ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೨ ಶ್ರೀಮದ್ಭಾಗವತವು [ಅಧ್ಯಾ ೫೦ ಣಾರ್ಥವಾಗಿಯೂ, ಭೂಮಿಗೆ ಭಾರಭೂತರಾದ ರಾಕ್ಷಸಪ್ರಕೃತಿಯುಳ್ಳವ 'ರನ್ನು ನಾಶಮಾಡುವುದಕ್ಕಾಗಿಯೂ, ನನ್ನಲ್ಲಿ ಬಂದು ಪ್ರಾರ್ಥಿಸಲು, ನಾನು ಯದುಕುಲದಲ್ಲಿ ವಸುದೇವನ ಭಾಲ್ಕಿಯಲ್ಲಿ ಅವತರಿಸಿದೆನು. ವಸುದೇವನ ಮಗನಾದುದರಿಂದ, ನನ್ನ ನ್ನು ವಾಸುದೇವನೆಂದು ಹೇಳುವರು. ಪೂತ್ವದಲ್ಲಿ ಕಾಲನೇಮಿಯಾಗಿದ್ದು, ಈಗ ಕಂಸನಾಗಿ ಹುಟ್ಟಿದ ದುಷ್ಕೃಯಾದವನು ನನ್ನಿ ೧ದಿಲೇ ಹತನಾದನು.ಪ್ರಲಂಬಾದಿದಾನವರೂ ನನ್ನಿಂದ ಹತರಾದರು. ಈಗನಿನ್ನ ದೃಷ್ಟಿಯಿಂದ ದಗ್ಧನಾದವನಿಗೆ ಯವನನೆಂದು ಹೆಸರು.ಅವನಿಗೆ ನಿನ್ನ ಮೂಲಕವಾಗಿ ಈ ಅವಸ್ಥೆಯನ್ನು ತಂದಿಟ್ಟವನೂ ನಾನೇ : ಓ ರಾಜಾ ! ಈಗ ನಾನು ನಿನ್ನನ್ನು ಅನುಗ್ರಹಿಸುವುದಕ್ಕಾಗಿಯೇ ಈ ಗುಹೆಗೆ ಬಂದೆನು. ಪೂರೈಜನ್ಮದಲ್ಲಿ ನೀನು ನನ್ನನ್ನು ವಿಶೇಷವಾಗಿ ಆರಾಧಿಸಿರುವೆ. ನಿನ್ನಂತಹ ಭಕ್ತರನ್ನು ಅನುಗ್ರಹಿಸಬೇಕಾದುದೆ ನನ್ನ ಸಂಕಲ್ಪವು, ನಿನಗೆ ಬೇಕಾದ ವರವನ್ನು ಕೇಳು!ಕೊಡುವೆನು, ನನ್ನಲ್ಲಿ ಮರೆಹೊಕ್ಕವರು ತಿರುಗಿ ಸಂಸಾರ ದಲ್ಲಿ ಸಿಕ್ಕಿ ಸಂಕಟಪಡಬಾರದು” ಎಂದನು. ಈ ಮಾತನ್ನು ಕೇಳಿದೊಡನೆ ಮುಚುಕುಂದನು, ಪೂತ್ವದಲ್ಲಿ ತನಗೆ ಇದೇ ವಿಷಯವನ್ನು ಕುರಿತು ಗರ್ಗ ಮಹರ್ಷಿಯು ಹೇಳಿದ ಮಾತನ್ನು ಸ್ಮರಿಸಿಕೊಂಡು,ದೇವದೇವನಾದ ಶ್ರೀಮ ನಾರಾಯಣನೇ ಆತನೆಂದು ತಿಳಿದು, ಸಂತೋಷದಿಂದ ನಮಸ್ಕರಿಸಿ ವಿಜ್ಞಾ ಪಿಸುವನು”, ಓ ಸತ್ಯೇಶ್ವರಾ! ಈಗಲಾದರೋ ನೀನು ಇಷ್ಟವರಗಳನ್ನು ಕೇಳಿಕೊಳ್ಳುವಂತೆ ನನ್ನನ್ನು ಪ್ರೇರಿಸುತ್ತಿರುವೆ. ಆದರೇನು ! ಲೋಕದಲ್ಲಿ ಸಿಪುರುಷರು ಮೊದಲಾದ ಸಮಸ್ತ ಪ್ರಾಣಿಗಳೂ, ನಿನ್ನ ಮಾಯೆಯಿಂ ದಲೇ ಮೋಹಿತಗಳಾಗಿ, ನಿರತಿಶಯಪುರುಷಾರ್ಥಭತನಾದ ನಿನ್ನನ್ನು ಮರೆ ತಿರುವುವು, ಮತ್ತು ಉತ್ತಮಪುರುಷಾರ್ಥವಾವುದೆಂಬುದನ್ನು ತಿಳಿಯದೆ ಮುಂದೆ ತಮಗೆ ಅನರ್ಥಹೇತುಗಳಾದ ವಿಷಯಗಳನ್ನೇ ಪುರುಷಾರ್ಥವೆಂದು ತಿಳಿದು ಭ್ರಮಿಸುವುವು. ಕೇವಲದುಃಖಕ್ಕೆ ಜನ್ಮಸ್ಥಾನವಾಗಿ, ಲೇಶಮಾ ತ್ರವೂ ಸುಖವಿಲ್ಲದ ಸಂಸಾರವನ್ನೇ ಸುಖವೆಂದು ತಿಳಿದು, ಆ ಸಂಸಾರದಲ್ಲಿ ಬಿದ್ದು ನರಳುವುವು. ಹೀಗೆ ಮೊದಲೇ ನಿನ್ನಿಂದ ವಂಚಿತರಾದ ನಮ್ಮಂತಹ ಜನರನ್ನು ಈಗ ತಿರುಗಿ ನೀನು ಇಷ್ಟವರಗಳನ್ನು ಕೊಡುವುದಾಗಿ ಪ್ರೋತಾ