನು. ಬ್ರಹ್ಮಾದಿದೇವತೆಗಳನ್ನೂ ಪಾವನಮಾಡತಕ್ಕ ಆ ಜಲವನ್ನು ಶಿರಸಾಧಾ ರಣಮಾಡುವಂತೆ ತನ್ನ ಜನರಿಗೂ ನಿಯಮಿಸಿದನು. ಬೆಲೆಯುಳ್ಳ ವಸ್ತಾ ಭರಣಗಳನ್ನೂ , ಗಂಧಪುಷ್ಪಗಳನ್ನೂ , ಧೂಪದೀಪಗಳನ್ನೂ ಕಾಣಿಕೆಯಾಗಿ ಸಮರ್ಪಿಸಿದನು. ಅಮೃತಸಮಾನವಾದ ಭಕ್ಷ್ಯಭೋಜ್ಯಗಳನ್ನೂ ತಂದಿ ಟೈಮು. ಅಷ್ಟೇಕೆ? ತನ್ನ ಸರಸ್ವವನ್ನೂ, ತನ್ನ ನ್ಯೂ, ಅವರಲ್ಲಿ ಸಮರ್ಪಿಸಿ, ಬದ್ಧಾಂಜಲಿಯಾಗಿ ನಿಂತನು. ಆಗ ರಾಮಕೃಷ್ಣರ ದರ್ಶನದಿಂದುಂಟಾದ ಸಂತೋಷದಿಂದ, ಅವನ ಕಣ್ಣುಗಳಲ್ಲಿ ಆನಂದಬಾಷ್ಟ್ರವು ತುಳುಕುತಿತ್ತು. ಅವನ ದೇಹವೆಲ್ಲವೂ ಪುಳುಕಿತವಾಯಿತು. ಅವರ ಪಾದಗಳಿಗೆ ತಲೆಯನ್ನು ಸೋಕಿಸಿ ಬಾರಿಬಾರಿಗೂ ಪ್ರಣಾಮವನ್ನು ಮಾಡುತ್ತ, ಗದ್ಯದಸ್ಸರದಿಂದ