ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫೮ ಶ್ರೀಮದ್ಭಾಗವತವು [ಅಧ್ಯಾ, ೮೩. ರಲ್ಲಿ ನೀನೂ ಪ್ರವೇಶಿಸುವೆ. ಪುರುಷನು ಮಲಗಿದ್ದಾಗ, ಜೀವಶರೀರಕನಾಗಿ ತನ್ನಲ್ಲಿ ನೆಲೆಗೊಂಡ ಪರಮಾತ್ಮನ ಸಂಕಲ್ಪದಿಂದ, ಆ ಜೀವನ ಮನೋರಥ ಗಳಿಗೂ, ಅವನ ಕಠ್ಯಗಳಿಗೂ ತಕ್ಕಂತೆ, ಆ ಮಲಗಿದ್ದ ಶರೀರಕ್ಕಿಂತಲೂ ಭಿನ್ನ ವಾಗಿ, ಆಯಾಕಾಲದಲ್ಲಿ ಮಾತ್ರ ಇದ್ದು ಹೋಗತಕ್ಕ ಸ್ವಪ್ನ ದೇಹವನ್ನು ಹೊಂದಿ, ಅವರಲ್ಲಿ ರಾಜ್ಯಾಭಿಷೇಕ ತಿರಸ್ಸೇದನಾದಿಗಳನ್ನನುಭವಿಸಿದರೂ, ವಾಸ್ತವದಲ್ಲಿ ಅವನಿಗೆ ಅದರ ಸಂಬಂಧವಿಲ್ಲದಿರುವಂತೆ ನೀನೂ ಈ ಜಗತ್ತನ್ನು ಸೃಷ್ಟಿಸಿ, ನಿನ್ನ ಸಂಕಲ್ಪದಿಂದ ಅದರಲ್ಲಿ ಅನುಪ್ರವೇಶಮಾಡಿದ್ದರೂ ಅದರ ದೋಷಕ್ಕೆ ನೀನು ಈಡಾಗುವವನಲ್ಲ ! ಕೃಷ್ಣಾ ! ನಿನ್ನ ಪುಣ್ಯಕಥೆಗೆ ಳನ್ನು ಯಾವಾಗಲೂ ಕಿವಿಯಿಂದ ಕೇಳತಕ್ಕವರಾಗಲಿ, ಬಾಯಿಂದ ಹೇಳ ತಕ್ಕವರಾಗಲಿ, ನಿನ್ನನ್ನು ಆಗಾಗ ಸಾಕ್ಷಾತ್ಕಾಗಿ ನೋಡತಕ್ಕವರಾಗಲಿ, ನಿನಗೆ ಆಗಾಗ ನಮಸ್ಕರಿಸತಕ್ಕವರಾಗಲಿ, ನಿನ್ನ ನಿಜವಾದ ಸ್ವರೂಪವೇ ನೆಂಬುದನ್ನು ತಮ್ಮ ಹೃದಯದಲ್ಲಿಯೇ ನೋಡಿ ತಿಳಿಯಬೇಕೇ ಹೊರತು, ಅದು ಯಾರ ಕಣ್ಣಿಗೂ ಗೋಚರಿಸಲಾರದು, ಕರ ಪಾಶದಿಂದ ಕದಲಿದ ಮನಸ್ಸುಳ್ಳವರಿಗೆ, ನೀನು ಅವರ ಹೃದಯದಲ್ಲಿದ್ದರೂ ದೂರದಲ್ಲಿದ್ದಂತೆ ಯೇ ಹೊರತು ಬೇರೆಯಲ್ಲ ! ಹೀಗೆ ಎಂತಹ ಮಹಾಯೋಗಿಗಳಿಗೂ ದುರ್ಲ ಭನಾದ ನೀನು, ಈಗ ನನ್ನ ಕಣ್ಣಿದಿರಾಗಿ ಗೋಚರಿಸಿದೆ. ರಜಸ್ತಮೋಗುಣ. ಗಳಿಂದ ಕದಲಿದ ಮನಸ್ಸುಳ್ಳವರಿಗೆ, ನೀನು ಹೃದಯದಲ್ಲಿಯೇ ಇದ್ದರೂ ನಿನ್ನ ಮಾಯಾಶಕ್ತಿಯಿಂದ ಅವರಿಗೆ ನಿನ್ನ ಸ್ವರೂಪವು ತಿಳಿಯದಂತೆ ಮರೆಸಿಡುವೆ ! ಆಧ್ಯಾತ್ಮತತ್ವವನ್ನು (ನಿನ್ನ ಯಾಥಾತ್ಮವನ್ನು) ತಿಳಿದ ವರಿಗೆ ಪ್ರಾಪ್ಯವಸ್ತುವಾದ ಪರಮಾತ್ಮನೂ, ಅದರಲ್ಲಿ ವಿಮುಖರಾದ ಅಜ್ಞಾನಿಗಳಿಗೆ ನಿಜಸಂಕಲ್ಪದಿಂದ ಮೃತ್ಯುವನ್ನುಂಟುಮಾಡತಕ್ಕವನೂ ನೀನೇ ಆಗಿರುವೆ ! ಕರ ಮೂಲಕವಾದ ಶರೀರಸಂಬಂಧವಿಲ್ಲದಿರುವಾಗಲೂ ಲೋಕೋಜೀವನಾರವಾಗಿ ಈ ದಿವ್ಯ ಮಂಗಳವಿಗ್ರಹವನ್ನು ಕೈ ಕೊಂಡು, ಮಾಯೆಯಿಂದ ಮೋಹಿತರಾದವರಿಗೆ ಮುಕ್ತಿಮಾರ್ಗವನು 'ಮರೆಸಿಡತಕ್ಕ ನಿನಗೆ ನಮಸ್ಕಾರವು, ದೇವಾ ! ನಾನು ನಿನ್ನ ಕೃತ್ಯನು! ನನ್ನಿಂದ ಈಗ ನಿನಗೆ ಯಾವ ವಿಧವಾದ ಸೇವೆಯು ನಡೆಯಬೇಕೆಂಬುದನ್ನು