ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫ ಅಧ್ಯಾ, ೮೬.] ದಶಮಸ್ಕಂಧವು. ಇದಿರುಗೊಂಡು ಬಂದರು, ಅವರೆಲ್ಲರೂ ಪುಣ್ಯಶ್ಲೋಕಶಿಖಾಮಣಿಯಾದ ಆ ಕೃಷ್ಣನನ್ನು ಕಂಡು, ಸಂತೋಷದಿಂದರಳಿದ ಮುಖವುಳ್ಳವರಾಗಿ, ಆ ಕೃ ವ್ಯನಿಗೂ, ಅವನೊಡನೆ ಬಂದಿದ್ದ ಮಹರ್ಷಿಗಳಿಗೂ ಕೈಮುಗಿದು ನಮಸ್ಕ ರಿಸಿದರು. ಹಾಗೆಯೇ ಕೃಷ್ಣನಿಗೆ ಪರಮಭಕ್ತರಾದ ಬಹುಳಾಶ್ವ ಶ್ರುತದೇವ ರೂಕೂಡ, ತಮ್ಮನ್ನು ಅನುಗ್ರಹಿಸುವುದಕ್ಕಾಗಿಯೇ ಕೃಷ್ಣನು ಬಂದ ನೆಂದು ತಿಳಿದು ಮುಂದೆ ಬಂದು ಆ ಕೃಷ್ಣನ ಪಾದಗಳನ್ನು ಹಿಡಿದು ನಮಸ್ಕರಿ ಸಿದರು. ಅವರಿಬ್ಬರೂ ಆ ಕೃಷ್ಣನನ್ನೂ, ಅವನ ಸಹಚರರಾದ ಮಹರ್ಷಿಗ ಇನ್ನೂ ,ಏಕ ಕಾಲದಲ್ಲಿಯೇ ತಮ್ಮ ಮನೆಗೆ ಆತಿಥ್ಯಕ್ಕಾಗಿ ಬರಬೇಕೆಂದು ಕೈ ಮುಗಿದು ಬಹಳವಾಗಿ ಪ್ರಾರ್ಥಿಸಿ ನಿರ್ಬಂಧಿಸಿದರು. ಕೃಷ್ಣನು ಅವರಿಬ್ಬರ ಪ್ರಾರ್ಥನೆಯನ್ನೂ ಅಂಗೀಕರಿಸಿ, ಇಬ್ಬರಿಗೂ ಪ್ರಿಯವನ್ನುಂಟುಮಾಡುವು ದಕ್ಕಾಗಿ, ಅವರಿಗೆ ತಿಳಿಯದಂತೆ ಒಂದೇಕಾಲದಲ್ಲಿ ಎರಡು ರೂಪಗಳನ್ನು ತಾಳಿ, ಅವರಿಬ್ಬರ ಮನೆಗೂ ಬಂದನು. ರ್ದುರ್ಜನರ ಕಿವಿಗಳಿಗೂ ಆಗೋ ಚರನಾದ ಕೃಷ್ಣನು, ಅನೇಕ ಮಹರ್ಷಿಗಳೊಡನೆ ತನ್ನ ಮನೆಗೆ ಆತಿಥ್ಯ ಕ್ಕಾಗಿ ಬಂದುದನ್ನು ನೋಡಿ, ಬಹುಳಾಶ್ವನು, ಕಣ್ಣುಗಳಲ್ಲಿ ಆನಂದಬಾಷ್ಟ್ರ ವನ್ನು ಸುರಿಸುತ್ತ, ಭಕ್ತಿಯಿಂದ ಅವರೆಲ್ಲರಿಗೂ ಸುಖಾಸನವನ್ನು ಕೊಟ್ಟು, ಕುಳ್ಳಿರಿಸಿದನು. ಅವರ ಪಾದಗಳಿಗೆ ನಮಸ್ಕರಿಸಿ, ಆ ಪಾದಗಳನ್ನು ತೊಳೆದು, ಲೋಕಪಾವನವಾದ ಆ ತೀರವನ್ನು ತಿರಸಾಧಾರಣಮಾಡಿದನು. ತನ್ನ ಕುಟುಂಬವರ್ಗದವರೆಲ್ಲರಿಗೂ ಪ್ರೋಕಿಸಿದನು, ಗಂಧ, ಪುಷ್ಪ, ಧೂಪ ದೀಪ, ಅಘು, ಮಧುಪರ್ಕಾದಿಗಳಿಂದ ಯಥೋಕ್ತವಾಗಿ ಪೂಜಿಸಿದನು ಅವರೆಲ್ಲರಿಗೂ ಮೃಷ್ಟಾನ್ನ ಭೋಜನವನ್ನು ಮಾಡಿಸಿದನು. ಹೀಗೆ ಅವರೆಲ್ಲ ರನ್ನೂ ಭೋಜನಾದಿಗಳಿಂದ ತೃಪ್ತಿಗೊಳಿಸಿದಮೇಲೆ, ಕೃಷ್ಣನ ಪಾದಗ ಳನ್ನು ತನ್ನ ತೊಡೆಯಮೇಲಿಟ್ಟುಕೊಂಡು, ಮೆಲ್ಲಗೆ ಒತ್ತು, ಮೃದು ಮಧುರವಾಕ್ಯದಿಂದ ಹೀಗೆಂದು ಹೇಳುವನು.” ಓ ವಿಭೂ ! ನೀನು ಸಮಸ್ತ ಭೂತಗಳಿಗೂ ಅಂತರಾತ್ಮನು, ಸತ್ವಸಾಕ್ಷಿಯಾಗಿ ಸ್ವಯಂಪ್ರಕಾಶನೆನಿಸಿ ಕೊಂಡಿರುವೆ ! ಅದರಿಂದಲೇ ಈಗ ನನ್ನ ಉದ್ದೇಶವೇನೆಂಬುದನ್ನು ನೀನಾಗಿ ತಿಳಿದುಕೊಂಡು, ಯಾವಾಗಲೂ ನಿನ್ನ ಪಾದದರ್ಶನಕ್ಕಾಗಿಯೇ ತವಕಿಸು