ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫ ಅಧ್ಯಾ, ಆ೩.] ದಶಮಸ್ಕಂಧವು. ಎಂದು ಕೂಗುತಿದ್ದರು, ಕೆಲವು ವೀರಭಟರು ಅವನನ್ನು ಬೆನ್ನಟ್ಟಿ ಹಿಡಿಯು ವುದಕ್ಕೂ ಪ್ರಯತ್ನಿ ಸಿದರು. ಒಡನೆಯೇ ಅರ್ಜುನನು, ಧನುಸ್ಸನ್ನು ಕೈಗೆತ್ತಿ ಕೊಂಡು, ಆ ಭಟರೆಲ್ಲರನ್ನೂ ಓಡಿಸಿ, ಸಿಂಹವು ಸಣ್ಣಮೃಗಗಳ ಗುಂಪಿನಲ್ಲಿರು. ವ ಆಹಾರವನ್ನು ಹೊತ್ತುಕೊಂಡುಹೋಗುವಂತೆ, ಯಾರನ್ನೂ ಲಕ್ಷಮಾ ಡದೆ, ಸುಭದ್ರೆಯನ್ನು ಕರೆದುಕೊಂಡು ಹೋದನು, ಈ ಸಂಗತಿಯನ್ನು ಕೇ ಆ ಬಲರಾಮನಿಗೆ ಪರಕಾಲದ ಸಮುದ್ರದಂತೆ ಕೋಪವು ಉಕ್ಕಿ ಬಂದಿತು, ತಾನೇ ಅರ್ಜುನನಿಗಿದಿರಾಗಿ ನಿಂತು ಯುದ್ಧಮಾಡಬೇಕೆಂದು ಪ್ರಯತ್ನಿ ಸುವ ಸ್ಮರಲ್ಲಿ, ಕೃಷ್ಣನೂ, ಇತರ ಬಂಧುಮಿತ್ರರೂ ಬಂದು, ಆ ಬಲರಾಮನ. ಕಾಲನ್ನು ಹಿಡಿದು ಕೋಪಸಮಾಧಾನವನ್ನು ಮಾಡಿದರು. ಮಿಂಚಿ ಹೋದ ಕಾಠ್ಯಕ್ಕೆ ಇನ್ನು ಕೆಪಿಸಿ ಫಲವಿಲ್ಲವೆಂದು, ಕೊನೆಗೆ ಬಲರಾಮನೂ ಶಾಂತಿಯ ನ್ನು ವಹಿಸಿದನು, ಆಮೇಲೆ ತಾನೇ ಉತ್ಸಾಹದಿಂದ ವಧೂವರರಿಗೆ ಬೇಕಾದ ಉಡುಗೊರೆಗಳನ್ನೂ, ವಿಶೇಷವಾದ ಧನವನ್ನೂ , ಆನೆ, ಕುದುರೆ, ರಥ, ದಾಸಿ ಯರು, ಮುಂತಾದ ಪರಿಕರಗಳನ್ನೂ ತರಿಸಿ, ಬಳುವಳಿಯಾಗಿ ಕಳುಹಿಸಿಕೊ “ನು, ಪಾಂಡವರೂ ಯಾದವರೂ ಸಂತುಷ್ಟರಾದರು, ಇದೀಗ ಸುಭ. ದ್ರಾಹರಣವೃತ್ತಾಂತವು. w+ ಬಹುಳಾಶ್ವಶ್ರುತದೇವರ ವೃತ್ತಾಂತವು, +w ಓ ಪರೀಕ್ಷಿದ್ರಾಜಾ ! ಆ ಶ್ರೀಕೃಷ್ಣನಿಗೆ ತನ್ನ ಭಕ್ತರಲ್ಲಿರುವ ವಾತ್ಮ ಲ್ಯವೆಂತದೆಂಬುದನ್ನು ತೋರಿಸುವುದಕ್ಕೆ ಮತ್ತೊಂದು ನಿದರ್ಶನವನ್ನು ಹೇಳು. ವೆನು ಕಳು, ಕೃಷ್ಣನಿಗೆ ಶ್ರುತದೇವನೆಂಬ ಮಿತ್ರನೊಬ್ಬನಿದ್ದನು. ಅವನಿಗೆ ಕೃಷ್ಣನಲ್ಲಿ ಎಣೆಯಿಲ್ಲದ ಭಕ್ತಿಯಿದ್ದಿತು. ಆತನು ಯಾವುದಕ್ಕೂ ಹೆಚ್ಚಾಗಿ ಆಸೆಪಡತಕ್ಕವನಲ್ಲ ! ಶಾಂತಚಿತ್ತನು ! ಬಹಳ ವಿಷಯಗಳನ್ನು ತಿಳಿದವನು. ಆತನು ವಿದೇಹದೇಶದಲ್ಲಿದ್ದ ಮಿಥಿಲಾಪಟ್ಟಣದಲ್ಲಿ ಗೃಹಸ್ಥಾಶ್ರ ಮವನ್ನು ನಡೆಸುತ್ತಿದ್ದನು. ಪ್ರಯತ್ನ ವಿಲ್ಲದೆ ತಾನಾಗಿ ಲಭಿಸಿದುದಲ್ಲಿ ತೃಪ್ತಿ ನಾಗಿ, ಅದರಿಂದಲೇ ತನ್ನ ನಿತ್ಯಕರ್ಮಗಳನ್ನು ಕ್ರಮವಾಗಿ ನಡೆಸುತ್ತಿದ್ದನು. ಆಯಾದಿನಕ್ಕೆ ಬೇಕಾದ ಆಹಾರವು ಸಿಕ್ಕಿದರೆ ಸಾಕೆಂದು ತಿಳಿದು, ದೈವಾ ಥೀನವಾಗಿ ಲಭಿಸಿದುದರಲ್ಲಿ ತೃಪ್ತಿ ಹೊಂದುತ್ತಿದ್ದ ನೇಹೊರತು ಅದಕ್ಕಿಂತ'.