ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩80 ಶ್ರೀಮದ್ಭಾಗವತವು [ಅಧ್ಯಾ, ೮೫. ಸಮೀಪದಲ್ಲಿರುವರು, ನನ್ನ ತಾಯಿಯ ದುಃಖಶಾಂತಿಗಾಗಿ ನಾವು ಇವ ರನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಕೆಂದಿರುವೆವು, ಇದರಿಂದ ಇವರು ಪಾಪವಿಮುಕ್ತರಾಗಿ, ತಮ್ಮ ದುಃಖವನ್ನು ನೀಗಿ, ಮೊದಲಿನಂತೆ ಪುಣ್ಯ ಲೋಕವನ್ನು ಹೊಂದುವರು. ಆ ಆರುಮಂದಿಗೂ, ಸ್ಮರ, ಉಥ, ಪರಿ ಪೃಂಗ, ಪತಂಗ, ಕ್ಷುದ್ರಭುಕ್, ಪ್ಲುಣಿ ಎಂದು ಹೆಸರು. ಈ ಆರುಮಂ ದಿಯೂ ನನ್ನ ಅನುಗ್ರಹದಿಂದ ತಿರುಗಿ ಸದ್ದತಿಯನ್ನು ಹೊಂದುವರು” ಎಂದನು. ಒಡನೆಯೇ ಬಲಿಚಕ್ರವರ್ತಿಯು ಆ ಆರುಮಕ್ಕಳನ್ನೂ ಕೃಷ್ಣನ ವಶಕ್ಕೊಪ್ಪಿಸಿ, ಅವರನ್ನು ಯಥೋಚಿತವಾಗಿ ಪೂಜಿಸಿ ಕಳುಹಿಸಿಕೊಟ್ಟನು. ಬಲರಾಮಕೃಷ್ಣರಿಬ್ಬರೂ ಆ ಕುಮಾರರನ್ನು ದ್ವಾರಕೆಗೆ ಕರೆತಂದು, ತಮ್ಮ ತಾಯಿಯ ವಶಕ್ಕೊಪ್ಪಿಸಿದರು.ಆ ಮಕ್ಕಳನ್ನು ಕಂಡೊಡನೆ, ದೇವಕಿಯು ಪ ಇಸ್ನೇಹದಿಂದ ತೊರೆಯಿಕ್ಕುವ ಸನವುಳ್ಳವಳಾಗಿ, ಬಾರಿಬಾರಿಗೂ ಆ ಶಿಶು ಗಳನ್ನಾ ಲಿಂಗಿಸಿಕೊಂಡು, ತೊಡೆಯಲ್ಲಿ ಮಲಗಿಸಿ,ತಲೆಯನ್ನಾ ಫಾಣಿಸುತ್ತ ಸ್ತನ್ಯಪಾನವನ್ನು ಮಾಡಿಸಿದಳು. ಓ ! ಪರೀಕ್ಷೆ ಬ್ರಾಜಾ ! ಸೃಷ್ಟಿಕರ್ತ ನಾದ ಭಗವಂತನ ಮಾಯೆಯಿಂದ ಮೋಹಿತಳಾದ ದೇವಕೀದೇವಿಯು ಆ ದೈತ್ಯಕುಮಾರರನ್ನು ತನ್ನ ಮಕ್ಕಳೆಂದೇ ಭಾವಿಸಿ ಪರಮ ಪ್ರೇಮ ರಿಂದ ಪಾಲಿಸುತ್ತಿದ್ದಳು. ಓ ! ರಾಜೇಂದ್ರಾ! ಆ ಶಿಶುಗಳ ಭಾಗ್ಯವನ್ನು ನೋಡಿದೆಯಾ ? ಸಾಕ್ಷಾದ್ಭಗವಂತನಾದ ಶ್ರೀಕೃಷ್ಣನು ಕುಡಿದು ವಿ.ಗಿಸಿದ ಅಮೃತಸಮಾನವಾದ ಸೈನ್ಯವನ್ನು ಪಾನಮಾಡಿದುದರಿಂದಲೂ, ಆ ಭಗ ವಂತನ ದೇಹಸ್ಪರ್ಶದಿಂದಲೂ ಅವರ ಜನ್ಮಾಂತರಪಾಪಗಳೆಲ್ಲವೂ ನೀಗಿ ದುವು. ಮೊದಲಿನಂತೆ ಅವರಿಗೆ ಆತ್ಮ ಪರಮಾತ್ಮ ಸ್ವರೂಪವೂ ಜ್ಞಾನ ಗೋಚರವಾಯಿತು. ಅವರಿಗೆ ಮೊದಲಿನ ದಿವ್ಯತೇಜಸ್ಸುಂಟಾಯಿತು. ಆಮೇ ಲೆ ಅವರೆಲ್ಲರೂದೇವಕಿ ವಸುದೇವರಿಗೂ, ರಾಮಕೃಷ್ಣರಿಗೂ ಭಕ್ತಿಯಿಂದ ನಮಸ್ಕರಿಸಿ, ಸಮಸ್ತಭೂತಗಳೂ ನೋಡುತಿದ್ದ ಹಾಗೆಯೇ ವಿಮಾನವನ್ನೇರಿ ಆಕಾಶಮಾರ್ಗದಿಂದ ತಮ್ಮ ಲೋಕಕ್ಕೆ ಹೊರಟುಹೋದರು. ಆಗ ದೇವ ಕೀದೇವಿಯು, ಬಹುಕಾಲಕ್ಕೆ ಹಿಂದೆ ಕಂಸನಿಂದ ಸಂಸ್ಕೃತರಾದ ತನ್ನ ಶಿಶು ಗಳು ತಿರುಗಿ ತನ್ನ ಕಣ್ಣಿಗೆ ಗೋಚರಿಸಿದುದೂ, ಒಡನೆಯೇ ಅವರು ವಿಮಾ |