ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೮ ಶ್ರೀಮದ್ಭಾಗವತವು [ಅಧ್ಯಾ, ೮೫. ಹೀಗೆಂದು ಹೇಳುವನು. « ರಾಮಾ ! ಆದಿಶೇಷಸ್ವರೂಪನಾಗಿ ಶಿರಸ್ಸಿನ ಏಕದೇಶದಿಂದಲೇ ಸಮಸ್ತ ವಿಶ್ವವನ್ನೂ ಧರಿಸಿರತಕ್ಕ ನಿನಗೆ ನಮಸ್ಕಾರವು. ಕೃಷ್ಣಾ ! ಸಮಸ್ತ ಜಗತ್ತಿಗೂ ವಿಧಾಯಕನಾಗಿಯೂ, ಆತ್ಮ ಪರಮಾ ತೋಪಾಸನರೂಪವಾದ ಸಾಂಖ್ಯಯೋಗಗಳಿಗೆ ಪ್ರವರ್ತಕನಾಗಿಯೂ, ಪರಬ್ರಹ್ಮ ಸ್ವರೂಪನಾಗಿಯೂ, ಪರಮಾತ್ಯ ನಾಗಿಯೂ ಇರುವ ನಿನಗೆ ನಮಸ್ಕಾರವು, ನಿಮ್ಮಿಬ್ಬರ ದರ್ಶನವು ಲೋಕಕ್ಕೆ ದುರ್ಲಭವಾಗಿದ್ದರೂ ಕೆಲವರಿಗೆ ನಿನ್ನ ಕೃಪೆಯಿಂದ ಸುಲಭಸಾಧ್ಯವಾಗುವುದು. ಇದಕ್ಕೆ ನಾನೇ ನಿದರ್ಶನವು, ರಾಜಸ, ತಾಮಸ ಸ್ವಭಾವವುಳ್ಳ ನಮಗೇ ಈಗ ನಿಮ್ಮ ದರ್ಶ ನವು ಯಾದೃಚ್ಛಿಕವಾಗಿ ಲಭಿಸತಲ್ಲವೆ? ದೈತ್ಯ, ಮಾನವ, ಗಂಧತ್ವ, ಸಿದ್ಧ ವಿದ್ಯಾಧರ, ಯಕ್ಷ, ರಾಕ್ಷಸ, ಪಿಶಾಚಾದಿಗಳೂ, ಭೂತಗಳೂ, ಪ್ರಮಥಗಣ ಗಳೂ, ನಾವೂ, ನಮ್ಮಂತೆ ಇನ್ನೂ ಕೆಲವರೂ, ದೈತ್ಯಾಂಶದಿಂದ ಹುಟ್ಟಿದ ಕಂಸಾರಿಗಳೂ, ಶುದ್ಧಸತ್ವಮಯವಾಗಿ ಕೇವಲ ಶಾಸ್ತ್ರಗಮ್ಯವಾದ ಸ್ವ ರೂಪವುಳ್ಳ ನಿನ್ನಲ್ಲಿ ಯಾವಾಗಲೂ ಬದ್ಧ ವೈರವುಳ್ಳವರು ! ಹಾಗಿ ದರೂ ನಿನ್ನ ಕೃಪೆಯಿಂದ ನಮ್ಮಲ್ಲಿ ಕೆಲವರಿಗೆ ನಿನ್ನ ಸಾಲೋಕ್ಯವೂ, ಕೆಲ. ವರಿಗೆ ಸಾಮೀಪ್ಯವೂ, ಕೆಲವರಿಗೆ ನಿನ್ನ ಸಾರೂಪ್ಯವೂ, ಕೆಲವರಿಗೆ ನಿನ್ನ ಸಾಯುಜ್ಯವೂ ಲಭಿಸಿತು. ಇದರಿಂದ ನಿನ್ನಲ್ಲಿ ಸ್ಥಿರವಾಗಿ ನೆಲೆಸಿದ ಚಿತ್ರ ವೃತ್ತಿಯು, ಯಾವವಿಧ ವಾಗಿದ್ದರೂ ಮುಕ್ತಿ ಕಾರಣವೆಂಬುದು ಸ್ಪ ಸ್ಮವಾಗುವುದು, ಕೆಲವರು ನಿನ್ನಲ್ಲಿ ದ್ವೇಷದಿಂದಲೂ,ಕೆಲವರು ಭಕ್ತಿಯಿಂದ ಲೂ, ಕೆಲವರು (ಗೋಪಿಕಾದಿಗಳು) ಕಾಮದಿಂದಲೂ, ನಿನ್ನ ಸಾನ್ನಿಧ್ಯ ವನ್ನು ಪಡೆದಿರುವರು. ಕೇವಲ ಸತ್ವಗುಣಪ್ರಧಾನರಾಗಿ, ಯಾವಾಗಲೂ ನಿನ್ನ ನಾ ಶೂಯಿಸಿಯೇ ಇರತಕ್ಕ ದೇವತೆಗಳಿಗೂಕೂಡ ಅಂತಹ ಭಾಗ್ಯವು ಲಭಿಸಲಾರದು. ಆದುದರಿಂದ ಓ ಯೋಗೇಶ್ವರಾ ! ನಿನ್ನ ಯೋಗಮಾ ಯೆಯ ಪ್ರಭಾವವನ್ನಾಗಲಿ, ಅದರ ಸ್ವರೂಪಸ್ವಭಾವಗಳನ್ನಾಗಲಿ, ಹೀ ಗೆಂದು ನಿರ್ಣಯಿಸುವುದು ಯೋಗಿಗಳಿಗೂ ಸಾಧ್ಯವಲ್ಲ. ಇನ್ನು ನಮ್ಮಂ ತಹ ಅಜ್ಞರಿಗೆ ಹೇಗೆತಾನೇ ತಿಳಿಯುವುದು? ಆದುದರಿಂದ ನಿನ್ನ ಸ್ವರೂಪ ಸ್ವಭಾವಗಳನ್ನು ಯಥಾವತ್ತಾಗಿ ತಿಳಿದು, ಆ ಜ್ಞಾನಬಲದಿಂದ ಸಂಸಾ