ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪೯ ಅಧ್ಯಾ, ೮೫.] - ದಶಮಸ್ಕಂಧವು. ರಸಮುದ್ರವನ್ನು ದಾಟುವುದೇನೋ ನಮ್ಮಂತವರಿಗೆ ಸಾಧ್ಯವಲ್ಲ! ಆದುದ ರಿಂದ ನಿಷ್ಠಾಮರಾದ ಯೋಗಿಗಳಿಗೆ ಮುಖ್ಯಾದರಣೀಯವಾದ ನಿನ್ನ ಪಾ ದಾರವಿಂದಗಳಲ್ಲಿ ನನಗೆ ಸ್ಥಿರಬುದ್ಧಿಯುಂಟಾಗುವಂತೆ ಅನುಗ್ರಹಿಸಬೇಕು. ಪಾಪಪ್ರಚುರವಾದ ಈ ಸಂಸಾರವೆಂಬ ಕತ್ತಲೆಮನೆಯನ್ನು ಬಿಟ್ಟು, ಕಾಡಿನಲ್ಲಿ ವೃಕ್ಷಗಳ ಕೆಳಗೆ ತಾನಾಗಿ ಉದಿರಿ ಬಿದ ಹಣ್ಣು ಮೊದಲಾದುವು ಗಳಿಂದ ಹೊಟ್ಟೆ ಹೊರೆಯುತ್, ಶಾಂತಚಿತ್ತನಾಗಿ, ಏಕಾಕಿಯಾಗಿಯೋ, ಸತ್ವಭೂತಸುಹೃತುಗಳಾದ ಮಹಾತ್ಮರೊಡನೆ ಸೇರಿಯೋ ಕಾಲವನ್ನು ಕಳೆಯುವಂತೆ ಅನುಗ್ರಹಿಸಬೇಕು, ಸಮಸಚರಾಚರಗಳೂ ನಿಮ್ಮ ಸಂಕ ಲ್ಪಕ್ಕೆ ಅಧೀನವಾಗಿಯೇ ನಡೆ ಯತಕ್ಕವುಗಳು. ಆದುದರಿಂದ ಈಗ ನೀವು ನನ್ನಲ್ಲಿ ಕೃಪೆಯಿಟ್ಟು, ನಾನು ನಡೆಸಬೇಕಾದ ದಾಸ್ಯವೇನೆಂಬುದನ್ನು ತಿಳಿಸಿ, ನನ್ನನ್ನು ಪಾಪರಹಿತನನ್ನಾಗಿ ಮಾಡಬೇಕು, ನಿನ್ನ ಶಾಸನವನ್ನು ಶ್ರದ್ಧೆ ಯಿಂದ ನಡೆಸತಕ್ಕವನೇ ತನ್ನ ಕರ್ಮಪಾಶವನ್ನು ಕಿತ್ತು ಉತ್ತಮವುರು ಪಾರ್ಥವನ್ನೂ ಹೊಂದುವನು” ಎಂದನು. ಆಗ ಶ್ರೀಕೃಷ್ಣನು ಬಲಿಚಕ್ರ ವರ್ತಿಯನ್ನು ಕುರಿತು, ಓ ದಾನವೋಮಾ : ಹಿಂದೆ ಸ್ವಾಯಂಭುವ ಮನ್ವಂತರದಲ್ಲಿ, ಮರೀಚಿಗೆ ಊರ್ಣೆಯೆಂಬ ಭಾಲ್ಕಿಯಲ್ಲಿ ಆರುಮಂದಿ ಪ ತ್ರರು ಹುಟ್ಟಿ, ಬ್ರಹ್ಮ ನಲ್ಲಿ ಅಪರಾಧಿಗಳಾಗಿ ಅವನಿಂದ ಶಾಪವನ್ನು ಹೊಂ ಡಿದರು. ಆ ಶಾಪ ಕಾರಣವನ್ನು ತಿಳಿಸುವೆನು ಕೇಳು, ಬ್ರಹ್ಮನು ಹಿಂದೆ ತನ್ನ ಮಗಳಾದ ಸರಸ್ವತಿಯಲ್ಲಿ ಮೋಹಗೊಂಡು, ಅವಳೊಡನೆ ರತಿಯನ್ನು ಮಾಡುವುದಕ್ಕಾಗಿ ಪ್ರಮ್ಮ ಸುತ್ತಿರುವುದನ್ನು ನೋಡಿ, ಅವರು ಅವನನ್ನು ಅಪಹಾಸ್ಯ ಮಾಡಿದರು. ಹೀಗೆ ಪ್ರಜಾಧಿಪತಿಯಾದ ಬ್ರಹ್ಮನಲ್ಲಿ ಅಪರಾಧಿಗ ಳಾದುದರಿಂದ, ಅವರು ರಾಕ್ಷಸನಿಯಲ್ಲಿ ಹಿರಣ್ಯಕಶಿವು ವಿನ ಮಕ್ಕಳಾಗಿ ಹುಟ್ಟಿದರು. ಅದರಿಂದಾಚೆಗೆ ಅವರೇ ಭಗವಂತನ ಯೋಗಮಾಯಾ ಪ್ರಭಾವದಿಂದ, ದೇವಕಿಯ ಗರ್ಭಕ್ಕೆ ಸಾಗಿಸಲ್ಪಟ್ಟು, ಅವಳ ಶಿಶುಗಳಾಗಿ ಜನಿಸಿದರು. ಆ ಮಕ್ಕಳು ಹುಟ್ಟಿದೊಡನೆ ಕಂಸನು, ಅವುಗಳೆಲ್ಲವನ್ನೂ ಕೊ ಲ್ಲುತ್ತ ಬಂದನು, ಆ ಮಕ್ಕಳನ್ನು ನೆನೆಸಿಕೊಂಡು ಈಗಲೂನನ್ನ ತಾಯಿಯಾ ದ ದೇವಕಿಯು ದುಃಖಿಸುತ್ತಿರುವಳು. ಇದೋ ! ಆ ಮಕ್ಕಳು ಈಗ ನಿನ್ನ