ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫೨ ಶ್ರೀಮದ್ಭಾಗವತವು (ಅಧ್ಯಾ ೮೬, ಹರಿಸಿಕೊಂಡು ಹೋಗಬೇಕೆಂದು ನಿಶ್ಚಯಿಸಿ, ಯತಿವೇಷದಿಂದ ತ್ರಿದಂಡವ ನ್ನು ಹಿಡಿದು ದ್ವಾರಕೆಯಬಳಿಗೆ ಬಂದನು. ಮಳೆಗಾಲದ ನಾಲ್ಕು ತಿಂಗಳೂ ಅಲ್ಲಿಯೇ ಸಮಯನಿರೀಕ್ಷಣೆಯಿಂದ ಕಾದಿದ್ದನು. ಪುರವಾಸಿಗರೆಲ್ಲರೂ ಅವ ನನ್ನು ನಿಜವಾದ ಸನ್ಯಾಸಿಯೆಂದೇ ತಿಳಿದು ಗೌರವಿಸುತ್ತಿದ್ದರು. ಬಲರಾ ಮನೂ ನಿಜಸ್ಥಿತಿಯನ್ನು ತಿಳಿಯದೆ, ಅವನನ್ನು ವಿರಕ್ತನಾದ ಸನ್ಯಾಸಿಯೆಂದೇ ನಂಬಿಬಿಟ್ಟನು. ಒಮ್ಮೆ ಬಲರಾಮನು ಅವನನ್ನು ಭಿಕ್ಷೆಗಾಗಿ ಮನೆಗೆ ಕರೆ ತಂದು ಅವನನ್ನು ಶ್ರದ್ಧೆಯಿಂದ ಸತ್ಕರಿಸಿದನು. ಭಿಕ್ಷೆಯೆಲ್ಲವೂ ನಡೆದ. ಮೇಲೆ, ಲೋಕಮೋಹನೆಯಾದ ಸುಭದ್ರೆಯು, ಅಲ್ಲಿ ಆ ಅರ್ಜುನನನ ಕಣ್ಣಿ ಗೆ ಗೋಚರಿಸಿದಳು, ಅರ್ಜುನನು ಸಂತೋಷದಿಂದರಳಿದ ಕಣ್ಣುಳ್ಳವನಾಗಿ ಆಕಸ್ಯೆಯನ್ನೇ ನೋಡುತ್ತಿರುವಾಗ, ಅವನ ಮನಸ್ಸು ಮನ್ಮಥವಿಕಾರಕ್ಕೊಳು ಗಾಯಿತು, ಇದರಂತೆಯೆ ಅತ್ತಲಾಗಿ ಸುಭದ್ರೆಗೂ, ಸಮಸ್ತಸೀಯ ರಿಗೂ ಮೋಹಕವಾದ ರೂರಾತಿಶಯವುಳ್ಳ ಆ ಅರ್ಜುನನನ್ನು ನೋಡಿ, ಅವನಲ್ಲಿ ಮನಸ್ಸು ನಾಟಿತು. ಅರ್ಜುನನ ಮುಖವನ್ನು ಕಂಡೊಡನೆ ಮುಖ ದಲ್ಲಿ ಮಂದಹಾಸವನ್ನು ಸೂಚಿಸುತ್ತ, ಲಜ್ಞೆಯಿಂದ ಧಟ್ಟನೆ ದೃಷ್ಟಿಯ ನ್ನು ಹಿಂತಿರುಗಿಸುತ್ತಿದ್ದಳು. ಕ್ರಮಕ್ರಮವಾಗಿ ಆ ಸುಭದ್ರೆಯ, ಕಣ್ಣೂ ಮನಸ್ಕೂ,ಅವನಲ್ಲಿಯೇ ನೆಲೆಗೊಂಡಿತು. ಇತ್ತಲಾಗಿ ಅರ್ಜುನನಿಗೂ ಕಾಮ ತಾಪವು ಪ್ರಬಲವಾಗುತ್ತ ಬಂದು, ಅವನ ಮನಸ್ಸಿಗೆ ನೆಮ್ಮದಿಯಿಲ್ಲದಂತಾ ಯಿತು. ಅವಳೊಡನೆ ಸರಸಸಲ್ಲಾಪಗಳನ್ನು ಮಾಡುವುದಕ್ಕೆ ಸಮಯವನ್ನು ಹುಡುಕುತ್ತ ತದೇಕಧ್ಯಾನದಲ್ಲಿರುತ್ತಿದ್ದನು. ಹೀಗಿರುವಾಗ ಒಮ್ಮೆ, ವಸು ದೇವಾಡಿಗಳೆಲ್ಲರೂ ಒಂದು ದೊಡ್ಡ ಜಾತ್ರೆಯನ್ನು ನೋಡುವ ಉದ್ದೇಶ ದಿಂದ, ಪಟ್ಟಣದ ಕೋಟೆಯಿಂದ ಹೊರಕ್ಕೆ ಬಂದಿದ್ದರು. ಸುಭದ್ರೆಯೂ ರಥದಲ್ಲಿ ಕುಳಿತು ಬರುತಿದ್ದಳು. ಊರಿನ ಹೊರಗೆ, ಒಂದಾನೊಂದು ಪಾತಗುಹೆಯಲ್ಲಿ ಸನ್ಯಾಸಿವೇಷದಿಂದಿದ್ದ ಅರ್ಜುನನು, ಇದನ್ನು ತಿಳಿದು, ಬಲರಾಮನಿಗೆ ತಿಳಿಯದಂತೆ ದೇವಕೀವಸುದೇವರ ಮತ್ತು ಕೃಷ್ಣನ ಅನು ಮತಿಯನ್ನು ಪಡೆದು, ಆ ಸುಭದ್ರೆಯನ್ನು ಅಪಹರಿಸಿಕೊಂಡುಹೋದನು. ಸುಭದ್ರೆಯ ಕಡೆಯವರಾದ ಯಾದವರೆಲ್ಲರೂ,ಸಂಭ್ರಮದಿಂದ ಹಾಹಾ”