ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Q ಅಧ್ಯಾ, ಆ೩.] ದಶಮಸ್ಕಂಧವು.. ೨೩೫೧ ನವನ್ನೇರಿ ಹೊರಟುಹೋದುದೂ, ಇವೆಲ್ಲವೂ ಆ ಶ್ರೀಕೃಷ್ಣನ ಮಾಯೆ ಯೆಂದೇ ತಿಳಿದು, ಆಶ್ಚರದಿಂದ ಬೆರಗಾದಳು. ಓ ಪಕ್ಷಿ ಪ್ರಾಜಾ ! ಪರ ಮಾತ್ಮನಾದ ಶ್ರೀಕೃಷ್ಣನ ಅದ್ಭುತಕಾರಿಗಳು ಹೀಗೆ ಯೇ ಇನ್ನೂ ಅನೇ ಕವಾಗಿರುವುವು ” ಎಂದು ಶುಕಮಹರ್ಷಿಯು ಪುಕ್ಷಿ ವಾಜನಿಗೆ ಹೇಳಿದ ಈ ಕೃತ್ಮಚರಿತ್ರವನ್ನು, ಸೂತಸೌರಾಣಿಕನು ಶೌನಕಾದಿ ಋಷಿಗಳಿಗೆ ತಿಳಿ ಸುತ್ತ (ಓ ! ಮಹರ್ಷಿಗಳೇ ! ಸಮಸ್ಯಪಾಪನಿವಾರಕವಾಗಿಯೂ, ಭಗವ ದೃಕರಿಗೆ ಕರ್ಣಾಭರಣವಾಗಿಯೂ ಇರುವ ಪುಣ್ಯಶ್ಲೋಕನಾದ ಶ್ರೀ ಕೃ ಮನ ಈ ಚರಿತ್ರವನ್ನು , ಯಾವನು ಕಿವಿಯಿಂದ ಕೇಳುವನೋ, ಅಥವಾ ಮತ್ತೊಬ್ಬರಿಗೆ ಹೇಳುವನೋ, ಅವನು ಆ ಭಗವಂತನಲ್ಲಿ ಯೇ ನಟ್ಟ ಮನ ಸ್ಸುಳ್ಳವನಾಗಿ,ಭಯರಹಿತವಾದ ಆ ಭಗವಂತನ ಸಾನ್ನಿಧ್ಯವನ್ನು ಹೊಂದು ವನು.” ಎಂದನು. ಇದು ಎಂಬತ್ತೈದನೆಯ ಅಧ್ಯಾಯವು. ++ ಸುಭದ್ರಾ ಕಲ್ಯಾದನ ಕಥೆ. ++ ತಿರುಗಿ ಪರೀಕ್ಷೆ ಪ್ರಾಜನು ಪ್ರಶ್ನೆ ಮಾಡುವನು. ಓ ಮಹರ್ಷಿ!! ಬಲ ರಾಮಕೃಷ್ಣರಿಗೆ ತಂಗಿಯಾದ ಸುಭದ್ರೆಯನ್ನು , ಅರ್ಜುನನು ವಿವಾಹಮಾ ಡಿಕೊಂಡ ವೃತ್ತಾಂತವನ್ನು ನನಗೆ ತಿಳಿಸಬೇಕು, ಅವಳು ನನ್ನ ಪಿತಾಮಹಿ ಯಾದುದರಿಂದ, ಅವಳ ಚರಿತ್ರವನ್ನು ಕೇಳಬೇಕೆಂಬ ಕುತೂಹಲವು ನನಗೆ ವಿಶೇಷವಾಗಿರುವುದು” ಎಂದನು. ಆದಕಾ ಶುಕಮಹರ್ಷಿಯು, ರಾಜೇಂ ದ್ರಾ ! ಕೇಳು! ಅರ್ಜುನನು ತೀರ್ಥಯಾತ್ರೆಗಾಗಿ ಭೂಮಿಯನ್ನು ಸುತ್ತು ತ್ಯ, ಪ್ರಭಾಸತೀರ್ಥಕ್ಕೆ ಹೋದನು.ಅಲ್ಲಿ ಅವನು, ತನ್ನ ಮಾವನ ಮಗಳಾದ ಸುಭದ್ರೆಗೆ ವಿವಾಹಪ್ರಯತ್ನವು ನಡೆ ಯುತ್ತಿರುವುದನ್ನೂ, ಬಲರಾಮನೊ ಬೃನಮಾತ್ರ ಅವಳನ್ನು ದುರೊಧನಿಗೆ ಕೊಡಬೇಕೆಂದು ಪ್ರಯತ್ನಿ ಸು ತಿರುವುದನ್ನೂ ಕೇಳಿದನು. ಈ ಸಂಬಂಧವು ಆ ಸುಭದ್ರೆಯ ಬಂಧುವರ್ಗ ದಲ್ಲಿ ಯಾರಿಗೂ ಇಷ್ಟವಿಲ್ಲವೆಂದೂ ಅವನಿಗೆ ತಿಳಿಯಿತು. ಆಗ ಹೇಗಾ ದರೂ ಆ ಸುಭದ್ರೆಯನ್ನು ತಾನೇ ಮದಿವೆಯಾಗಬೇಕೆಂದು ಅರ್ಜುನ ನಿಗೆ ಆಸೆ ಹುಟ್ಟಿತು. ಬಲರಾಮನಿಗೆ ತಿಳಿಯದೆ ತಂತ್ರದಿಂದ ಆಕೆಯನ್ನ ಪ